ಕರಾವಳಿಯ ಜೀವನಾಡಿ ಮತ್ಸ್ಯಗಂಧಾ ಎಕ್ಸ್ ಪ್ರೆಸ್ ಗೆ ರಜತ ಸಂಭ್ರಮ: ಉಡುಪಿ ನಿಲ್ದಾಣದಲ್ಲಿ ಸಂಭ್ರಮಾಚರಣೆ

ಉಡುಪಿ: ದಿ. ಜಾರ್ಜ್ ಫೆರ್ನಾಂಡೀಸ್ ಅವರ ಕನಸಿನ ಕೂಸು, ಅವಿಭಜಿತ ದ.ಕ ಜಿಲ್ಲೆಯನ್ನು ಒಂದುಗೂಡಿಸುವ ಕೊಂಕಣ ರೈಲ್ವೆಯ “ಮತ್ಸ್ಯ ಗಂಧಾ” ಎಕ್ಸ್‌ಪ್ರೆಸ್ ರೈಲು ಈ ಮಾರ್ಗದಲ್ಲಿ ತನ್ನ ಓಡಾಟವನ್ನು 1998ರ ಮೇ 1ರಂದು ಪ್ರಾರಂಭಿಸಿತು. ಉಡುಪಿಯೂ ಕೂಡಾ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡು ರಜತ ಸಂಭ್ರಮವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಮತ್ಸ್ಯಗಂಧಾ ಎಕ್ಸ್‌ಪ್ರೆಸ್ ಕೂಡಾ 25 ವರ್ಷ ಪೂರ್ಣಗೊಳಿಸಿ ರಜತ ಮಹೋತ್ಸವವನ್ನು ಆಚರಿಸುತ್ತಲಿದೆ. ಈ ದಿನವನ್ನು ಅವಿಸ್ಮರಣೀಯವಾಗಿಸಲು ಉಡುಪಿ ರೈಲು ಯಾತ್ರಿ ಸಂಘವು ಇದನ್ನು ವಿಶೇಷ ರೀತಿಯಲ್ಲಿ ಆಚರಿಸಲು […]
ಮೇ 2 ರಂದು ಚುನಾವಣಾ ತರಬೇತಿ ಕಾರ್ಯಾಗಾರಕ್ಕೆ ತೆರಳುವ ಸಿಬ್ಬಂದಿಗಳಿಗೆ ಉಚಿತ ಬಸ್ ವ್ಯವಸ್ಥೆ

ಉಡುಪಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯಕ್ಕಾಗಿ ನೇಮಕ ಮಾಡಿರುವ ಪಿಆರ್‌ಓ, ಎಪಿಆರ್‌ಓ, ಪಿಓಗಳಿಗೆ ಮೇ 2 ರಂದು ನಡೆಯುವ ಕಾರ್ಯಾಗಾರಕ್ಕೆ ತೆರಳಲು ಜಿಲ್ಲಾಡಳಿತದ ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಬೈಂದೂರಿನ ಶಿರೂರು ಗ್ರೀನ್ ವ್ಯಾಾಲಿ ಇಂಟರ್‌ನ್ಯಾಷನಲ್ ಸ್ಕೂಲ್, ಕುಂದಾಪುದ ಭಂಡಾರ್ಕರ್ಸ್ ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜು ಉಡುಪಿಯ ಸೈಂಟ್ ಸಿಸಿಲಿಸ್ ಸ್ಕೂಲ್ ಬ್ರಹ್ಮಗಿರಿ, ಕಾಪು ದಂಡತೀರ್ಥ ಪಿ.ಯು. ಕಾಲೇಜು, ಕಾರ್ಕಳದ ಕ್ರೈಸ್ಟ್ ಕಿಂಗ್ ಪಿ.ಯು. ಕಾಲೇಜಿನಲ್ಲಿ ತರಬೇತಿ ನಡೆಯಲಿದೆ. ತರಬೇತಿಗೆ ನಿಯೋಜಿಸಿರುವ ಅಧಿಕಾರಿ, ಸಿಬಂದಿಗೆ […]
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 171.50 ರೂ ಕಡಿತ; ಗೃಹಬಳಕೆ ಯಥಾಸ್ಥಿತಿ

ನವದೆಹಲಿ: ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಸೋಮವಾರದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿವೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 171.50 ರೂ ಕಡಿತಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಆದಾಗ್ಯೂ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಯಥಾಸ್ಥಿತಿಯಲ್ಲಿದೆ. ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟದ ಬೆಲೆ ಈಗ 1,856.50 ರೂ ಆಗಿದ್ದರೆ, ಮುಂಬೈನಲ್ಲಿ 1,808 ರೂ, ಕೋಲ್ಕತ್ತಾದಲ್ಲಿ1,960.50 ರೂ ಹಾಗೂ […]
ಭಯೋತ್ಪಾದಕ ಕೃತ್ಯ ಪ್ರಚಾರಕ್ಕೆ ಬಳಕೆ ಹಿನ್ನೆಲೆ 14 ಮೊಬೈಲ್ ಸಂದೇಶ ಅಪ್ಲಿಕೇಶನ್ ಗಳನ್ನು ನಿಷೇಧಿಸಿದ ಕೇಂದ್ರ

ಹೊಸದಿಲ್ಲಿ: ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ದೊಡ್ಡ ಶಿಸ್ತುಕ್ರಮದಲ್ಲಿ, ಭಯೋತ್ಪಾದಕ ಗುಂಪುಗಳು ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಿತವಾಗಿ ತಮ್ಮ ಬೆಂಬಲಿಗರು ಮತ್ತು ಕಾರ್ಮಿಕರೊಂದಿಗೆ ಸಂವಹನ ನಡೆಸಲು ಮತ್ತು ಪಾಕಿಸ್ತಾನದಿಂದ ಸೂಚನೆಗಳನ್ನು ಸ್ವೀಕರಿಸಲು ಬಳಸುತ್ತಿದ್ದ 14 ಮೊಬೈಲ್ ಸಂದೇಶ ಅಪ್ಲಿಕೇಶನ್‌ಗಳನ್ನು ಕೇಂದ್ರವು ನಿಷೇಧಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಕ್ರಿಪ್‌ವೈಸರ್, ಎನಿಗ್ಮಾ, ಸೇಫ್‌ಸ್ವಿಸ್, ವಿಕ್ರಮ್, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಂಡ್‌ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಝಾಂಗಿ ಮತ್ತು ಥ್ರೀಮಾ ಸೇರಿವೆ. ಭದ್ರತಾ […]
ಸುಧಾಕರ ಪೂಜಾರಿ ಅಭಿಮಾನಿ ಸಂಘದ ವತಿಯಿಂದ ಸತ್ಯನಾರಾಯಣ ಪೂಜೆ, ಶೌರ್ಯ ಪ್ರಶಸ್ತಿ ವಿತರಣಾ ಸಮಾರಂಭ

ಹಿರಿಯಡ್ಕ: ಸುಧಾಕರ ಪೂಜಾರಿ ಅಭಿಮಾನಿ ಸಂಘ (ರಿ.) ಬೊಮ್ಮರಬೆಟ್ಟು, ಹಿರಿಯಡಕ 19ನೇ ವರ್ಷದ ವಾರ್ಷಿಕೋತ್ಸವದ ಸತ್ಯನಾರಾಯಣ ಪೂಜೆ ಮತ್ತು ಶೌರ್ಯ ಪ್ರಶಸ್ತಿ ವಿತರಣಾ ಹಾಗೂ ಸಂಸ್ಮರಣಾ ಕಾರ್ಯಕ್ರಮ ವು ಇಂದು ಸಂಜೆ ಬಸ್ತಿ ಕಲ್ಕುಡ ದೇವಸ್ಥಾನ ವಠಾರದಲ್ಲಿ ಜರುಗಲಿರುವುದು. ಕಾರ್ಯಕ್ರಮಗಳು ಸಂಜೆ ಗಂಟೆ 5.00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಸ್ಥಳ: ಬಸ್ತಿ ಕಲ್ಕುಡ ದೇವಸ್ಥಾನ ವಠಾರ ಸಂಜೆ ಗಂಟೆ 7.00ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ (ಅನ್ನ ಸಂತರ್ಪಣೆ ಮತ್ತು ಪೂಜಾ ವೆಚ್ಚ: ಗರಡಿಮನೆ ಬಂಧುಗಳು, ಬೊಮ್ಮಾರಬೆಟ್ಟು) ರಾತ್ರಿ […]