ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಶಾಸಕರೊಂದಿಗೆ ಸರಳಬೆಟ್ಟು ವಾರ್ಡಿನಲ್ಲಿ ಮತಯಾಚನೆ..

ಉಡುಪಿ: ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಅವರು ಉಡುಪಿ ಶಾಸಕರೊಂದಿಗೆ ಸರಳಬೆಟ್ಟು ವಾರ್ಡಿನ ಮತದಾರರನ್ನು ಎ.30 ರಂದು ಭೇಟಿ ಮಾಡಿದರು. ಬರುವ ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡಿದರ ಮೂಲಕ ಉಡುಪಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಂತೆ ಕೋರಿದರು.
ಹೆಜಮಾಡಿ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿದ ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ..

ಪಡುಬಿದ್ರಿ: ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಕಾಪು ವಿಧಾನಸಭಾ ಕ್ಷೇತ್ರದ ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿದರು. ಬರುವ ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡಿದರ ಮೂಲಕ ಕಾಪು ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಂತೆ ಕೋರಿದರು.
ಮಲ್ಪೆ ಬೀಚ್ ನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ: ಸಂಭ್ರಮಿಸಿದ ಜನತೆ

ಮಲ್ಪೆ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸುವಂತೆ ಚುನಾವಣಾ ಆಯೋಗ ನೀಡಿರುವ ಸಲಹೆಯು ಮಲ್ಪೆ ಬೀಚ್‌ನಲ್ಲಿ ಅನಾವರಣಗೊಂಡಿತು. ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕುರಿತು ರವಿವಾರ ಸಂಜೆ ಮಲ್ಪೆಬೀಚ್‌ನಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ನೃತ್ಯಗಾರರ ಜೊತೆ ಪ್ರೇಕ್ಷಕರೂ ಹೆಜ್ಜೆ ಹಾಕಿ ಸಂಭ್ರಮಿ ಸಿದರು. ಎಂಐಟಿ ವಿದ್ಯಾರ್ಥಿಗಳುಗಳು ವಂದೇ ಮಾತರಂ, ಮೈ ಭಾರತ್ ಹೂಂ ಹಾಗೂ ಮತದಾನ ಜಾಗೃತಿ ಕುರಿತು ಕಿರು ನಾಟಕ ಪ್ರದರ್ಶಿಸಿದರು. ಉಡುಪಿ ಬನ್ನಂಜೆಯ ಹಾಸ್ಟೆಲ್‌ನ […]
ಉಡುಪಿ: ಟಾಸ್ಕ್ ಕಂಪ್ಲೀಟ್ ನೆಪದಲ್ಲಿ ವ್ಯಕ್ತಿಗೆ 6 ಲ.ರೂ. ವಂಚನೆ

ಉಡುಪಿ: ಟೆಲಿಗ್ರಾಂ ಆಯಪ್‌ನಲ್ಲಿ ಟಾಸ್ಕ್ ಲಿಂಕ್ ಕಳುಹಿಸಿ ಟಾಸ್ಕ್ ಕಂಪ್ಲೀಟ್ ಮಾಡಿದಲ್ಲಿ ಶೇ.30 ರಿಂದ 40 ಹೆಚ್ಚುವರಿ ಹಣ ನೀಡುವುದಾಗಿ ನಂಬಿಸಿ 5.9ಲ.ರೂ. ವಂಚಿಸಲಾಗಿದೆ.ಬಡಗಬೆಟ್ಟು ನಿವಾಸಿ ಗೋಪಾಲ (29) ವಂಚನೆಗೊಳಗಾದವರು. ಎ.25 ರಿಂದ 27ರ ವರೆಗೆ ಒಟ್ಟು 5.90 ಲ.ರೂ. ಅನ್ನು ಆರೋಪಿಗಳ ವಿವಿಧ ಖಾತೆಗಳಿಗೆ ನೆಫ್ಟ್ ಮೂಲಕ ವರ್ಗಾಯಿಸಿಕೊಂಡು ಟಾಸ್ಕ್ ನೀಡದೆ ವಂಚಿಸಿದ್ದಾರೆ ಎಂದು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ| ಪೈ ಸತತ ಪ್ರಯತ್ನ ಶೀಲತೆಯಿಂದಾಗಿ ಜಗದ ಕಣ್ಣು ಮಣಿಪಾಲದತ್ತ: ಪೇಜಾವರ ಶ್ರೀ

ಮಣಿಪಾಲ: ಡಾ| ಟಿಎಂಎ ಪೈ ಅವರ ಸತತ ಪ್ರಯತ್ನ ಶೀಲತೆಯಿಂದಾಗಿ ಇಂದು ಮಣಿಪಾಲವನ್ನು ಪ್ರಪಂಚವೇ ಕಣ್ಣೆತ್ತಿ ನೋಡುವಂತಾಗಿದೆ ಮತ್ತು ಉಡುಪಿಗೆ ಮಣಿಪಾಲ ಒಂದು ಹೆಮ್ಮೆಯ ಸಂಕೇತವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಮಣಿಪಾಲ ಸಮೂಹ ಸಂಸ್ಥೆಗಳ ವತಿಯಿಂದ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ರವಿವಾರ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ (ಡಾ| ಟಿಎಂಎ ಪೈ ಅವರ 125ನೇ ಜನ್ಮದಿನ) ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀಪಾದರು, ಒಬ್ಬ ವ್ಯಕ್ತಿಯ ಜನ್ಮದಿನವನ್ನು ಸಾಮೂಹಿಕವಾಗಿ ಆಚರಿಸುವ ಹಿಂದೆ ಅವರು […]