ಕಾರ್ಕಳದಲ್ಲಿ ಕಾಂಗ್ರೆಸ್ ಬೃಹತ್ ಕಾಲ್ನಡಿಗೆ ಜಾಥ, ಸಮಾವೇಶ
ಕಾರ್ಕಳ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕಾಲ್ನಡಿಗೆ ಜಾಥ ಹಾಗೂ ಬೃಹತ್ ಸಮಾವೇಶ ಸ್ವರಾಜ್ ಮೈದಾನದಿಂದ ಬಂಡಿ ಮಠ ಬಸ್ ನಿಲ್ದಾಣದವರೆಗೆ ಇಂದು ನಡೆಯಿತು. ಸ್ವರಾಜ್ ಮೈದಾನದಿಂದ ಮಧ್ಯಾಹ್ನ 3 ಗಂಟೆಗೆ ಪ್ರಾರಂಭಗೊಂಡ ಬೃಹತ್ ಜಾಥ ಬಂಡಿಮಠ ಬಸ್ ನಿಲ್ದಾಣದವರೆಗೆ ಕಾಲ್ನಾಡಿಗೆಯಲ್ಲಿ ರೋಡ್ ಶೋ ಮೂಲಕ ಸಾಗಿ ಬಂದಿದೆ. ಪಕ್ಷದ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ಡಾಕ್ಟರ್ ಎಂ ವೀರಪ್ಪ ಮೊಯ್ಲಿ ಅಭ್ಯರ್ಥಿ ಮುನಿಯಾಲ್ ಉದಯ್ ಶೆಟ್ಟಿ ಮತ್ತು ಜಿಲ್ಲಾಧ್ಯಕ್ಷರಾದ ಅಶೋಕ್ […]
ಹಿರ್ಗಾನ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿದ ಸಚಿವ ಸುನಿಲ್ ಕುಮಾರ್
ಕಾರ್ಕಳ: ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದ ಹಿರ್ಗಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿದರು. ವಿಧಾನಸಭಾ ಚುನಾವಣೆ ಮೇ10ಕ್ಕೆ ನಡೆಯಲಿದ್ದು, ತಮ್ಮ ಅಮೂಲ್ಯವಾದ ಮತವನ್ನು ನೀಡುವುದರ ಮೂಲಕ ಕಾರ್ಕಳ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವಂತೆ ಕೋರಿದರು.
ಕಾರ್ಕಳ ಬಿಜೆಪಿಯಿಂದ ಬೃಹತ್ ಮತಪ್ರಚಾರ ಅಭಿಯಾನ
ಕಾರ್ಕಳ: ಬಿಜೆಪಿ ವತಿಯಿಂದ ವಿಶೇಷ ಮಹಾ ಪ್ರಚಾರ ಅಭಿಯಾನ ಕಾರ್ಕಳ ವಿಧಾನ ಸಭಾ ಕ್ಷೇತ್ರದಾದ್ಯಂತ ರವಿವಾರ ನಡೆಯಿತು. ಹಿರಿಯರು, ಕಿರಿಯರು, ಮಹಿಳೆಯರೂ ಎನ್ನದೆ ಹತ್ತು ಸಾವಿರಕ್ಕೂ ಮಿಕ್ಕಿದ ಕಾರ್ಯಕರ್ತರು ಮತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಗಮನ ಸೆಳೆಯಿತು. ಕಾರ್ಕಳ, ಹೆಬ್ರಿ ತಾಲೂಕುಗಳ 34 ಗ್ರಾಮ ಪಂಚಾಯತ್ ವ್ಯಾಪ್ತಿಯ 209 ಬೂತ್ಗಳಲ್ಲಿ, ಪ್ರತಿ ಬೂತ್ಗಳಲ್ಲಿ 75 ರಿಂದ 100 ಮಂದಿ ಕಾರ್ಯಕರ್ತರು ಸೇರಿ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಸಹಸ್ರಾರು ಕಾರ್ಯಕರ್ತರು ಕ್ಷೇತ್ರದ ಪ್ರತಿ ಮನೆಗಳಿಗೆ ತೆರಳಿ ಕೇಂದ್ರ ಹಾಗೂ ರಾಜ್ಯ […]
ಸರ್ವಜನರನ್ನು ಒಗ್ಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಾಮರ್ಥಯವುಳ್ಳ ಗುರ್ಮೆ ಗೆಲುವಿಗೆ ಶ್ರಮಿಸೋಣ : ಪ್ರಮೋದ್ ಮಧ್ವರಾಜ್
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಮತದಾರರು ಪ್ರಬುದ್ಧರಾಗಿದ್ದಾರೆ. ಜಾತಿವಾದಿಗಳಿಗೆ, ಕೋಮುವಾದಿಗಳಿಗೆ ಮತ ನೀಡದೇ ಸರ್ವಜಾತಿ, ಸರ್ವಧರ್ಮ ಮತ್ತು ಸರ್ವಜನರನ್ನೂ ಒಗ್ಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಾಮರ್ಥಯವುಳ್ಳ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಬಹುಮತಗಳಿಂದ ಗೆಲ್ಲಿಸಿ ಕೊಡುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಕಾಪು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರ ಪರವಾಗಿ ರವಿವಾರ ಪಡುಬಿದ್ರಿ, ಉಚ್ಚಿಲ, ಹೆಜಮಾಡಿ, 80 ಬಡಗುಬೆಟ್ಟು, […]
ಬೈಕಾಡಿ ಶ್ರೀ ಮಾಧವ ಮಂಗಳ ಸಭಾಂಗಣದಲ್ಲಿ ಪ್ರಸಾದ್ ರಾಜ್ ಕಾಂಚನ್ ಮುಂದಾಳತ್ವದಲ್ಲಿ ಮೊಗವೀರ ಮಹಿಳಾ ಸಭೆ..
ಉಡುಪಿ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮುಂದಾಳತ್ವದಲ್ಲಿ ಬೈಕಾಡಿ ಶ್ರೀ ಮಾಧವ ಮಂಗಳ ಸಭಾಂಗಣದಲ್ಲಿಂದು ಮೊಗವೀರ ಮಹಿಳಾ ಸಭೆಯು ನಡೆಯಿತು. ಈ ಸಂದರ್ಭದಲ್ಲಿ ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ,ಉದಯ ಸುವರ್ಣ, ನಾರಾಯಣ ಶ್ರೀಯಾನ್,ಸಂತೋಷ ಪೂಜಾರಿ, ರಘು ಶೆಟ್ಟಿ, ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.