ಕನ್ಯಾನ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ಕಾರ್ಕಳ: ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ದಿ. ನರಸಿಂಹ ನಾಯಕ್ ಅವರ ಪುತ್ರ ಕನ್ಯಾನ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಲಕ್ಷೀ ನಾರಾಯಣ್ ನಾಯಕ್ ಅವರು ಸುನೀಲ್ ಕುಮಾರ್ ಅವರ ವಿಕಾಸ ಕಛೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು. ಸುನೀಲ್ ಕುಮಾರ್ ಬಿಜೆಪಿ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಸಭೆಯಲ್ಲಿ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಗುರುದಾಸ್ ಶೆಣೈ ಹೆಬ್ರಿ, ದಿನೇಶ್ ಪೈ, ನವೀನ್ ನಾಯಕ್, ಮೊದಲಾದವರು ಉಪಸ್ಥಿತರಿದ್ದರು.
ಆಪರೇಶನ್ ಕಾವೇರಿ: ರಾತ್ರಿ ದೃಷ್ಟಿ ಕನ್ನಡಕಗಳನ್ನು ಬಳಸಿ ಭಾರತೀಯರನ್ನು ಸುಡಾನ್ ನಿಂದ ಪಾರು ಮಾಡಿದ ಭಾರತೀಯ ವಾಯುಸೇನೆ

ನವದೆಹಲಿ: ಸುಡಾನ್‌ನ ಸೇನೆ ಮತ್ತು ಅರೆಸೇನಾಪಡೆಯು ಅಧಿಕಾರಕ್ಕಾಗಿ ಹಿಂಸಾಚಾರದಲ್ಲಿ ತೊಡಗಿದ್ದು, ಇದು 400 ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿದೆ. ಹಿಂಸಾಚಾರ ಸಂತ್ರಸ್ತ ಸುಡಾನ್ ನಲ್ಲಿ ಕರ್ನಾಟಕವೂ ಸೇರಿದಂತೆ ಭಾರತದ ಹಲವಾರು ರಾಜ್ಯಗಳ ನಾಗರಿಕರು ಸಿಲುಕಿದ್ದು, ಸುಡಾನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ರಕ್ಷಿಸಲು ಭಾರತವು “ಆಪರೇಷನ್ ಕಾವೇರಿ” ಅನ್ನು ಪ್ರಾರಂಭಿಸಿತು. ಶುಕ್ರವಾರ, ಸುಡಾನ್ ನಲ್ಲಿ ಸಿಕ್ಕಿಬಿದ್ದ 135 ಭಾರತೀಯರನ್ನು ಹೊತ್ತ ಸಿ-130ಜೆ ವಿಮಾನದ ಎರಡನೇ ಬ್ಯಾಚ್ ಬಿಕ್ಕಟ್ಟಿನ ರಾಷ್ಟ್ರದಿಂದ ನಿರ್ಗಮಿಸಿದೆ. #OperationKaveri#ModiHainToMumkinHain Salute to our brave officers […]
ಕರಾವಳಿಯಲ್ಲಿ ಬೇಸಿಗೆಯಲ್ಲಿ ಬಿಯರ್ ಗೆ ಹೆಚ್ಚು ಡಿಮ್ಯಾಂಡ್ ಇದ್ದು ಬೀಯರ್ ಪೂರೈಕೆಯಲ್ಲಿ ಇಳಿಕೆ…!!

ಉಡುಪಿ: ಉಡುಪಿ, ದ.ಕನ್ನಡದಲ್ಲಿ ಬೇಸಿಗೆಯ ಕಾಲದಲ್ಲಿ ಬಿಯರ್ ಗೆ ಹೆಚ್ಚು ಡಿಮ್ಯಾಂಡ್ ಇದ್ದು, ಬೇಡಿಕೆಗೆ ಸ್ಪಂದಿಸಿ ಸೂಕ್ತ ರೀತಿಯ ಸರಬರಾಜು ಕಂಪೆನಿಯವರು ಮಾಡುತ್ತಿಲ್ಲ.ಇಲಾಖೆ, ಕೆಎಸ್‌ಬಿಸಿಎಲ್ ಹಾಗೂ ಡಿಪೋದವರ ಹತ್ತಿರ ವಿನಂತಿಸಿದ್ದೇವೆ. ಎಲ್ಲೂ ಕೂಡ ಸರಬರಾಜು ಆಗುತ್ತಿಲ್ಲ”ಎಂದು ಕರ್ನಾಟಕ ರಾಜ್ಯ ಮಧ್ಯ ಮಾರಾಟಗಾರರ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಗೋವಿಂದ ರಾಜ್ ಹೇಳಿದ್ದಾರೆ. ಕರಾವಳಿಯಲ್ಲಿ ಸೆಕೆಯಿಂದಾಗಿ ಬಿಯರ್ ಬೇಡಿಕೆ ಜಾಸ್ತಿಯಾಗಿದೆ.ಮಳೆಗಾಲದಲ್ಲಿ ದಿನಕ್ಕೆ 10 ಬಾಕ್ಸ್ ಖಾಲಿಯಾದರೆ,ಈಗ 30 ಬಾಕ್ಸ್ ಬಿಯರ್ ಖಾಲಿಯಾಗುತ್ತದೆ. ಆ ಬೇಡಿಕೆಗೆ ಸರಿಯಾಗಿ ಸರಬರಾಜಾಗುತ್ತಿಲ್ಲ. ಜಾಸ್ತಿ ಮಾರಾಟವಾಗುವ […]
ಮಂಗಳೂರು: ಇಂದು ಅಮಿತ್ ಶಾ ಭೇಟಿ; ಉಡುಪಿ- ಮಂಗಳೂರು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅವಿಭಜಿತ ಜಿಲ್ಲೆಗೆ ಭೇಟಿ ನೀಡಲಿದ್ದು ಬಿಜೆಪಿ ಚುನಾವಣಾ ಪ್ರಚಾರದ ಅಂಗವಾಗಿ ಟೌನ್ ಹಾಲ್ ನಿಂದ ನವಭಾರತ ವೃತ್ತದವರೆಗೆ ರೋಡ್ ಶೋ ಆಯೋಜಿಸಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಶನಿವಾರದಂದು ಮಧ್ಯಾಹ್ನ 3 ರಿಂದ 7 ರವರೆಗೆ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ವ್ಯತ್ಯಯವನ್ನು ಘೋಷಿಸಿದ್ದಾರೆ. ಶನಿವಾರದಂದು ನಗರ ಪೊಲೀಸರು ಜಾರಿಗೊಳಿಸಿದ ಸಂಚಾರ ಬದಲಾವಣೆಗಳು ಈ ಕೆಳಗಿನಂತಿವೆ: ಉಡುಪಿ-ಮಂಗಳೂರು ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್‌ಗಳು ಕೊಟ್ಟಾರ ಚೌಕಿ – ಕೆಪಿಟಿ – […]
ಇಂದ್ರಾಳಿ: ಬಾವಿಯಲ್ಲಿ ಮೃತದೇಹ ಪತ್ತೆ

ಉಡುಪಿ: ಇಂದ್ರಾಳಿಯ ರೈಲ್ವೇ ನಿಲ್ದಾಣದ ಬಳಿ ಇರುವ ಬಾವಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.ವ್ಯಕ್ತಿಯನ್ನು ನಿತ್ಯಾನಂದ ಶೆಟ್ಟಿಗಾರ್(47) ಎಂದು ಗುರುತಿಸಲಾಗಿದೆ. ರೈಲ್ವೇ ಪೊಲೀಸ್, ನಗರ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳ ಕಾರ್ಯಚರಣೆ ಮೂಲಕ ಶವವನ್ನು ಮೇಲಕ್ಕೆತ್ತಲು ನೆರವಾದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು. ವ್ಯಕ್ತಿ ರೈಲ್ವೇಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿ ಎಂದು ತಿಳಿದುಬಂದಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.