ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯದ ಮೂಲಕ ದೇಶದ ಸುರಕ್ಷತೆಯೊಂದಿಗೆ ಆಟವಾಡುತ್ತಿದೆ: ಅಮಿತ್ ಶಾ ವಾಗ್ದಾಳಿ
ಕಟಪಾಡಿ: ಕಾಂಗ್ರೆಸ್ ಪಕ್ಷವು ದೇಶದ ಸುರಕ್ಷತೆಯನ್ನು ವೋಟ್ ಬ್ಯಾಂಕ್ ರಾಜಕೀಯದ ಮೂಲಕ ಆಟವಾಡುತ್ತಿದೆ. ಬಿಜೆಪಿ ಪಕ್ಷವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ. ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲಾತಿ ಮತ್ತೆ ತರುತ್ತಾರೆ ಬಿಜೆಪಿ ಯಾವತ್ತೂ ತರಲ್ಲ. ಸಾಮಾಜಿಕ ನ್ಯಾಯದಲ್ಲಿ ಗುರುತರವಾದ ಗುರುಗಳಾಗಿ ಧರ್ಮರಕ್ಷಣೆಯನ್ನು ಮಾಡಿದವರು ನಾರಾಯಣಗುರುಗಳು. ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಪಿ ಎಫ್ ಐ ಬ್ಯಾನ್ ಮಾಡಿದ ಕೀರ್ತಿ ಬಿಜೆಪಿಗೆ ಇದೆ. ದಕ್ಷಿಣ ಭಾರತವನ್ನು ಸುರಕ್ಷಿತವಾಗಿಸಿದ್ದೇವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ […]
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಹೇಳಿಕೆಗೆ ತಿರುಗೇಟು ನೀಡಿದ ಸುನೀಲ್ ಕುಮಾರ್
ಕಾರ್ಕಳ: ಕಾಂಗ್ರೆಸ್ ಸಂಸ್ಕೃತಿ ಏನೆಂಬುದು ಮತ್ತೆ ಸಾಬೀತು ಪಡಿಸಿದೆ. ವಿಷ ಸರ್ಪ ಹೇಳಿಕೆ ನಾಗರೀಕ ಸಮಾಜಕ್ಕೆ ನೀಡುವ ಗೌರವವಲ್ಲ, ಪ್ರಧಾನ ಮಂತ್ರಿ ಗಳ ಕುರಿತಂತೆ ಇಡಿ ಕಾಂಗ್ರೆಸ್ ಪಕ್ಷ ದಲ್ಲಿಯೆ ವಿಷವಿದೆ, ಕಾಂಗ್ರೆಸ್ ಪಕ್ಷದ ಮನಸ್ಸು, ಭರವಸೆಗಳು, ನಡವಳಿಕೆಗಳು ವಿಷಮಯವಾಗಿದೆ. ವಿಷಪೂರಿತ ಮನಸ್ಸುಗಳಿಂದ ಮಾತ್ರ ವಿಷಸರ್ಪ ಹೇಳಿಕೆ ಬರುತ್ತವೆ ನರೇಂದ್ರ ಮೋದಿ ಜಗತ್ತಿನ ನಾಯಕ, ಉತ್ತಮ ಆಡಳಿತ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಈ ಹೇಳಿಕೆಗಳನ್ನು ಸಮಾಜ ಸ್ವೀಕರಿಸುವುದಿಲ್ಲ ಎಂದು ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳ […]
ಕೇಂದ್ರ ಗೃಹ ಸಚಿವರಿಗೆ ಕಡೆಗೋಲು ಕೃಷ್ಣನ ಸ್ಮರಣಿಕೆಯ ಗೌರವ
ಉಡುಪಿ :ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಉಡುಪಿಗೆ ಭೇಟಿ ನೀಡಿದಾಗ ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಕೆ. ರಾಘವೇಂದ್ರ ಕಿಣಿ ಉಡುಪಿ ಕಡೆಗೋಲು ಕೃಷ್ಣನ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಸಹವಕ್ತಾರ ಗಿರೀಶ್ ಅಂಚನ್, ಬಿಜೆಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ರಾಘವೇಂದ್ರ ಉ, ಶಿವರಾಮ್ ಕಾಡಿಮಾರ, ಚಂದ್ರಶೇಖರ್ ಪ್ರಭು ಇನ್ನಿತರು ಉಪಸ್ಥಿತರಿದ್ದರು.
ಜೆಇಇ ಮೈನ್ 2ನೇ ಹಂತದ ಅಂತಿಮ ಫಲಿತಾಂಶ: ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ
ಕಾರ್ಕಳ : ರಾಷ್ಟ್ರಮಟ್ಟದಲ್ಲಿ ನಡೆಯುವ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಮೈನ್ 2ನೇ ಫೇಸ್ನ ಅಂತಿಮ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಪ್ರಣವ್ ಗುಜ್ಜರ್ ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್ ಪಡೆಯುವುದರ ಜೊತೆಗೆ, ಗಣಿತಶಾಸ್ತ್ರದಲ್ಲಿ 99.5756 ಪರ್ಸಂಟೈಲ್ ಮತ್ತು ರಸಾಯನಶಾಸ್ತ್ರದಲ್ಲಿ 99.3912 ಪರ್ಸಂಟೈಲ್ನೊಂದಿಗೆ ಒಟ್ಟು 99.8421730 ಪರ್ಸಂಟೈಲ್ ಗಳಿಸಿಕೊಂಡು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಪ್ರಣವ್ ಗುಜ್ಜರ್ 99.84217 ಪರ್ಸಂಟೈಲ್, ಶ್ರೇಯಸ್ ಆರ್ ಗೌಡ 98.89945 ಪರ್ಸಂಟೈಲ್, ಧನ್ವಿತ್ ನಾಯಕ್ 98.8703 ಪರ್ಸಂಟೈಲ್, ಸಮೃದ್ಧ್ ನೆಲ್ಲಿ 98.84006 […]
ಮಂಗಳೂರು: ಭೀಮಾ ಜ್ಯುವೆಲ್ಲರ್ಸ್ ನಲ್ಲಿ ನೇರ ಸಂದರ್ಶನ
ಮಂಗಳೂರು: ಭೀಮಾ ಜ್ಯುವೆಲ್ಲರ್ಸ್ ಬೆಂಗಳೂರು ಮಳಿಗೆಗೆ ಕ್ಯಾಷಿಯರ್, ಫೀಲ್ಡ್ ಮತ್ತು ಮಾರ್ಕೆಂಟಿಗ್ ಸ್ಟಾಫ್, ಸೇಲ್ಸ್ ಸ್ಟಾಫ್ ಹಾಗೂ ಆಫೀಸ್ ಅಸಿಸ್ಸ್ಟೆಂಟ್ ಹುದ್ದೆಗಳಿಗಾಗಿ ಅಭ್ಯರ್ಥಿಗಳ ಅವಶ್ಯಕತೆ ಇದ್ದು, ಚಿನ್ನಾಭರಣ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವವಿರುವವರು ಮೇ 2 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಗರದ ಬೆಂದೂರಿನಲ್ಲಿರುವ ಎಸ್.ಸಿಎಸ್ ಹಾಸ್ಪಿಟಲ್ ಬಳಿ ಇರುವ ಭೀಮಾ ಸಂಸ್ಥೆಯ ಮಳಿಗೆಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು ಕನ್ನಡ ಬಲ್ಲವರಾಗಿರಬೇಕು. ಜೊತೆಗೆ ಮಲೆಯಾಳಿ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ […]