ಕಾಪು ದಂಡತೀರ್ಥ ಶಾಲೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು…!!

ಕಾಪು : ರಾ.ಹೆ. 66ರ ಉಳಿಯಾರಗೋಳಿ ದಂಡತೀರ್ಥ ಶಾಲೆಯ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಉಡುಪಿ ಕಡೆಯಿಂದ ಕಾಪು ಕಡೆಗೆ ಸಾಗುತ್ತಿದ್ದ ಬಿಳಿ ಬಣ್ಣದ ಸ್ವಿಫ್ಟ್‌ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು ಕಾರಿನಲ್ಲಿದ್ದ ಚಾಲಕ ಮತ್ತು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದೊಂದಿಗೆ ಪಾರಾಗಿದ್ದಾರೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಉಡುಪಿ ಕೊರಂಗ್ರಪಾಡಿ ಪರಿಸರದಲ್ಲಿ ಪೂರ್ವಾನುಮತಿಯಿಲ್ಲದೆ ಡಿಜೆ ಸೌಂಡ್‌… ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು..

ಉಡುಪಿ:ಕೊರಂಗ್ರಪಾಡಿ ಪರಿಸರದಲ್ಲಿ ಪೂರ್ವಾನುಮತಿ ಇಲ್ಲದೆ ಡಿಜೆ ಸೌಂಡ್‌ ಹಾಕಿ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಪ್ರಕರಣ ದಾಖಲಾಗಿದೆ. ಎ.27ರಂದು ಕೊರಂಗ್ರಪಾಡಿ ಗ್ರಾಮದ ಪಿಲಿಚಾಮುಂಡಿ ದೇವಸ್ಥಾನದ ಬಳಿ ಅಶೋಕ್‌ ಅವರ ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಡಿ.ಜೆ.ಸೌಂಡ್ಸ್‌ ಹಾಕಿಕೊಂಡು ನೃತ್ಯ ಮಾಡಲಾಗುತ್ತಿತ್ತು. ಸ್ಥಳದಲ್ಲಿದ್ದ ಸೌಂಡ್‌ ಬಾಕ್ಸ್‌ ಸಹಿತ ಇತರ ಪರಿಕರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಮೆಂಬರ್‌ಶಿಪ್‌ ಕೊಡಿಸುವುದಾಗಿ ಹೇಳಿ 5 ಲ.ರೂ. ವಂಚನೆ

ಮಂಗಳೂರು: ವೈದ್ಯಕೀಯ ವಿಜ್ಞಾನ ಅಕಾಡೆಮಿಯೊಂದರ ಮೆಂಬರ್‌ಶಿಪ್‌ ಮಾಡಿಸಿಕೊಡುವುದಾಗಿ ನಂಬಿಸಿ 5 ಲ.ರೂ. ಪಡೆದು ವಂಚಿಸಿರುವ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ವ್ಯಕ್ತಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು “ಪೋಸ್ಟ್‌ ಗ್ರಾಜುವೇಟ್‌ ಅಕಾಡೆಮಿ ಆಫ್ ಮೆಡಿಕಲ್‌ ಸಯನ್ಸ್‌’ನಿಂದ ಮಾತನಾಡುತ್ತಿದ್ದು ಫೆಲೋ ಆಫ್ ರಾಯಲ್‌ ಕಾಲೇಜ್‌ ಆಫ್ ಸರ್ಜನ್ಸ್‌ನಲ್ಲಿ ಮೆಂಬರ್‌ಶಿಪ್‌ ಮಾಡಿಕೊಡುವುದಾಯೂ ಅದಕ್ಕೆ ಮೊದಲ ಹಂತದಲ್ಲಿ 1.50 ಲ.ರೂ ಪಾವತಿಸುವಂತೆಯೂ ತಿಳಿಸಿದ್ದ. ಅದರಂತೆ ದೂರುದಾರ ವ್ಯಕ್ತಿ 1.50 ಲ.ರೂ. ವರ್ಗಾಯಿಸಿದ್ದರು. ಬಳಿಕ ಅಪರಿಚಿತ ವ್ಯಕ್ತಿ ಮತ್ತೆ ಹಂತ […]

ಮೀನು ಮುಟ್ಟಿದ ಕಾರಣಕ್ಕೆ ಮಹಾಲಕ್ಷ್ಮಿ ದೇವಸ್ಥಾನ ಪ್ರವೇಶಿಸಲು ನಿರಾಕರಿಸಿದ ರಾಹುಲ್ ಗಾಂಧಿ..!

ಉಡುಪಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಪು ತಾಲೂಕಿನ ಉಚ್ಚಿಲದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮೀನುಗಾರ ಮಹಿಳೆಯೊಬ್ಬರು ಉಡುಗೊರೆಯಾಗಿ ಅಂಜಲ್ ಮೀನನ್ನು ನೀಡಿದ್ದರು. ಮೀನು ಸ್ವೀಕರಿಸಿ ಮಹಿಳೆಯೊಂದಿಗೆ ಫೋಟೋ ತೆಗೆಸಿಕೊಂಡ ಬಳಿಕ ಮೀನು ಮುಟ್ಟಿದ ಕಾರಣಕ್ಕೆ ರಾಹುಲ್ ಮಹಾಲಕ್ಷ್ಮಿ ದೇವಸ್ಥಾನ ಪ್ರವೇಶಿಸಲು ನಿರಾಕರಿಸಿದ ಘಟನೆ ನಡೆದಿದೆ. ಏಪ್ರಿಲ್ 27 ರಂದು ಉಚ್ಚಿಲದಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ರಾಹುಲ್ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೀನುಗಾರರೊಂದಿಗಿನ ಸಮಾವೇಶದ ಕೊನೆಯಲ್ಲಿ ಮೀನುಗಾರ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ ಬೃಹತ್ ಗಾತ್ರದ […]

ಏ. 29 ರಂದು ವಿದ್ಯುತ್ ವ್ಯತ್ಯಯ

ಉಡುಪಿ: 33/11 ಕೆ.ವಿಜಿ.ಐ.ಎಸ್‌ಉಪಕೇಂದ್ರದಿಂದ ಹೊರಡುವ 11 ಕೆ.ವಿ ಕೆದೂರು ಮಾರ್ಗದಲ್ಲಿ ಹೆಚ್.ಟಿ ವಾಹಕ ಬದಲಾವಣೆ, ಟ್ರೀ ಟ್ರಿಮ್ಮಿಂಗ್ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕೆದೂರು, ಉಳ್ತೂರು, ಶಾನಾಡಿ ಮತ್ತು ಮಲ್ಯಾಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಪ್ರಿಲ್ 29 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.