ಮ್ಯಾಂಗ್ರೋವ್‌ ಕಾಡುಗಳ ಮಧ್ಯೆಯೂ ಮತದಾನ ಜಾಗೃತಿ: ಜಿಲ್ಲಾ ಸ್ವೀಪ್ ವತಿಯಿಂದ ವಿನೂತನ ಕಾರ್ಯ

ಮತದಾನ ಪ್ರಮಾಣ ಹೆಚ್ಚಿಸುವ ಕುರಿತಂತೆ ಸ್ವೀಪ್‌ ವತಿಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗ ಅತ್ಯಂತ ವಿಶಿಷ್ಟ ರೀತಿಯಲ್ಲಿ ಹೊಳೆಯಲ್ಲಿ ಕಯಾಕಿಂಗ್‌ ಮೂಲಕ ತೆರಳಿ ಮ್ಯಾಂಗ್ರೋವ್‌ ಕಾಡುಗಳ ಮಧ್ಯೆ ಕಯಾಕ್‌ ಗಳಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲಾಗಿದೆ. ಜಿಲ್ಲಾಡಳಿತ ಉಡುಪಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಬುಧವಾರ, ಸಾಲಿಗ್ರಾಮದ ಕಯಾಕಿಂಗ್‌ ಪಾಯಿಂಟ್‌ ಬಳಿ , ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು , ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರು […]

ಬೆಲೆ ಏರಿಕೆ, ಧರ್ಮ ಧರ್ಮಗಳ ನಡುವೆ ಸಂಘರ್ಷದಿಂದ ಬಡ ಮಧ್ಯಮ ವರ್ಗದ ರಕ್ತ ಹೀರುವ ಕೆಲಸವನ್ನು ಬಿಜೆಪಿ‌ ಮಾಡಿದೆ- ವಿನಯ್ ಕುಮಾರ್ ಸೊರಕೆ

ಉಡುಪಿ:ಬೆಲೆ ಏರಿಕೆ, ಧರ್ಮ ಧರ್ಮಗಳ ನಡುವೆ ಸಂಘರ್ಷದಿಂದ ಬಡ ಮಧ್ಯಮ ವರ್ಗದ ರಕ್ತವನ್ನು‌ ಹೀರುವ ಕೆಲಸವನ್ನು‌ ಬಿಜೆಪಿ ಮಾಡಿದೆ ಎಂದು ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ ಈ ಕುರಿತು ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದ ಬಡ ಮಧ್ಯಮ ವರ್ಗದ ಪಕ್ಷ. ಬಡ ಮಧ್ಯಮ ವರ್ಗದವರಿಗೆ ಬಹಳಷ್ಟ ಯೋಜನೆಗಳನ್ನು ತಂದಿದ್ದು ಅವೆಲ್ಲಾ ಯೋಜನೆಗಳು ನಿಂತು ಹೋಗಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಇನ್ನು‌ ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಬಡ ಮಧ್ಯಮ ವರ್ಗಕ್ಕೆ ಆರ್ಥಿಕ ವಾಗಿ ಸದ್ರಢರಾಗಬೇಕಾದರೆ […]

ಮಣಿಪಾಲ: ಮೊಟ್ಟಮೊದಲ ಸ್ಕೂಬಾ ಸ್ಕೂಲ್ ಮತ್ತು ಮರೇನಾ ಬೌಲ್ಡರ್ ಉದ್ಘಾಟನೆ

ಮಣಿಪಾಲ: ಸೆಂಟರ್ ಫಾರ್ ವೈಲ್ಡರ್ನೆಸ್ ಮೆಡಿಸಿನ್ ಸಹಯೋಗದೊಂದಿಗೆ  ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲವು ಭಾರತದ ವಿಶ್ವವಿದ್ಯಾನಿಲಯವೊಂದರಲ್ಲಿ ಮೊಟ್ಟಮೊದಲ ಸ್ಕೂಬಾ ಡೈವಿಂಗ್ ಸ್ಕೂಲ್ ಅನ್ನು ಉದ್ಘಾಟಿಸಿತು. ಮಣಿಪಾಲ್ ಸ್ಕೂಬಾ ಸ್ಕೂಲ್ ಮತ್ತು ಕ್ರೀಡಾ ಕ್ಲೈಂಬಿಂಗ್ ವಾಲ್- ಮರೇನಾ ಬೌಲ್ಡರ್ ಅನ್ನು ಮಾಹೆ ಮಣಿಪಾಲದ ಸಹ ಕುಲಾಧಿಪತಿಗ ಡಾ.ಎಚ್.ಎಸ್.ಬಲ್ಲಾಲ್, ಮಾಹೆಯ ಉಪಕುಲಪತಿ ಡಾ.ಎಂ.ಡಿ.ವೆಂಕಟೇಶ್ ಮತ್ತು ಸಹ ಉಪಕುಲಪತಿ ಡಾ.ಶರತ್ ರಾವ್ ಅವರು ಉದ್ಘಾಟಿಸಿದರು. ಮಣಿಪಾಲ್ ಸ್ಕೂಬಾ ಸ್ಕೂಲ್ ಭಾರತದಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಉತ್ಸಾಹಿಗಳಿಗೆ […]

ಸಚಿವ ಸುನಿಲ್ ಕುಮಾರ್ ಕುಕ್ಕುಂದೂರು ಗ್ರಾಮಕ್ಕೆ ಭೇಟಿ

ಕಾರ್ಕಳ: ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ವಿಧಾನಸಭಾ ಕ್ಷೇತ್ರದ ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರನ್ನು ಎ.27 ರಂದು ಭೇಟಿ ಮಾಡಿದರು. ಬರುವ ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಕಾರ್ಕಳವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವಂತೆ ಕೋರಿದರು.

ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿ: ನ್ಯಾ.ಶಾಂತವೀರ ಶಿವಪ್ಪ

ಉಡುಪಿ: ಮೇ 10 ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ, ತಮ್ಮ ಮತವನ್ನು ಮಾರಿಕೊಳ್ಳದೇ, ಉತ್ತಮ ಅಭ್ಯರ್ಥಿಗೆ ಮತಚಲಾಯಿಸುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು. ಅವರು ಗುರುವಾರ ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ, ಮತದಾನ ಜಾಗೃತಿ ಸಾರುವ ಟ್ಯಾಬ್ಲೋ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. […]