ಏ.30 ರಂದು ಔರಾ ಕೆಫೆ ಶಾಪ್ ಉದ್ಘಾಟನೆ
ಉಡುಪಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿಯ ಜಿ ಬೀ ಪಂತ್ ರಸ್ತೆಯಲ್ಲಿರುವ ಗ್ರಾಸ್ ಲಾಂಡ್ ಕಾಂಪ್ಲೆಕ್ಸ್ ನಲ್ಲಿ ಔರ ಕೆಫೆ ಶಾಪ್ ಏಪ್ರಿಲ್ 30 ರಂದು ಬೆಳಿಗ್ಗೆ 11.30 ಕ್ಕೆ ಶುಭಾರಂಭಗೊಳ್ಳಲಿದೆ. ಕೆಫೆಯಲ್ಲಿ ಮನೆಯಲ್ಲೇ ತಯಾರಿಸಿದ ಐಸ್ ಕ್ರೀಮ್, ಬೇಕರಿ ಉತ್ಪನ್ನ, ಚಾಕೋಲೇಟ್, ಪೆಸ್ಟ್ರಿ ದೊರೆಯುತ್ತವೆ.
ದಾನಿಗಳ ಮುಂದೆ ಕೈ ಚಾಚಿದ ಬಡ ಸಹೋದರಿಗೆ ಬೇಕಿದೆ ಸಹೃದಯಿಗಳ ಸಹಾಯ ಹಸ್ತ
ಸಳ್ಳೆಕಟ್ಟೆ ಬಾದ್ಲು, ಕುಚ್ಚೂರು ಗ್ರಾಮದ 40 ವರ್ಷ ಪ್ರಾಯದ ಜಯಮಾಲ ಎನ್ನುವವರು 8 ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಇವರಿಗೆ ಸುಮಾರು 2 ವರ್ಷದಿಂದ ಈಚೆಗೆ ಇವರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಕೆ.ಎಂ.ಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಇವರಿಗೆ ಸುಮಾರು 4 ಲಕ್ಷಕ್ಕೂ ಮೀರಿ ಖರ್ಚು ಮಾಡಿದ್ದು, ಇನ್ನೂ 6 ಲಕ್ಷದ ಅವಶ್ಯಕತೆ ಇದ್ದು ಕಡು ಬಡವರಾದ ಇವರಿಗೆ ಚಿಕಿತ್ಸೆ ವೆಚ್ಚವನ್ನು ಭರಿಸಲು ಅಸಾಧ್ಯವಾಗಿದ್ದು ದಯಮಾಡಿ ಎಲ್ಲ ಮಾನವೀಯ ಬಂಧುಗಳು […]
ಏ.29: ಚುನಾವಣಾ ಪ್ರಚಾರಕ್ಕಾಗಿ ಕಾಪು, ಬೈಂದೂರಿಗೆ ಅಮಿತ್ ಶಾ
ಉಡುಪಿ: ರಾಜ್ಯ ವಿಧಾನಸಭಾ ಚುನಾವಣೆ ರಂಗೇರಿದ್ದು ರಾಜ್ಯಕ್ಕೆ ಪಕ್ಷಗಳ ಘಟಾನುಘಟಿ ನಾಯಕರು ಭೇಟಿ ನೀಡುತ್ತಿದ್ದು ಏಪ್ರಿಲ್ 29ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಉಡುಪಿ ಜಿಲ್ಲೆಗೆ ಆಗಮಿಸಲಿದ್ದು ಕಾಪು ಮತ್ತು ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಏಪ್ರಿಲ್ 29 ರಂದು ಮಧ್ಯಾಹ್ನ 2.20 ಕ್ಕೆ ಕೊಡಗು ಜಿಲ್ಲೆಯಿಂದ ಹೆಲಿಕಾಪ್ಟರ್ ಮೂಲಕ ಆದಿ ಉಡುಪಿ ಹೆಲಿಪ್ಯಾಡ್ ಗೆ ಆಗಮಿಸುವ ಅಮಿತ್ ಶಾ 2.30 ಕ್ಕೆ ಕಟಪಾಡಿ ಗ್ರೀನ್ ವ್ಯಾಲಿ ಮೈದಾನದಲ್ಲಿ ಉಡುಪಿ ಮತ್ತು ಕಾಪು ಬಿಜೆಪಿ ಅಭ್ಯರ್ಥಿಗಳಾದ […]
ಮೇ 10ರಂದು ಚುನಾವಣೆ ನಡೆಯಲಿರುವ ಹಿನ್ನೆಲೆ – ಅಬಕಾರಿ ಅಕ್ರಮ ತಡೆಗಟ್ಟಲು ವಿಶೇಷ ತಂಡಗಳ ರಚನೆ…!
ಉಡುಪಿ, ಎ.26: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ 10ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ನಕಲಿ ಮದ್ಯಗಳ ತಯಾರಿಕೆ ಹಾಗೂ ವಿತರಣೆ ನಡೆಯುವ ಸಾಧ್ಯತೆ ಇರುವ ಕಾರಣ, ಇವುಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆ ವಿಶೇಷ ತಂಡಗಳನ್ನು ರಚಿಸಲಿದೆ. ಮತದಾರರನ್ನು ಪ್ರಭಾವಿಸಲು ನಕಲಿ/ ಕಳಪೆ ಮಟ್ಟದ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಗಳನ್ನು ತಯಾರಿಸಿ, ಸಾಗಾಣಿಕೆ ಹಾಗೂ ಶೇಖರಣೆ ಮಾಡಿ, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸುವ ಸಾಧ್ಯತೆ ಇದ್ದು, ಇದನ್ನು ಸೇವನೆ ಮಾಡಿದವರ ಆರೋಗ್ಯದ ಮೇಲೆ […]
ಮಣಿಪಾಲ ಪೊಲೀಸರ ಕಾರ್ಯಾಚರಣೆ: ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ವಶ – ವಿದ್ಯಾರ್ಥಿ ಸೇರಿ 3 ಮಂದಿ ಡ್ರಗ್ ಪೆಡ್ಲರ್‌ಗಳ ಬಂಧನ..
ಉಡುಪಿ: ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ 22.11 ಗ್ರಾಂ ತೂಕದ 2.30 ಲ.ರೂ. ಮೌಲ್ಯದ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಓರ್ವ ವಿದ್ಯಾರ್ಥಿ ಸೇರಿದಂತೆ 3 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಮೂಲತಃ ಮಹಾರಾಷ್ಟ್ರ ನಿವಾಸಿ, ಮಣಿಪಾಲದ ಎಂಐಟಿ ವಿದ್ಯಾರ್ಥಿ ಅಕ್ಷಯ್ ಕುಮಾವತ್ (36) ಬೆಂಗಳೂರಿನ ಸರ್ಜಾಪುರ ನಿವಾಸಿ ಶ್ರೀನಿವಾಸ ಗೌಡ (31), ಬಾಣಸವಾಡಿ ನಿವಾಸಿ ಐಸಾಕ್ ಶ್ಯಾಮ್ (29) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳು ಉಡುಪಿ ಮತ್ತು ಮಣಿಪಾಲ ನಗರದ ವಿದ್ಯಾರ್ಥಿಗಳಿಗೆ […]