ಹಿರ್ಗಾನ: ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟನೆ

ಕಾರ್ಕಳ: ಕೊರೊನಾ, ಪ್ರಾಕೃತಿಕ ಅವಘಡ ಸಂಭವಿಸಿ ಕ್ಷೇತ್ರದ ಜನ ಸಂಕಷ್ಟಕ್ಕೆ ಒಳಗಾಗಿ ನೋವಿನಲ್ಲಿದ್ದ ವೇಳೆ ಗುಹೆ ಸೇರಿಕೊಂಡಿದ್ದ ಕಾಂಗ್ರೆಸ್ ಈಗ ಚುನಾವಣೆ ವೇಳೆ ಯಾವ ಮುಖ ಹೊತ್ತುಕೊಂಡು ಜನರ ಬಳಿಗೆ ಹೋಗಿ ಮತ ಯಾಚಿಸುತ್ತಿದೆ? 5 ವರುಷಕ್ಕೊಮ್ಮೆ ಜನರ ಮನೆಬಾಗಿಲಿಗೆ ಬರುವ ಕಾಂಗ್ರೆಸ್ಸನ್ನು ಕ್ಷೇತ್ರದ ಜನ ತಿರಸ್ಕರಿಸಬೇಕು ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ಕರೆ ನೀಡಿದರು. ಹಿರ್ಗಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಜನರ ಕಷ್ಟ-ಕಾರ್ಪಣ್ಯ ನೋವುಗಳಲ್ಲಿ ಬಿಜೆಪಿ […]

ಕಡಿಯಾಳಿ ವಾರ್ಡ್ ಕಾಂಗ್ರೆಸ್ ಸಭೆ

ಉಡುಪಿ: ನಮಗೆ ಪ್ರಸಾದ್ ರಂತಹ ವಿದ್ಯಾವಂತ ನಾಯಕನ ಅಗತ್ಯವಿದೆ. ಜನರಿಗೆ ಬೇಕಾದ ಉತ್ತಮ ವಿಚಾರಗಳಿಗೆ ಮಾರ್ಗದರ್ಶನ ಮಾಡುವ ಕೌಶಲ್ಯ ಪ್ರಸಾದ್ ರಾಜ್ ಕಾಂಚನ್ ಅವರಿಗಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಭಾಕರ್ ನಾಯಕ್ ಹೇಳಿದರು. ಅವರು ಸೋಮವಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಕಡಿಯಾಳಿ ವಾರ್ಡ್ ಸಭೆಯ ಸಂದರ್ಭ ತಮ್ಮ ಸ್ವಗೃಹದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ವಿ.ಸಭಾ ಚುನಾವಣಾ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ, ದಿವಾಕರ್ ಕುಂದರ್, ಹರೀಶ್ ಕಿಣಿ ಮೊದಲಾದವರು […]

ಬಿಜೆಪಿ ಗೆಲುವಿಗೆ ಮತದಾರರಿಂದಲೇ ಸಂಕಲ್ಪ: ಯಶ್ ಪಾಲ್ ಸುವರ್ಣ

ಉಡುಪಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕ್ಷೇತ್ರದ ಮತದಾರಾರರೇ ಸಂಕಲ್ಪ ಮಾಡಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಮತ್ತೊಮ್ಮೆ ಮತದಾರರ ಆಶೀರ್ವಾದ ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಪ್ರಚಂಡ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹೇಳಿದರು. ಉಡುಪಿ ನಗರ ಸಭೆಯ ವಿವಿಧ ವಾರ್ಡ್ ಗಳಲ್ಲಿ ಮಹಾ ಅಭಿಯಾನದ ಅಂಗವಾಗಿ ರಘುಪತಿ ಭಟ್, ನಗರ ಸಭಾ ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮನೆ […]

ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಶಾಸಕರೊಂದಿಗೆ ಬೊಮ್ಮರಬೆಟ್ಟು ಗ್ರಾಮಕ್ಕೆ ಭೇಟಿ..

ಹಿರಿಯಡಕ: ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಶಾಸಕರಾದ ಶ್ರೀ ಲಾಲಾಜಿ ಆರ್. ಮೆಂಡನ್ ಅವರೊಂದಿಗೆ ಬೊಮ್ಮರಬೆಟ್ಟು ಗ್ರಾಮಕ್ಕೆ ಭೇಟಿ ನೀಡಿದರು. ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಪ್ರದೇಶದ ನಿವಾಸಿಗಳ, ಗ್ರಾಮ ಪಂಚಾಯತ್ ಸದಸ್ಯರ, ಕಾರ್ಯಕರ್ತರ ಮನೆ ಮನೆಗೆ ತೆರಳಿ ಭೇಟಿ ಮಾಡಿ ಮತ ಹಾಕಿ ಗೆಲ್ಲಿಸುವಂತೆ ಕೋರಿದರು.