ಸಚಿವ ವಿ.ಸುನಿಲ್ ಕುಮಾರ್ ಯರ್ಲಪಾಡಿ ಗ್ರಾಮಕ್ಕೆ ಭೇಟಿ..

ಬೈಲೂರು: ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದ ಮತದಾರರನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಅವರು ಭೇಟಿ ಮಾಡಿ ಕೆಲವೊಂದು ವಿಷಯಗಳನ್ನ ಮನವರಿಕೆ ಮಾಡಿ, ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತವನ್ನು ಹಾಕುವಂತೆ ಕೋರಿದರು. ಅಭಿವೃದ್ದಿಗೆ ಹೆಗಲಾಗುವಂತೆ ಕೋರಿಕೊಂಡರು.
ತ್ರಿಶಾ ಕಾಲೇಜಿನಲ್ಲಿ ಕಾಮರ್ಸ್ ಪದವಿಗಳ ದಾಖಲಾತಿ ಪ್ರಾರಂಭ

ಉಡುಪಿ: ಕರಾವಳಿ ಭಾಗದಲ್ಲಿ ಸಿ.ಎ, ಸಿ.ಎಸ್, ಎಂ.ಬಿ. ಎ ಮುಂತಾದ ವೃತ್ತಿಪರ ಶಿಕ್ಷಣದೊಂದಿಗೆ ಬಿ.ಕಾಂ ಬಿ. ಸಿಎ ಪದವಿಗೆ ತರಬೇತಿ ನೀಡುತ್ತಿರುವ, ಸಿ. ಎ ಗೋಪಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ತ್ರಿಶಾ ಸಂಸ್ಥೆ ಕಾಮರ್ಸ್ ಶಿಕ್ಷಣಕ್ಕೆ ಹೆಸರಾಗಿದೆ. ದೇಶದ ವಿವಿಧ ಭಾಗದ ಶಿಕ್ಷಣ ತಜ್ಞರಿಂದ ಅತ್ಯುತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ರ‍್ಯಾಂಕ್ ಗಳಿಸುತ್ತಿದ್ದಾರೆ. ತ್ರಿಶಾ ಕಾಲೇಜು ನುರಿತ ಶಿಕ್ಷಣ ತಜ್ಞರಿಂದ ತರಬೇತಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ತ್ರಿಶಾ ಕಾಲೇಜು ಕಾಮರ್ಸ್ ಪ್ರಿಯರ ಆದ್ಯತೆಯ […]
ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ…!!

ಉಡುಪಿ:ನದಿಯಲ್ಲಿ ಚಿಪ್ಪು ಮೀನು ಹಿಡಿಯಲು ಹೋಗಿ ನಾಲ್ವರು ಯುವಕರಲ್ಲಿ ಮೂವರು ನೀರುಪಾಲು, ಓರ್ವ ಕಣ್ಮರೆಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ನಿನ್ನೆ(ಭಾನುವಾರ) ಘಟನೆ ನಡೆದಿದೆ. ನೀರು ಪಾಲಾದ ಯುವಕರನ್ನ ಉಡುಪಿ ಮತ್ತು ಶೃಂಗೇರಿ ಮೂಲದವರು ಅಂತ ಗುರುತಿಸಲಾಗಿದೆ. ಇಬಾಜ್, ಫಜಾನ್, ಸೂಫಾನ್ ಫರಾನ್ ನೀರುಪಾಲಾದ ಯುವಕರಾಗಿದ್ದಾರೆ. ನೀರುಪಾಲಾದ ಯುವಕರು ರಂಜಾನ್ ಹಬ್ಬಕ್ಕೆ ಬ್ರಹ್ಮಾವರದ ಸಂಬಂಧಿಕರ ಮನೆಗೆ ಬಂದಿದ್ದರು. ಕುಕ್ಕುಡೆ ಕಿಣಿಯರ ಕುದ್ರು ಸಮೀಪ ನಡೆದ ಘಟನೆ ನಡೆದಿದೆ. ಏಳು ಯುವಕರ ತಂಡ ಸಂಜೆ ದೋಣಿ ಮೂಲಕ […]
ನಾಮಪತ್ರ ವಾಪಸ್ ಪಡೆಯಲು ಇಂದೇ ಕೊನೆ ದಿನ….!!

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನಾಮಪತ್ರ ವಾಪಸ್ ಪಡೆಯಲು ಇಂದೇ ಕೊನೆ ದಿನವಾಗಿದೆ. 3632 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. 502 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ. 3130 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. ಬಿಜೆಪಿ ಎಲ್ಲಾ ಇನ್ನೂ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 75 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. 68 ಮಂದಿ ಲಿಂಗಾಯಿತರಿಗೆ ಬಿಜೆಪಿ ಟಿಕೆಟ್ ನೀಡಲಾಗಿದ್ದು, 134 ಪದವೀಧರರು, 37 ಸ್ನಾತಕೋತ್ತರ ಪದವೀಧರರು ಸೇರಿದ್ದಾರೆ. ಕಾಂಗ್ರೆಸ್ 223 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 53 ಹೊಸ ಮುಖಗಳಿಗೆ […]
ಬಲಾಯಿಪಾದೆ ಚೆಕ್‌ಪೋಸ್ಟ್ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಭೇಟಿ, ಪರಿಶೀಲನೆ….!!!

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಲಾಯಿಪಾದೆ ಚೆಕ್‌ಪೋಸ್ಟ್ ಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಚೆಕ್ ಚೆಕ್‌ಪೋಸ್ಟ್ ಮೂಲಕ ಹಾದು ಹೋಗುವ ಎಲ್ಲ ವಾಹನಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸುವಂತೆ ಹಾಗೂ ಯಾವುದೇ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಸಿಬಂದಿಗೆ ಸೂಚಿಸಿದರು.