ಮಹಿಳೆಯರಿಂದ ಈ ಬಾರಿ ಕಾಂಗ್ರೆಸ್ ಗೆ ಬೆಂಬಲ: ಪ್ರಸಾದ್ ರಾಜ್ ಕಾಂಚನ್
ಉಡುಪಿ: ಬಿಜೆಪಿಯ ಭ್ರಷ್ಟಾಚಾರದಿಂದ ಬೇಸತ್ತಿರುವ ಮಹಿಳೆಯರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು. ಅವರು ಶನಿವಾರದಂದು ಕಾಂಗ್ರೆಸ್ ಭವನದಲ್ಲಿ ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಜಂಟಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಡುಪಿ ಕ್ಷೇತ್ರದ ಮಹಿಳಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಇಂದು ದೇಶದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದು, ಬಿಜೆಪಿಯ ಬೆಲೆ ಏರಿಕೆಗಳಿಂದ ಬೇಸತ್ತು ಹೋಗಿದ್ದಾರೆ. ಈ ಬಾರಿ ಮಹಿಳೆಯರಿಗಾಗಿ ಪಕ್ಷ ಅತ್ಯುತ್ತಮ ಯೋಜನೆಗಳನ್ನು ತರಲು ನಿರ್ಧರಿಸಿದ್ದು ಮಹಿಳೆಯರು ಬಿಜೆಪಿ […]
ಕಟೀಲು ದೇವಳಕ್ಕೆ ಭೇಟಿ ನೀಡಿದ ಚಿತ್ರನಟಿ ಶಿಲ್ಪಾ ಶೆಟ್ಟಿ ಕುಟುಂಬ
ಕಿನ್ನಿಗೋಳಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಪತಿ ರಾಜ್ ಕುಂದ್ರಾ, ಮಕ್ಕಳು, ಸಹೋದರಿ ಶಮಿತಾ ಶೆಟ್ಟಿ ಮತ್ತು ತಾಯಿಯೊಂದಿಗೆ ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಹೆಣ್ಣು ಮಗು ಜನಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ಶಿಲ್ಪಾ ದೇವರಿಗೆ ಸೀರೆಯನ್ನು ಅರ್ಪಿಸಿದರು. ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ ಪ್ರಸಾದ ವಿತರಿಸಿದರು. ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಹರಿ ಆಸ್ರಣ್ಣ, ನ್ಯಾಯವಾದಿ ರವಿ ಪೂಜಾರಿ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಪ್ಪ ಸೇರಿಗಾರ್ ಅವರಿಂದ ನಾಗಸ್ವರ […]
ಆದಾಯ ತೆರಿಗೆ ಹಳೆಯ ಪದ್ಧತಿ: ಐಟಿಆರ್ ಸಲ್ಲಿಸುವ ಮೊದಲು ಈ ಕಡಿತವನ್ನು ತಿಳಿದುಕೊಳ್ಳಿ
ಆದಾಯ ತೆರಿಗೆ: ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸುವಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೈಯಕ್ತಿಕ ಆದಾಯ ತೆರಿಗೆಯ ಹೊಸ ಪದ್ದತಿಯಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿದ್ದರು. ಸರ್ಕಾರ ಜಾರಿಗೆ ತಂದಿರುವ ಹೊಸ ತೆರಿಗೆ ಪದ್ಧತಿಯು 2023-24ನೇ ಹಣಕಾಸು ವರ್ಷದಿಂದ ಡೀಫಾಲ್ಟ್ (ಪೂರ್ವ ನಿಯೋಜಿತ) ಆಗಿರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ತಮ್ಮ ತೆರಿಗೆ ಪ್ರಯೋಜನಗಳನ್ನು ಉಳಿಸಿಕೊಳ್ಳಲು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಲು ಬಯಸುವ ತೆರಿಗೆದಾರರು ಅದರ ಬಗ್ಗೆ ಘೋಷಣೆಯನ್ನು ಮಾಡಬೇಕು. ಆದರೆ ನೀವು ಹಳೆಯ […]
ಏಪ್ರಿಲ್ 25- 26 ರಂದು ವಿವಿದೆಡೆ ವಿದ್ಯುತ್ ವ್ಯತ್ಯಯ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಏಪ್ರಿಲ್ 25 ಮತ್ತು 26 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 33/11 ಕೆ.ವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಉಡುಪಿ-2 ಮತ್ತು ಉಡುಪಿ-3 ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಉಡುಪಿ ನಗರ ಪ್ರದೇಶಗಳಾದ ಅಜ್ಜರಕಾಡು, ಕೋರ್ಟ್ ರಸ್ತೆ, ಕೋರ್ಟ್ ಬ್ಯಾಕ್ ರಸ್ತೆ, ಪಿ.ಡಬ್ಲ್ಯೂ.ಡಿ ಆಫೀಸ್, ತೆಂಕಪೇಟೆ, ಕೆ.ಎಂ.ಮಾರ್ಗ, ಮಾರುತಿ ವಿಥೀಕಾ, ಹಳೆ […]
ಲೋಕಸಭಾ ಸದಸ್ಯತ್ವ ಅನರ್ಹತೆ: ಅಧಿಕೃತ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ
ನವದೆಹಲಿ: ಏಪ್ರಿಲ್ 22 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿ ತಮ್ಮ ತಾಯಿ ಸೋನಿಯಾ ಗಾಂಧಿಯವರ ನಿವಾಸಕ್ಕೆ ತೆರಳಿದರು. ಕಳೆದ ತಿಂಗಳು ಮಾನನಷ್ಟ ಮೊಕದ್ದಮೆಯಲ್ಲಿ ಕೆಳ ನ್ಯಾಯಾಲಯವು ಶಿಕ್ಷೆ ವಿಧಿಸಿದ ನಂತರ ಲೋಕಸಭೆಯಿಂದ ಅನರ್ಹಗೊಂಡಿದ್ದರಿಂದ ಏಪ್ರಿಲ್ 22 ರೊಳಗೆ ಅಧಿಕೃತ 12, ತುಘಲಕ್ ಲೇನ್ ನಿವಾಸವನ್ನು ಖಾಲಿ ಮಾಡುವಂತೆ ಕೇಳಿಕೊಳ್ಳಲಾಗಿತ್ತು. “ಸತ್ಯವನ್ನು ಹೇಳಿದ್ದಕ್ಕೆ ನಾನು ಬೆಲೆ ತೆರುತ್ತಿದ್ದೇನೆ, ಇದಕ್ಕಾಗಿ ಯಾವುದೇ ಬೆಲೆ ತೆರಲು ನಾನು ಸಿದ್ಧ, ”ಎಂದು ಅವರು […]