ಕಾರ್ಕಳ: ಮುಡಾರು ಕಾಂಗ್ರೆಸ್‌ನಿಂದ ಅನೇಕರು ಬಿಜೆಪಿಗೆ ಸೇರ್ಪಡೆ 

ಕಾರ್ಕಳ: ಮುಡಾರು ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಸುಮಾರು 09 ಜನ ಇಂದು ಸಚಿವ ಶ್ರೀ ವಿ ಸುನಿಲ್‌ ಕುಮಾರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾದ ಎಂ. ಸುರೇಶ್‌ ಕುಮಾರ್‌, ಗ್ರಾಮ ಪಂಚಾಯತ್‌ಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಪ್ರಮೀಳಾ ಶ್ರೀನಿವಾಸ್‌, ಕೊರಗ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಮೂಂಡಿ ಕೊರಗ, ಸದಸ್ಯ ಹೆಪೆಜಾರು ಅಶೋಕ್‌, ಕೊರಗಜ್ಜ ದೈವಸ್ಥಾನ ಸಮಿತಿ ಸದಸ್ಯೆ ಶ್ರೀಮತಿ ಚಿಂದು ಕೊರಗ, ಸಮಾಜ ಸೇವಕಿ […]

ಬಿಜೆಪಿ ಮಹಾಭಿಯಾನ: ಅಭ್ಯರ್ಥಿ ಯಶ್ ಪಾಲ್ ಸುವರ್ಣ ಅವರಿಂದ ಮತಯಾಚನೆ; ರಘುಪತಿ ಭಟ್ ಭಾಗಿ 

ಉಡುಪಿ: ವಿಧಾನಸಭಾ ಚುನಾವಣೆ 2023 ಬಿಜೆಪಿ ಮಹಾಭಿಯಾನದಲ್ಲಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹಾಗೂ ರಘುಪತಿ ಭಟ್ ಭಾಗಿಯಾದರು. ಉಡುಪಿ ನಗರ ಸಭೆಯ ಅಜ್ಜರಕಾಡು, ಶಿರಿಬೀಡು, ಬನ್ನಂಜೆ, ಕುಂಜಿಬೆಟ್ಟು ಕಡಿಯಾಳಿ, ಮೂಡು ಸಗ್ರಿ ವಾರ್ಡ್ಗಳಿಗೆ ಉಡುಪಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹಾಗೂ ರಘುಪತಿ ಭಟ್ ಭೇಟಿ ನೀಡಿ ಮತಯಾಚನೆ ಮಾಡಿದರು. ನಗರ ಸಭಾ ಸದಸ್ಯರಾದ ಶ್ರೀಮತಿ ರಶ್ಮಿ ಸಿ.ಭಟ್, ಟಿ ಜಿ ಹೆಗ್ಡೆ, ಶ್ರೀಮತಿ ಸವಿತಾ ಹರೀಶ್ ರಾಮ್, ಗಿರೀಶ್ ಅಂಚನ್, […]

ಸಚಿವ ವಿ. ಸುನಿಲ್ ಕುಮಾರ್ ಮುನಿಯಾಲು- ಕಬ್ಬಿನಾಲೆ ಪ್ರದೇಶಗಳಿಗೆ ಭೇಟಿ

ಹೆಬ್ರಿ: ಕಾರ್ಕಳ ಬಿಜೆಪಿ ಅಭ್ಯರ್ಥಿ ಸಚಿವ ವಿ. ಸುನಿಲ್ ಕುಮಾರ್ ಅವರು ಎ.22 ರಂದು ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುನಿಯಾಲು ಮತ್ತು ಕಬ್ಬಿನಾಲೆ ಪ್ರದೇಶಗಳಲ್ಲಿ ಗೇರು ಕಾರ್ಖಾನೆಯ ಕಾರ್ಮಿಕರು ಹಾಗೂ ಮತದಾರರನ್ನು ಭೇಟಿಯಾದರು. ಮೇ.10ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯವಾದ ಮತವನ್ನು ತಮಗೆ ನೀಡಿ ಸ್ವರ್ಣ ಕಾರ್ಕಳದ ಮತ್ತಷ್ಟು ಅಭಿವೃದ್ಧಿಗಾಗಿ ಹರಸಿ ಆಶೀರ್ವದಿಸುವಂತೆ ಕೋರಿದರು.

ಆನೆಗೊಂದಿ ಮಹಾ ಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ  ಅವರನ್ನು  ಭೇಟಿಯಾದ ಪ್ರಸಾದ್ ರಾಜ್ ಕಾಂಚನ್

ಬ್ರಹ್ಮಾವರ : ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪ್ರಸಾದ್‌ ರಾಜ್ ಕಾಂಚನ್ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಮೊಕ್ಕಾಂ ಹೂಡಿರುವ ಶ್ರೀಮದ್ ಜಗದ್ಗುರು ಆನೆಗೊಂದಿ ಮಹಾ ಸಂಸ್ಥಾನ ಸರಸ್ವತೀ ಪೀಠದ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರನ್ನು ಶನಿವಾರ ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮೋಕ್ತೇಸರ ವಿ. ಶ್ರೀಧರ ಆಚಾರ್ಯ ಮತ್ತು ಆಡಳಿತ ಮಂಡಳಿಯ ಸದಸ್ಯರು ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಿದರು.

ಕುಂದಾಪುರ: ಹೊಂಬಾಡಿ- ಮಂಡಾಡಿ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆ

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಹೊಂಬಾಡಿ ಮಂಡಾಡಿ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಸತೀಶ್ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುಪ್ರಿತಾ ಕುಲಾಲ್, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.