ದ್ವಿತೀಯ ಪಿಯುಸಿ ಫಲಿತಾಂಶ: ಪಿಪಿಸಿ ವಿದ್ಯಾರ್ಥಿನಿ ಪೃಥ್ವಿ ಶೆಣೈ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ
ಉಡುಪಿ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ವಿದ್ಯಾರ್ಥಿನಿ ಪೃಥ್ವಿ ಶೆಣೈ, ವಿಜ್ಞಾನ ವಿಭಾಗದಲ್ಲಿ 563(ಶೇ.93.8) ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬ್ರಹ್ಮಾವರದ ಉದ್ಯಮಿ ಸತ್ಯಾಪ್ರಸಾದ್ ಶೆಣೈ ಹಾಗೂ ಪ್ರೀತಿ ಶೆಣೈ ದಂಪತಿಯ ಪುತ್ರಿ.
ದೇಶಾದ್ಯಂತ ಈದ್- ಉಲ್-ಫಿತ್ರ್ ಆಚರಣೆ
ಈದ್ ಉಲ್ ಫಿತ್ರ್ ವಿಶ್ವಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಹಬ್ಬವು ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಇದು ಉಪವಾಸ, ಪ್ರಾರ್ಥನೆ ಮತ್ತು ಆತ್ಮಾವಲೋಕನದ ಅವಧಿಯಾಗಿದೆ. ಈದ್ ಉಲ್ ಫಿತರ್ ಅನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತಿದೆ. ಮುಸ್ಲಿಂ ಸಂಪ್ರದಾಯದ ಪ್ರಕಾರ ಈದ್ ಉಲ್-ಫಿತರ್ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರಿಂದ ಹುಟ್ಟಿಕೊಂಡಿತು. ಕೆಲವು ಸಂಪ್ರದಾಯಗಳ ಪ್ರಕಾರ, ಮುಹಮ್ಮದ್ ಅವರು ಮೆಕ್ಕಾದಿಂದ ವಲಸೆ ಬಂದ ನಂತರ ಈ ಹಬ್ಬಗಳನ್ನು ಮದೀನಾದಲ್ಲಿ ಪ್ರಾರಂಭಿಸಲಾಯಿತು. ಸಾಂಪ್ರದಾಯಿಕವಾಗಿ, ಈದ್ ಉಲ್-ಫಿತರ್ ಸೂರ್ಯಾಸ್ತದ […]
“ಕ್ಷಯ”ವಿಲ್ಲದ ಸಂಪತ್ತು ಸಮೃದ್ದಿ ನೆಮ್ಮದಿಯನ್ನು ಕರುಣಿಸುವುದು “ಅಕ್ಷಯ ತೃತೀಯ”
ಅಕ್ಷಯ ತೃತೀಯ ಇದು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿಯಂದು ಬರುತ್ತದೆ. ಇದು “ಅಂತ್ಯವಿಲ್ಲದ ಸಮೃದ್ಧಿಯ ಮೂರನೇ ದಿನ” ಎಂದು ಸೂಚಿಸುತ್ತದೆ. ಸಂಸ್ಕೃತದಲ್ಲಿ, ಅಕ್ಷಯ ಎಂದರೆ “ಎಂದಿಗೂ ಕ್ಷಯವಿಲ್ಲದ್ದು” ಎಂದರ್ಥ. ತೃತೀಯಾ ಎಂದರೆ “ಚಂದ್ರನ ಮೂರನೇ ದಿನ”. ಸೂರ್ಯ-ಚಂದ್ರರು ಉಜ್ವಲವಾಗಿ ಬೆಳಗುವ ದಿನ ಇದಾಗಿದ್ದು, ಅಧ್ಯಾತ್ಮದ ದೃಷ್ಟಿಯಿಂದಲೂ ಈ ದಿನವು ಮಹತ್ವವನ್ನು ಪಡೆದಿದೆ. ಈ ದಿನದಂದು ಜಪ ತಪ ನಿಷ್ಠೆಗಳನ್ನು ಮಾಡುವುದರಿಂದ ಮನಸ್ಸು ಮತ್ತು ದೇಹವು ಶುದ್ದಗೊಂಡು ಅಧ್ಯಾತ್ಮದ ಸಾಧನೆಯು ಸುಲಭವಾಗಿ ಮೋಕ್ಷವು ದೊರೆಯುತ್ತದೆ. ಈ […]