ಕಾರ್ಕಳ ಹಾಗೂ ಉಡುಪಿ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ; ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ 2022-23ನೇ ಸಾಲಿನ ದ್ವಿತೀಯ ಪಿ.ಯು.ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪಿ.ಯು.ಕಾಲೇಜಿನ ಸ್ಮಯಾ ಸದಾನಂದ್ ಮಾಬೆನ್ ವಿಜ್ಞಾನ ವಿಭಾಗದಲ್ಲಿ 594 ಅಂಕಗಳಿಸಿ ರಾಜ್ಯಕ್ಕೆ 3 ನೇ ರ‍್ಯಾಂಕ್ ಮತ್ತು ವಾಣಿಜ್ಯ ವಿಭಾಗದಲ್ಲಿ ಮಾನ್ಯ ಜೈನ್ 594 ಅಂಕಗಳಿಸಿ ರಾಜ್ಯಕ್ಕೆ 4ನೇ ರ‍್ಯಾಂಕ್‌ಪಡೆದಿರುತ್ತಾರೆ. ಜ್ಞಾನಸುಧಾ ಸಂಸ್ಥೆಗಳ 16 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ 10ನೇ ರ‍್ಯಾಂಕಿನ ಒಳಗೆ ಸ್ಥಾನ ಪಡೆದಿರುತ್ತಾರೆ. ಕಾರ್ಕಳ ಜ್ಞಾನಸುಧಾ ಪಿ.ಯು.ಕಾಲೇಜಿನ ವಿಜ್ಞಾನ ವಿಭಾಗದಲ್ಲಿಸ್ಮಯಾ ಸದಾನಂದ ಮಾಬೆನ್  99%(594), ಎಂ.ಆರ್.ಯಶಸ್‌ ರೆಡ್ಡಿ […]

ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿ ವಿದ್ಯೋದಯ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಆರ್. ಭಟ್ ಪ್ರಥಮ ಸ್ಥಾನ

ಉಡುಪಿ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ವಿದ್ಯೋದಯ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಆರ್. ಭಟ್ ವಾಣಿಜ್ಯ ವಿಭಾಗದಲ್ಲಿ 593 ( 98.6%) ಅಂಕಗಳೊಂದಿಗೆ ಕಾಲೇಜಿಗೆ ಮೊದಲನೇ ರ‍್ಯಾಂಕ್ ಹಾಗೂ ರಾಜ್ಯ ಮಟ್ಟದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಣಿಪಾಲದ ಉದ್ಯಮಿ ರಾಜ್ ಕುಮಾರ್ ಭಟ್ ಹಾಗೂ ಸೌಮ್ಯ ಭಟ್ ದಂಪತಿಯ ಪುತ್ರಿ.

ಕಾರ್ಕಳ: ಮುಸ್ಲಿಂ ಧರ್ಮೀಯರಿಂದ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

ಕಾರ್ಕಳ: ಮುಸ್ಲಿಂ ಧರ್ಮೀಯರ ಪವಿತ್ರ ಈದ್ ಉಲ್ ಫಿತ್ರ್ ಹಬ್ಬವನ್ನು ಇಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಒಂದು ತಿಂಗಳುಗಳ ಕಾಲ ಪವಿತ್ರ ರಮ್ಜಾನ್ ಮಾಸದ ಉಪವಾಸ ಆಚರಣೆಯ ಬಳಿಕ ಶುಕ್ರವಾರ ರಾತ್ರಿ ಚಂದ್ರ ದರ್ಶನವಾದ ಕಾರಣ ಇಂದು ಹಬ್ಬ ಆಚರಿಸಲಾಗುತ್ತಿದೆ. ಅರಬ್ ರಾಷ್ಟ್ರಗಳಲ್ಲಿ ನಿನ್ನೆಯ ದಿನದಂದು ಹಬ್ಬವನ್ನು ಆಚರಿಸಲಾಯಿತು. ಕಾರ್ಕಳದಲ್ಲಿ ಇಂದು ಹಬ್ಬದ ಪ್ರಯುಕ್ತ ಮುಸ್ಲಿಮರಿಂದ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಾಲ್ಮರ ಈದ್ಗಾದಲ್ಲಿ ಸಾವಿರಾರು ಜನ ಮುಸ್ಲಿಮರು ಜಾಮಿಯಾ ಮಸೀದಿಯ ಗುರುಗಳಾದ ಮೌಲಾನ ಝಹೀರ್ ಅಹ್ಮದ್ […]

ಪ್ರಾಣಕ್ಕೆ ಮುಳುವಾಯ್ತು ಏರಿಯಲ್ ಆಕ್ರೋಬ್ಯಾಟ್ ಟ್ರಾಪೀಜ್: ಪ್ರದರ್ಶನ ವೇಳೆಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡು ಮಹಿಳೆ

ಬೀಜಿಂಗ್: ಚೈನೀಸ್ ಆಕ್ರೋಬ್ಯಾಟ್ ಟ್ರಾಪೀಜ್ ಪ್ರದರ್ಶನದ ಸಮಯದಲ್ಲಿ ಚೀನಾದ ಮಹಿಳಾ ಜಿಮ್ನಾಸ್ಟ್ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸನ್ ಎಂಬ ಉಪನಾಮದ ಮಹಿಳೆ, ಚೀನಾದ ಸೆಂಟ್ರಲ್ ಅನ್ಹುಯಿ ಪ್ರಾಂತ್ಯದ ಸುಝೌ ನಗರದಲ್ಲಿ ಫ್ಲೈಯಿಂಗ್-ಟ್ರಾಪೀಸ್ ಆಕ್ಟ್ ಸಮಯದಲ್ಲಿ ಕೆಳಗೆ ಬಿದ್ದಿದ್ದಾಳೆ ಎಂದು ಬಿಬಿಸಿ ವರದಿ ಮಾಡಿದೆ. ಕಾರ್ಯಕ್ರಮದ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಮ್ನಾಸ್ಟ್ ಹಾಗೂ ಪತಿಯೂ ಆಗಿರುವ ಜಾಂಗ್ ಜೊತೆ ಏರಿಯಲ್ ಆಕ್ರೋಬ್ಯಾಟ್ ಮಾಡುತ್ತಿದ್ದ ವೇಳೆ ಕೈಜಾರಿ ಕೆಳಗೆ ಬಿದ್ದಿದ್ದಾರೆ ಸುರಕ್ಷತಾ ಬೆಲ್ಟ್ ಧರಿಸದಿರುವುದೇ […]

RTE ದಾಖಲಾತಿ’ಗಾಗಿ ದಿನಾಂಕ 10-05-2023 ರವರೆಗೆ ಅರ್ಜಿ ಸಲ್ಲಿಕೆ ಅವದಿ ವಿಸ್ತರಣೆ…!!

ಬೆಂಗಳೂರು: ನಿನ್ನೆ ಆರ್ ಟಿ ಇ ಅಡಿಯಲ್ಲಿ ಮಕ್ಕಳ ದಾಖಲಾತಿಗಾಗಿ ಅರ್ಜಿ ( RTE Admission Application ) ಸಲ್ಲಿಸಲು ಕೊನೆಯ ದಿನವಾಗಿತ್ತು. ಈ ಅವದಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣದ ನಿರ್ದೇಶಕರು ಮಾಹಿತಿ ನೀಡಿದ್ದು, 2023-24ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ ದಾಖಲಾತಿಗಾಗಿ ಅರ್ಜಿಗಳನ್ನು ಸಲ್ಲಿಸಲು ದಿನಾಂಕ 20-04-2023ರವರೆಗೆ ನೀಡಲಾಗಿತ್ತು ಎಂದಿದ್ದಾರೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು, ಪೋಷಕರು ದಿನಾಂಕ ವಿಸ್ತರಣೆ ಕೋರಿ ಇಲಾಖೆಗೆ ಮನವಿ ಮಾಡಿದ್ದರು. ಈ […]