ತಿರಸ್ಕೃತ ಬೆಳೆ ವಿಮೆ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳ ಒಳಗಾಗಿ ಪೂರಕ ದಾಖಲೆ ಸಲ್ಲಿಸಿ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2021-22 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಯಾದ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆಯಾಗದ ಪ್ರಸ್ತಾವನೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಪರಿಶೀಲಿಸಿ, ಅಂತಿಮವಾಗಿ ವಿಮಾ ಸಂಸ್ಥೆಯವರು ವಿಮೆ ನೋಂದಾಯಿಸಿದ ಬೆಳೆಗೂ ಹಾಗೂ ಬೆಳೆ ಸಮೀಕ್ಷಾ ವರದಿಗೂ ತಾಳೆಬಾರದಿರುವ ಹಿನ್ನೆಲೆ ತಿರಸ್ಕರಿಸಿರುತ್ತಾರೆ. ಈ ತಿರಸ್ಕೃತ ಪ್ರಕರಣಗಳ ಪಟ್ಟಿಯನ್ನು ಉಡುಪಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಬ್ರಹ್ಮಾವರ ರೈತ ಸಂಪರ್ಕ ಕೇಂದ್ರ ಹಾಗೂ ಸಂಬಂಧಪಟ್ಟ […]

ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ: ಕೆಳನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಸೂರತ್ ಸೆಷನ್ಸ್ ನ್ಯಾಯಾಲಯ

ಸೂರತ್: 2019ರ ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೆಳ ನ್ಯಾಯಾಲಯದ ಆದೇಶಕ್ಕೆ ತಡೆ ಮತ್ತು ಅಮಾನತು ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮನವಿಯನ್ನು ಸೂರತ್ ಸೆಷನ್ಸ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 13 ರಂದು ಎರಡೂ ಕಡೆಯ ವಾದವನ್ನು ಆಲಿಸಿತ್ತು ಮತ್ತು ತೀರ್ಪನ್ನು ಏಪ್ರಿಲ್ 20 ಕ್ಕೆ ಕಾಯ್ದಿರಿಸಿತ್ತು. ಇಂದು ನ್ಯಾಯಾಲಯವು ರಾಹುಲ್ ಗಾಂಧಿಯ ದೋಷಾರೋಪಣೆಯನ್ನು ತಡೆಹಿಡಿದಿದ್ದರೆ ಅಥವಾ ಅಮಾನತುಗೊಳಿಸಿದ್ದರೆ, ಕಾಂಗ್ರೆಸ್ ನಾಯಕ ಸಂಸತ್ತಿಗೆ ಮರುಪ್ರವೇಶಿಸಬಹುದಿತ್ತು. ಕಾನೂನಿನಡಿಯಲ್ಲಿ ಇನ್ನೂ […]

ಬನ್ನಂಜೆ: ಏಪ್ರಿಲ್ 30 ರಿಂದ ಜಿಲ್ಲಾ ಬಾಲಭವನದಲ್ಲಿ ಬೇಸಿಗೆ ಶಿಬಿರ

ಬನ್ನಂಜೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಶಿಬಿರವು ನಗರದ ಬ್ರಹ್ಮಗಿರಿ ಜಿಲ್ಲಾ ಬಾಲಭವನದಲ್ಲಿ ಏಪ್ರಿಲ್ 30 ರಿಂದ 15 ದಿನಗಳ ಕಾಲ ನಡೆಯಲಿದ್ದು, ಆಸಕ್ತ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ರ ವರೆಗೆ ಶಿಬಿರವು ನಡೆಯಲಿದ್ದು, ಶಿಬಿರದಲ್ಲಿ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ವಾಲ್ ಆರ್ಟ್, ಕರಕುಶಲ ಕಲೆ, ಪಿ.ಒ.ಪಿ ಹೂದಾನಿ, ಸಮೂಹ ನೃತ್ಯ, ಸಂಗೀತ, ಕರಾಟೆ, ಭಾಷಣ, ಕೌಶಲ್ಯ ತರಬೇತಿ ಹಾಗೂ […]

ಏಪ್ರಿಲ್ 28 ರಂದು ತೆರೆಕಾಣಲಿದೆ ಬಹುನಿರೀಕ್ಷಿತ ಪೊನ್ನಿಯಿನ್ ಸೆಲ್ವನ್ -2: ಮಹಾರಾಣಿಯಾಗಿ ಕಂಗೊಳಿಸುತ್ತಿರುವ ಐಶ್ವರ್ಯಾ ರೈ

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ -2 ಪ್ರೇಕ್ಷಕರು ನಿರೀಕ್ಷಿಸುತ್ತಿರುವ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಏಪ್ರಿಲ್ 28 ರಂದು ಬಿಡುಗಡೆಯಾಗಲಿದೆ. ನಟಿ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ನಟಿಸಿರುವ ಚೋಳ ಸಾಮ್ರಜ್ಯದ ಕಥೆಯಿರುವ ಈ ಚಿತ್ರದ ಮೊದಲನೇ ಭಾಗವು ಯಶಸ್ಸನ್ನು ಕಂಡಿತ್ತು. ನಂದಿನಿ ಮತ್ತು ಊಮೈ ರಾಣಿ ಎಂಬ ಪಾತ್ರಗಳಲ್ಲಿ ಐಶ್ವರ್ಯಾ ರೈ ನಟಿಸಿದ್ದು, ಚಿಯಾನ್ ವಿಕ್ರಂ, ತ್ರಿಶಾಪ್ರಕಾಶ ರಾಜ್, ಕಾರ್ತಿ, ಜಯಮ್ ರವಿ, ಶೋಭಿತಾ, ಐಶ್ವರ್ಯ ಲಕ್ಷ್ಮಿ ಮುಂತಾದವರ ತಾರಾಗಣವಿದೆ. ಇತ್ತೀಚಿನ ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಪೊನ್ನಿಯಿನ್ […]

ಉಡುಪಿ: ನಕಲಿ ಸಿಗರೇಟ್, ನಿಷೇಧಿತ ಇ- ಸಿಗರೇಟ್ ಜಾಲ ಪತ್ತೆ..!!

ಉಡುಪಿ: ನಕಲಿ ಸಿಗರೇಟ್‌ ಹಾಗೂ ನಿಷೇಧಿತ ಇ-ಸಿಗರೇಟ್‌ ಜಾಲವನ್ನು ಭೇದಿಸಿರುವ ಮಣಿಪಾಲ ಮತ್ತು ಪಡುಬಿದ್ರಿ ಪೊಲೀಸ್‌ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ2 ಪ್ರಕರಣ ಮತ್ತು ಪಡುಬಿದ್ರೆ ಠಾಣೆಯಲ್ಲಿ1 ಪ್ರಕರಣ ದಾಖಲಾಗಿದೆ. ಒಟ್ಟು ಮೂರು ಪ್ರಕರಣಗಳಲ್ಲಿಒಟ್ಟು 6,34,970 ರೂ. ಮೌಲ್ಯದ ನಕಲಿ ಐಟಿಸಿ ಕಂಪನಿಯ ಗೋಲ್ಡ್‌ ಫ್ಲೇಕ್‌ ನಕಲಿ ಸಿಗರೇಟ್‌ಗಳು, ವಿದೇಶಿ ಕಂಪನಿಯ ಸಿಗರೇಟ್‌ ಹಾಗೂ 113 […]