ದೊಡ್ಡಣ್ಣಗುಡ್ಡೆ: ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾಆದಿಶಕ್ತಿಕ್ಷೇತ್ರ ಕುಬೇರ ಲಕ್ಷ್ಮಿ ಪ್ರತಿಷ್ಠ ವರ್ಧಂತಿ ಸಂಪನ್ನ

ದೊಡ್ಡಣ್ಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾಆದಿಶಕ್ತಿ ಕಾರಣಿಕ ಕ್ಷೇತ್ರದ ವಿಶೇಷ ಸಾನಿಧ್ಯವಾದ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿಯ ಸನ್ನಿಧಾನದ ಪ್ರಥಮ ಪ್ರತಿಷ್ಠ ವಾರ್ಷಿಕ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸಂಪನ್ನಗೊಂಡಿತು. ಆ ಪ್ರಯುಕ್ತ ಕ್ಷೇತ್ರದಲ್ಲಿ ಕಪಿಲ ಮಹರ್ಷಿಗಳ ಸನ್ನಿದಾನದಲ್ಲಿ ಸ್ನಪನ ಕಳಶಾಭಿಷೇಕ, ಕುಬೇರ ಲಕ್ಷ್ಮಿ ಸನ್ನಿಧಿಯಲ್ಲಿ ಲಕ್ಷ್ಮಿ ಸಹಸ್ರನಾಮ, ಪಾಯಸ ಹೋಮ, ಕುಬೇರ ಮಂತ್ರ ಹೋಮ, ಪಂಚವಂಶತಿ ಕಲಶ ಅಭಿಷೇಕ ನೆರವೇರಿತು. ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ […]

ಭಾರತೀಯ ಜನತಾ ಪಕ್ಷದ ಅಂತಿಮ ಪಟ್ಟಿ ಬಿಡುಗಡೆ: ಜಗದೀಶ್ ಶೆಟ್ಟರ್ ವಿರುದ್ದ ಮಹೇಶ್ ತೆಂಗಿನಕಾಯಿ

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ 10 ಅಭ್ಯರ್ಥಿಗಳ ಮೂರನೇ ಮತ್ತು ಕೊನೆಯ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಮೇ 10 ರಂದು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳು ಮತ್ತು ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಪಕ್ಷವು ತನ್ನ ಅನುಭವಿ ನಾಯಕ ಅರವಿಂದ ಲಿಂಬಾವಳಿಯನ್ನು ಮಹದೇವಪುರ ಕ್ಷೇತ್ರದಿಂದ ಕೈಬಿಟ್ಟಿದ್ದು ಈ ಸ್ಥಾನದಲ್ಲಿ ಅವರ ಪತ್ನಿ ಮಂಜುಳಾ ಅರವಿಂದ್ ಲಿಂಬಾವಳಿಯನ್ನು ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಜಗದೀಶ […]

ಕಾಪು: ಗ್ರಾವಿಟಿ ಡ್ಯಾನ್ಸ್ ಸ್ಟೂಡಿಯೋ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ

ಕಾಪು: ಗ್ರಾವಿಟಿ ಡ್ಯಾನ್ಸ್ ಸ್ಟೂಡಿಯೋ ಕಾಪು ಇದರ ಆಶ್ರಯದಲ್ಲಿ ಕಾಪು ಪರಿಸರದ ಶಾಲಾ ವಿದ್ಯಾರ್ಥಿಗಳಿಗಾಗಿ ಮಕ್ಕಳ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು ರಜಾ ಸಮಯದಲ್ಲಿ ಡ್ಯಾನ್ಸ್ , ಡ್ರಾಮಾ, ಆಟೋಟ ಸ್ಪರ್ಧೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರವನ್ನು ಸ್ಟೂಡಿಯೋದ ಅಧ್ಯಕ್ಷ ಹಾಗೂ ಸಮಾಜ ಸೇವಕ ದಿವಾಕರ್ ಶೆಟ್ಟಿ ಉದ್ಘಾಟಿಸಿದರು. ಈ ಸಮಯದಲ್ಲಿ ಸ್ಟೂಡಿಯೋದ ಅಧ್ಯಕ್ಷ ರತ್ನಾಕರ್, ನಿರ್ದೇಶಕ ರೋಶನ್ ಕಾಪು, ತರಬೇತಿದಾರ ಸಚಿನ್, ಸದಸ್ಯರಾದ ಮೋಹನ್ ಕಾಪು, ಪ್ರತೀನ್ ಕಾಪು, ಕುಮಾರಿ ಮಾನ್ಯ, ಕೀರ್ತನ್ […]

ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣೆಯ ಬೃಹತ್ ಶೋಭಾಯಾತ್ರೆ

ಅಜೆಕಾರು: ಕಾರ್ಕಳ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣೆಯ ಅದ್ದೂರಿ ಶೋಭಾಯಾತ್ರೆ ಏಪ್ರಿಲ್16 ರಂದು ಭಾನುವಾರ ನಡೆಯಿತು. ಅಜೆಕಾರು ರಾಮ ಮಂದಿರದಿಂದ ಆರಂಭಗೊಂಡ ನೂತನ ರಥ ಸಮರ್ಪಣೆ ಶೋಭಾಯಾತ್ರೆಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಸ್ಯ ಶಿವರಾಮ ಜಿ.ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಜಯ ಶೆಟ್ಟಿ, ಭಾಸ್ಕರ ಶೆಟ್ಟಿ ಕುಂಟಿನಿ, ಜಯಕರ ಶೆಟ್ಟಿ, ಸುಜಯ ಶೆಟ್ಟಿ, ಪ್ರಶಾಂತ ಶೆಟ್ಟಿ, ನಂದಕುಮಾರ್ ಹೆಗ್ಡೆ ಮುಂತಾದವರು ಪಾಲ್ಗೊಂಡಿದ್ದರು. […]

ಕೃಷಿಗೆ ಸಾಂಸ್ಥಿಕ ಸ್ಪರ್ಶ ನೀಡಿ ಮುನಿಯಾಲಿನ ಮಣ್ಣನ್ನು ಗೋಧಾಮದ ಮೂಲಕ ಪಾವನಗೊಳಿಸಿದ ರೀತಿ ಎಲ್ಲರಿಗೂ ಮಾದರಿ: ರಾಜಶೇಖರಾನಂದ ಸ್ವಾಮೀಜಿ

ಹೆಬ್ರಿ : ಆಧುನಿಕ ಯುಗದಲ್ಲೂ ಕೃಷಿಯ ಮೂಲಕ ಜೀವನವನ್ನು ನಡೆಸಬಹುದು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿ, ಕೃಷಿಗೆ ಸಾಂಸ್ಥಿಕ ಸ್ಪರ್ಶ ನೀಡಿ ಮುನಿಯಾಲಿನ ಮಣ್ಣನ್ನು ಗೋಧಾಮದ ಮೂಲಕ ಪಾವನಗೊಳಿಸುವ ಮಹಾತ್ಕಾರ್ಯವನ್ನು ವಿಭಿನ್ನ ಯೋಚನೆ ಯೋಜನೆಯ ಸಾಧಕ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್‌ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಅವರು ಭಾನುವಾರ ಮುನಿಯಾಲಿನಲ್ಲಿರುವ ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್‌ ಮತ್ತು ಡೈರಿ ಗೋಧಾಮದಲ್ಲಿ […]