ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಡ್ಡ ಪ್ರವೀಣನ ಸ್ಕ್ಯಾಮ್ 1770 ಚಿತ್ರದ ಟೀಸರ್ ಬಿಡುಗಡೆ

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಿರ್ಮಾಣದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ ದಡ್ಡ ಪ್ರವೀಣ ಖ್ಯಾತಿಯ ರಂಜನ್ ನಟನೆಯ ಸ್ಕ್ಯಾಮ್ 1770 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ದೇವರಾಜ್.ಆರ್ ನಿರ್ಮಾಣ, ಡಿ ಕ್ರಿಯೇಷನ್ಸ್ ಬ್ಯಾನರ್ ನಡಿ ಮೂಡಿಬಂದಿರುವ ಚಿತ್ರಕ್ಕೆ ವಿಕಾಸ್ ಪುಷ್ಪಗಿರಿ ಚಿತ್ರಕಥೆ ಮತ್ತು ನಿರ್ದೇಶನವಿದೆ. ಶಂಕರ್ ರಾಮನ್.ಎಸ್ ಸಂಭಾಷಣೆ, ಶಂಕರ್ ರಾಮನ್.ಎಸ್ & ವಿಕಾಸ್ ಪುಷ್ಪಗಿರಿ ಚಿತ್ರಕಥೆ, ಸತೀಶ್ ಆರ್ಯನ್ ಸಂಗೀತ, ಶೋಯಭ್ […]

ಮೇ‌ 4 ರಂದು ಮೋದಿ ಉಡುಪಿಗೆ ?

ಉಡುಪಿ: ಪ್ರಧಾನಿ ಮೋದಿ ಮೇ 4ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮೇ 4ರಂದು ಉಡುಪಿ ಜಿಲ್ಲಾ ಕೇಂದ್ರ ಅಥವಾ ಸೂಕ್ತ ಪ್ರದೇಶದಲ್ಲಿ ಸಮಾವೇಶ ನಡೆಯುವ ಸಾಧ್ಯತೆ ಇದೆ. ಪ್ರಧಾನಿ ಜಿಲ್ಲೆಗೆ ಭೇಟಿ ನೀಡಲಿರುವ ಬಗ್ಗೆ ಕೇಂದ್ರದ ನಾಯಕರು ಜಿಲ್ಲಾ ಪ್ರಮುಖರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅನುಕೂಲ ಆಗುವಂತೆ ಸೂಕ್ತ ಪ್ರದೇಶದಲ್ಲಿ ಮೇ 4ರಂದು ಪ್ರಧಾನ ಮೋದಿ ಸಮಾವೇಶ ನಡೆಯಲಿದೆ. ಈ […]

ಹೆಬ್ರಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ …!!

ಹೆಬ್ರಿ : ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಿಲ್ಲಾಳಿ ವಾರ್ಡ್ ನಿಂದ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರಾದ ಶ್ರೀ ಪ್ರವೀಣ್ ಆಚಾರ್ಯ, ಶ್ರೀ ನಾಗ ರಾಜ ನಾಯಕ್ ಮತ್ತು ಶ್ರೀ ರಾಜೇಶ್ ನಾಯ್ಕರವರು ಏಪ್ರಿಲ್ 16 ಆದಿತ್ಯವಾರದಂದು ಶ್ರೀ ವಿ .ಸುನಿಲ್ ಕುಮಾರ್ ರವರ ವಿಕಾಸ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಶ್ರೀ ವಿ. ಸುನಿಲ್ ಕುಮಾರ್ ರವರು ಬಿಜೆಪಿ ಪಕ್ಷದ ಧ್ವಜ ನೀಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಶ್ರೀ ಮಹಾವೀರ […]

ಈಜು ಸ್ಪರ್ಧೆಯಲ್ಲಿ ಭಾರತಕ್ಕೆ 5 ಚಿನ್ನದ ಪದಕಗಳನ್ನು ಗೆದ್ದ ನಟ ಆರ್.ಮಾಧವನ್ ಪುತ್ರ ವೇದಾಂತ್ ಮಾಧವನ್

ಚೆನ್ನೈ: ಸಾಮಾನ್ಯವಾಗಿ ತಂದೆ-ತಾಯಿ ಯಾವ ವೃತ್ತಿಯಲ್ಲಿರುತ್ತಾರೋ ಮಕ್ಕಳೂ ಕೂಡಾ ಅದೇ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ. ಅದರಲ್ಲೂ ಚಿತ್ರತಾರೆಯರು, ರಾಜಕಾರಣಿಗಳು ಮತ್ತು ಕ್ರಿಕೆಟ್ ಆಟಗಾರರ ಮಕ್ಕಳಂತೂ ಕೈ ತುಂಬಾ ಹಣ ಸಂಪಾದಿಸುವ ತಂದೆಯ ಕ್ಷೇತ್ರವನ್ನೇ ಆಯ್ದುಕೊಳ್ಳುತ್ತಾರೆ. ಆದರೆ ಇದಕ್ಕಿಂತ ಭಿನ್ನವಾಗಿ ಬಹುಭಾಷಾ ಚಿತ್ರನಟ ಆರ್. ಮಾಧವನ್ ಮಗ ವೇದಾಂತ್ ಮಾಧವನ್ ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು ದೇಶಕ್ಕಾಗಿ ಚಿನ್ನ ಗೆಲ್ಲುತ್ತಿದ್ದಾನೆ. ಮಾಧವನ್ ಪುತ್ರ ವೇದಾಂತ್ ಮಾಧವನ್ ಮಲೇಷಿಯಾದ ಆಹ್ವಾನಿತ ವಯೋಮಾನದ ಚಾಂಪಿಯನ್‌ಶಿಪ್‌ನಲ್ಲಿ ಈಜುವುದರಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದು ತಂದೆ […]

ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಜಾಹೀರಾತಿಗೆ ಪೂರ್ವಾನುಮತಿ ಕಡ್ಡಾಯ: ಜಿಲ್ಲಾಧಿಕಾರಿ

ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಪೂರ್ವಾನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು. ಅವರು ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಚಾರಪಡಿಸುವ ಪೂವಾನುಮತಿ ಕುರಿತ ಕಾರ್ಯಗಾರದಲ್ಲಿ ಮಾತನಾಡಿ, ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಿದ ಆಭ್ಯರ್ಥಿಗಳು, ಚುನಾವಣಾ ಜಾಹೀರಾತುಗಳನ್ನು ಪ್ರಚಾರ ಮಾಡುವ ಮುನ್ನ ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಾಮಾಣೀಕರಣ ಪಡೆಯಬೇಕು ಎಂದರು. ಜಾಹೀರಾತಿನಲ್ಲಿ ಇತರರನ್ನು ದೂರುವುದು, ಅಸ್ಪಷ್ಟ ಅಥವಾ ಮಾನ ಹಾನಿಕರ, ಹಿಂಸೆಗೆ ಪ್ರಚೋದನೆ, […]