ಉಡುಪಿಯ ಪ್ರಪ್ರಥಮ ಆಭರಣ ಮಳಿಗೆ ನೊವೆಲ್ಟಿ ಜ್ಯುವೆಲ್ಲರ್ಸ್ ನಲ್ಲಿ ಬಂಪರ್ ಬಹುಮಾನಗಳು: ಆಭರಣ ಖರೀದಿಯ ಮೇಲೆ ಭಾರೀ ರಿಯಾಯತಿ

1946 ರಲ್ಲಿ ದಿ| ಜಿ.ಅನಂತಕೃಷ್ಣ ಆಚಾರ್ಯರಿಂದ ಜಿಲ್ಲೆಯ ಮೊಟ್ಟಮೊದಲ ಜ್ಯುವೆಲ್ಲರಿಯಾಗಿ ಸ್ಥಾಪಿಸಲ್ಪಟ್ಟ ನೋವೆಲ್ಟಿ ಸಮೂಹ ಸಂಸ್ಥೆಗಳ ಹೆಮ್ಮೆಯ ಪರಂಪರೆಯುಳ್ಳ, ಉಡುಪಿ ರಥಬೀದಿಯ ಆನಂದತೀರ್ಥ ಗೆಸ್ಟ್ ಹೌಸ್ ಬಳಿ ಇರುವ ನೋವೆಲ್ಟಿ ಜ್ಯುವೆಲ್ಲರಿಯು ವಿವಿಧ ರೀತಿಯ ನವನವೀನ ಡಿಸೈನ್ ಗಳುಳ್ಳ 916 HUID ಹಾಲ್ ಮಾರ್ಕ್ ಹೊಂದಿರುವ ಆಕರ್ಷಕ ಚಿನಾಭರಣಗಳು ಹಾಗೂ ಎಲ್ಲಾ ತರಹದ ಆಕರ್ಷಕ ವಿನ್ಯಾಸಗಳುಳ್ಳ ಬೆಳ್ಳಿಯ ಸಾಮಾಗ್ರಿಗಳಿಗೆ ಹೆಸರು ಪಡೆದಿರುವ ಸಂಸ್ಥೆಯಾಗಿದೆ. ಇದೀಗ ಗ್ರಾಹಕರಿಗಾಗಿ ಕರ್ನಾಟಕ ಗೋಲ್ದ್ ಫೆಸ್ಟಿವಲ್ ನಲ್ಲಿ ಅತ್ಯಾಕರ್ಷಕ ಕೊಡುಗೆ ಹಾಗೂ ರಿಯಾಯತಿಗಳನ್ನು […]

ಜಿಲ್ಲಾ ಕಾಂಗ್ರೆಸ್ ಪ್ರಮುಖರೊಂದಿಗೆ ಪಾದಯಾತ್ರಯಲ್ಲಿ ಬಂದು ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ನಾಮಪತ್ರ ಸಲ್ಲಿಕೆ…!!

ಉಡುಪಿ: ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಜಿಲ್ಲಾ ಕಾಂಗ್ರೆಸ್ ಪ್ರಮುಖರೊಂದಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ತಾಲೂಕು ಕಚೇರಿಯವರೆಗೂ ಪಾದಯಾತ್ರಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಸಭೆ ನಡೆಸಿ ಅನಂತರ ಅಲ್ಲಿಂದ ಪಾದಯಾತ್ರೆಯಲ್ಲಿ ಬಂದು ಬೆಳಗ್ಗೆ 11.15ಕ್ಕೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರ ತಾಯಿ ಸರಳಾ ಕಾಂಚನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಕಾಂಚನ್, ಕಾಪು ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಇದ್ದರು.

ಬಾಳೆಬರೆ ಘಾಟಿಯಲ್ಲಿ ವಾಹನ ಸಂಚಾರ ಪುನರಾರಂಭ

ಕುಂದಾಪುರ: ಕರಾವಳಿ ಹಾಗೂ ಮಲೆನಾಡನ್ನು ಬೆಸೆಯುವ ಬಾಳೆಬರೆ ಅಥವಾ ಹುಲಿಕಲ್‌ ಘಾಟಿಯ ಕಾಂಕ್ರಿಟೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶನಿವಾರ ರಾತ್ರಿಯಿಂದ ವಾಹನ ಸಂಚಾರ ಪುನರಾರಂಭಗೊಂಡಿದೆ. ಘಾಟಿ ರಸ್ತೆಯ ಕಾಂಕ್ರಿಟೀಕರಣ, ರಕ್ಷಣಾ ತಡೆಗೋಡೆ, ಚರಂಡಿ ಮತ್ತಿತರ ಕಾಮಗಾರಿಗಳಾಗಿ ಫೆ. 5ರಿಂದ ಎ. 5ರ ವರೆಗೆ ಈ ಘಾಟಿಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಸಹ್ ಹೊರಡಿಸಿದ್ದರು. ಎ. 5ರಂದು ಕಾಮಗಾರಿ ಪೂರ್ಣಗೊಳ್ಳದ್ದರಿಂದ ನಿಷೇಧವನ್ನು 10 ದಿನಗಳ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಕಾಮಗಾರಿ ಬಹುತೇಕ ಪೂರಾಣಗೊಂಡ ಹಿನ್ನೆಲೆಯಲ್ಲಿ […]

ಗುರು ಸಂಕ್ರಮಣ-2023: ಮಕರ-ಕುಂಭ ಹಾಗೂ ಮೀನ ರಾಶಿಯವರ ಗೋಚರ ಫಲಗಳು

ಮಕರ ರಾಶಿ ಮಕರ ರಾಶಿಯವರಿಗೆ ಗುರುವು ಮೂರನೇ ಮನೆ ಮತ್ತು ಹನ್ನೆರಡನೆಯ ಮನೆಯ ಅಧಿಪತಿ. ಈ ಸಂಚಾರದ ಸಮಯದಲ್ಲಿ, ಗುರುವು ನಾಲ್ಕನೇ ಮನೆಯಲ್ಲಿ ಸಾಗುತ್ತಾನೆ. ನಾಲ್ಕನೇ ಮನೆಯಲ್ಲಿ ಗುರು ಹೋಗುವುದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲವಾದರೂ ಇದು ಸ್ವಲ್ಪಮಟ್ಟಿಗೆ ಪ್ರಯೋಜನಕಾರಿಯಾಗಿದೆ. ಗುರು ತನ್ನದೇ ಆದ ರಾಶಿಯಲ್ಲಿ ಸಾಗುತ್ತಿದೆ. ಸೂರ್ಯ ಮತ್ತು ರಾಹು ಜೊತೆಗಿನ ಮೈತ್ರಿಯು ಗುರುವಿನ ಸಂಚಾರದ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇವರು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು; ಎದೆ ನೋವು ಮತ್ತು ಎದೆಯ ಸೆಳೆತದಂತಹ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. […]

ಬಿಜೆಪಿ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್…

ಬೆಂಗಳೂರು:ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಅಧಿಕೃತವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಇಂದು ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್​ ಸೇರಿದರು. ಇದರೊಂದಿಗೆ 35 ವರ್ಷಕ್ಕೂ ಹೆಚ್ಚು ಕಾಲ ಬಿಜೆಪಿಯೊಂದಿಗಿನ ನಂಟು ಕಳೆದುಕೊಂಡರು. ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದ ಮಾಜಿ ಸಿಎಂ ಜಗದೀಶ್​ ಶೆಟ್ಟರ್, ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. […]