ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ CAPF ಕಾನ್ಸ್‌ಟೇಬಲ್ ಪರೀಕ್ಷೆ ನಡೆಸಲು ಕೇಂದ್ರ ಗೃಹ ಸಚಿವಾಲಯ ನಿರ್ಧಾರ
ನವದೆಹಲಿ: 2024 ಜ.1ರ ಬಳಿಕ ಕೇಂದ್ರ ಅರೆಸೇನಾ ಪಡೆಗಳು ಅಥವಾ CAPF ಗಳಲ್ಲಿ ಕಾನ್ಸ್‌ಟೇಬಲ್‌ಗಳ (ಜನರಲ್ ಡ್ಯೂಟಿ) ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ಹೆಚ್ಚುವರಿಯಾಗಿ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ನಿರ್ಧರಿಸಿದೆ. CAPF ಗಳಲ್ಲಿ ಸ್ಥಳೀಯ ಯುವಕರ ಭಾಗವಹಿಸುವಿಕೆಗೆ ಉತ್ತೇಜನ ನೀಡಲು ಮತ್ತು ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಕ್ರಮದಲ್ಲಿ ತೆಗೆದುಕೊಂಡ “ಹೆಗ್ಗುರುತಿನ” ನಿರ್ಧಾರ ಎಂದು ಸಚಿವಾಲಯ ಬಣ್ಣಿಸಿದೆ. ಪ್ರಶ್ನೆ ಪತ್ರಿಕೆಗಳನ್ನು […]
ಹೂಗ್ಲಿ ನದಿಯಡಿ ದೇಶದ ಅತ್ಯಂತ ಆಳದ ಮೆಟ್ರೋ ಓಟ ಯಶಸ್ವಿ: ಭೂಮೇಲ್ಮೈಯಿಂದ 33 ಮೀಟರ್ ಕೆಳಗೆ ಓಡಲಿದೆ ರೈಲು
ಕೋಲ್ಕತ್ತಾ: ಹೂಗ್ಲಿ ನದಿಯ ಅಡಿಯಲ್ಲಿ ಮೆಟ್ರೋ ರೈಲಿನ ಪ್ರಾಯೋಗಿಕ ಚಾಲನೆಯನ್ನು ಮಾಡಲಾಗಿದ್ದು, ಪ್ರಥಮ ಪ್ರಯೋಗ ಯಶಸ್ವಿಯಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಶುಕ್ರವಾರ ಪ್ರಾಯೋಗಿಕ ಚಾಲನೆಯ ನಂತರ, “ರೈಲು ನೀರಿನ ಅಡಿಯಲ್ಲಿ ಚಲಿಸುತ್ತಿದೆ” ಎಂದು ವೈಷ್ಣವ್ ಟ್ವೀಟ್ ಮಾಡಿದ್ದಾರೆ. Train travels underwater!🇮🇳 👏 Trial run of train through another engineering marvel; metro rail tunnel and station under Hooghly river. pic.twitter.com/T6ADx2iCao — Ashwini Vaishnaw (@AshwiniVaishnaw) […]
ಹಾಲಾಡಿ ಆಶೀರ್ವಾದ ಪಡೆದ ಗುರುರಾಜ್ ಗಂಟಿಹೊಳೆ
ಕುಂದಾಪುರ : ಕರಾವಳಿ ಭಾಗದ ಪ್ರಭಾವಿ ನಾಯಕ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಶನಿವಾರ ಬೆಳಗ್ಗೆ ಬೈಂದೂರು ಬಿಜೆಪಿ ಅಭ್ಯರ್ಥಿ, ಯುವ ನಾಯಕ ಗುರುರಾಜ್ ಗಂಟಿಹೊಳೆ ಅವರು ಹಾಲಾಡಿಯವರ ನಿವಾಸದಲ್ಲಿ ಭೇಟಿಯಾಗಿ, ಆಶೀರ್ವಾದ ಪಡೆದು, ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ರು, ಪಕ್ಷದ ಹಿರಿಯ ನಾಯಕರು, ಪ್ರಮುಖರು ನನಗೆ ಬೈಂದೂರು ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದು ನನ್ನ ಕರ್ತವ್ಯವೂ ಹೌದು. ಯುವ ನಾಯಕ ಗುರುರಾಜ್ ಅವರಿಗೆ ನಿಮ್ಮೆಲ್ಲರ ಬೆಂಬಲ, […]
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿತು ಅಸ್ಸಾಂನ ಸಾಂಪ್ರದಾಯಿಕ ಬಿಹು ನೃತ್ಯ ಪ್ರದರ್ಶನ
ಗುವಾಹಟಿ: ಭಾರತದ ಈಶಾನ್ಯ ರಾಜ್ಯ ಅಸ್ಸಾಂ ಗುರುವಾರ ಒಂದೇ ಸ್ಥಳದಲ್ಲಿ ಸಾಂಪ್ರದಾಯಿಕ ಬಿಹು ನೃತ್ಯವನ್ನು ಪ್ರದರ್ಶಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ಗುರುತಿಸಿದೆ. ಗುವಾಹಟಿಯ ಸರುಸಜೈ ಸ್ಟೇಡಿಯಂನಲ್ಲಿ ಗಿನ್ನೆಸ್ ಪುಸ್ತಕದಲ್ಲಿ ತನ್ನ ವಿಶ್ವ ದಾಖಲೆಯನ್ನು ನೋಂದಾಯಿಸುವ ಪ್ರಯತ್ನದಲ್ಲಿ 11,000 ಕ್ಕೂ ಹೆಚ್ಚು ಕಲಾವಿದರು, ಡೋಲು ವಾದಕರು ಮತ್ತು ನೃತ್ಯಗಾರರು ಭಾಗವಹಿಸಿದರು. https://twitter.com/i/status/1647105773854416896 ಕಾರ್ಯಕ್ರಮದ ಸಮಯದಲ್ಲಿ, ಪ್ರದರ್ಶಕರಲ್ಲಿ ಗಾಯಕರು ಮತ್ತು ರಾಜ್ಯದ ಸಾಂಪ್ರದಾಯಿಕ ವಾದ್ಯಗಳಾದ ಧೋಲ್, ತಾಲ್, ಗೊಗೊನಾ, ಟೋಕಾ, ಪೆಪಾ ಮತ್ತು […]
ಗುರು ಸಂಕ್ರಮಣ: ಕನ್ಯಾ ಹಾಗೂ ತುಲಾ ರಾಶಿಯವರ ಫಲಗಳು
ಕನ್ಯಾರಾಶಿ ಕನ್ಯಾರಾಶಿಯವರಿಗೆ, ಈ ಗುರು ಸಂಕ್ರಮಣ ಅವರ ಎಂಟನೇ ಮನೆಯಲ್ಲಿ ಸಂಭವಿಸುತ್ತದೆ. ಗುರು ಇವರ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ. ಈ ಚಲನೆಯು ಸಮೃದ್ಧವಾಗಿರುವುದಿಲ್ಲ ಮತ್ತು ಇದು ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳನ್ನು ನೀಡಬಹುದು. ಇವರು ಧಾರ್ಮಿಕ ಜೀವನವನ್ನು ನಡೆಸುವಲ್ಲಿ ತೊಡಗಿಸಿಕೊಂಡಿದ್ದರೆ ಮತ್ತು ಧಾರ್ಮಿಕ ಕೆಲಸ ಮತ್ತು ಆರಾಧನೆಯತ್ತ ಮನಸ್ಸನ್ನು ಇರಿಸಿದರೆ, ಈ ಗುರು ಸಂಕ್ರಮಣದಿಂದ ಆಸೆಗಳು ಈಡೇರುತ್ತವೆ. ಇದು ಇವರಿಗೆ ಅಪಾರ ಯಶಸ್ಸನ್ನೂ ನೀಡುತ್ತದೆ. ಉನ್ನತ ಮತ್ತು ಸಮೃದ್ಧ ಮಟ್ಟದ ಆಧ್ಯಾತ್ಮಿಕತೆಯನ್ನು ಸಹ ಪಡೆಯುತ್ತಾರೆ. […]