ನಂಬರ್ ಪ್ಲೇಟ್ ನಿಯಮ ಉಲ್ಲಂಘನೆ ವಿರುದ್ದ ಕಾರ್ಯಾಚರಣೆ ಆರಂಭ..!!

ಮಂಗಳೂರು: ನಂಬರ್ ಪ್ಲೇಟ್ ಅಳವಡಿಸದ, ನಂಬರ್ ಪ್ಲೇಟ್ ನಿಯಮ ಮೀರಿದ ವಾಹನಗಳ ವಿರುದ್ದ ನಗರದಾದ್ಯಂತ ಮಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.ಕಾರ್ಯಾಚರಣೆ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪ್ಯಾನ್ಸಿ ನಮ್ಬರ್ ಪ್ಲೇಟ್, ಅಸಮರ್ಪಕ ನಂಬರ್ ಪ್ಲೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 87 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ನಿಯಮಗಳ ಪ್ರಕಾರವೇ ನೋಂದಣಿ ಫಲಕಗಳಲ್ಲಿ ನಿಗದಿತ ಅಳತೆಯ ಅಕ್ಷರಗಳು ಮತ್ತು ಅಂಕಿಗಳನ್ನು ಬರೆಸುವುದು ಕಡ್ಡಾಯವಾಗಿದೆ. ಆದರೆ, ಕೆಲವರು ನಂಬರ್‌ ಪ್ಲೇಟ್‌ಗಳಲ್ಲಿ ಮನಸೋ ಇಚ್ಛೆ ಸಂಘ-ಸಂಸ್ಥೆಗಳ ಹೆಸರು, ಲಾಂಛನ, ಚಿಹ್ನೆಗಳನ್ನು ಹಾಕಿಕೊಂಡು ನಿಯಮ […]

ಅಪಾಯದ ಸ್ಥಿತಿಯಲ್ಲಿ ಟ್ರಾಫಿಕ್ ಸಿಗ್ನಲ್ ಕಂಬ ..!!

ಉಡುಪಿ:ಕಲ್ಯಾಣ್ ಆಭರಣ ಮಳಿಗೆಯ ಬಳಿ, ಸಿಗ್ನಲ್ ಕಂಬದ ಬುಡದ ಸನಿಹವೇ ಯಾವುದೋ ಕಾಮಗಾರಿ ನಡೆಸಲು ಗುಂಡಿ ತೋಡಿಡಲಾಗಿದೆ. ಪರಿಣಾಮ ಕಂಬ ಉರುಳಿ ಬಿದ್ದು ಜೀವಹಾನಿ ಸಂಭವಿಸುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಗಮನಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಿಸಿದ್ದಾರೆ.

ಚಂದನ್ ಶೆಟ್ಟಿಗೆ ಜೊತೆಯಾದ ರಾಗಿಣಿ ದ್ವಿವೇದಿ: ಎಲ್ರ ಕಾಲೆಳೆಯತ್ತೆ ಕಾಲ ಚಿತ್ರದಲ್ಲಿ ಹೆಜ್ಜೆಗೂಡಿಸಿದ ರ‍್ಯಾಪರ್ ಹಾಗೂ ತುಪ್ಪದ ಬೆಡಗಿ

ಸುಜಯ್ ಶಾಸ್ತ್ರಿ ನಿರ್ದೇಶನದ ‘ಎಲ್ರ ಕಾಲೆಳೆಯತ್ತೆ ಕಾಲ’ ಚಿತ್ರದಲ್ಲಿ ನಟನಾಗಿರುವ ಜನಪ್ರಿಯ ರ‍್ಯಾಪರ್ ಮತ್ತು ಸಂಗೀತ ಸಂಯೋಜಕ ಚಂದನ್ ಶೆಟ್ಟಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜೊತೆ ಹೆಜ್ಜೆಗೆ ಹೆಜ್ಜೆ ಕೂಡಿಸಿದ್ದಾರೆ ಚಂದನ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿಬಂದಿದ್ದು ಮಂಗ್ಲಿ ಹಾಗೂ ಚಂದನ್ ಶೆಟ್ಟಿ ಗಾಯನವಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಚಂದನ್, ‘ನಟಿ ರಾಗಿಣಿ ದ್ವಿವೇದಿ ಅವರ ಮೊದಲ ಸಿನಿಮಾ ಕೆಂಪೇಗೌಡದಿಂದಲೂ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರೊಂದಿಗೆ […]

ಗುರು ಸಂಕ್ರಮಣ: ವೃಷಭ ಹಾಗೂ ಮಿಥುನ ರಾಶಿಯವರಿಗೆ ಫಲಾಫಲಗಳು

ವೃಷಭ ರಾಶಿಯವರಿಗೆ ಗುರುವು ಎಂಟನೇ ಮನೆ ಮತ್ತು ಹನ್ನೊಂದನೇ ಮನೆಯ ಅಧಿಪತಿ. ವೃಷಭ ರಾಶಿಯವರಿಗೆ ಈ ಸಮಯವು ಸಂಭಾವ್ಯ ಸಮಸ್ಯೆಗಳನ್ನು ತರಬಹುದು. ಏಕೆಂದರೆ, ಗುರುವು ಈ ರಾಶಿಗೆ ಸ್ನೇಹಪರವಾಗಿಲ್ಲ. ಗುರುವು ತನ್ನ ಸ್ವಂತ ರಾಶಿಚಕ್ರ ಚಿಹ್ನೆಯನ್ನು ತೊರೆದು ಹನ್ನೆರಡನೇ ಮನೆಗೆ ಪ್ರವೇಶಿಸಿದಾಗ ಈ ಚಲನೆಯಿಂದಾಗಿ ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಏಪ್ರಿಲ್‌ನಲ್ಲಿ, ರಾಹು, ಗುರು ಮತ್ತು ಸೂರ್ಯ ಒಟ್ಟಿಗೆ ಹನ್ನೆರಡನೇ ಮನೆಯಲ್ಲಿ ನಿಲ್ಲುತ್ತಾರೆ ಮತ್ತು ಅವರ ಪರಿಣಾಮಗಳೊಂದಿಗೆ ವ್ಯಕ್ತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತವೆ. ಆ ಸಮಯದಲ್ಲಿ ಆರೋಗ್ಯದ […]

ಚಪ್ಪಲಿ ಧರಿಸದ ಬರಿಗಾಲ ಕಾರ್ಯಕರ್ತನಿಗೆ ಟಿಕೆಟ್‌: ಬೈಂದೂರಿನಿಂದ ಗುರುರಾಜ್‌ ಶೆಟ್ಟಿ ಗಂಟಿಹೊಳೆಗೆ ಬಿಜೆಪಿ ಟಿಕೆಟ್….

ಕುಂದಾಪುರ : ಎರಡನೇ ಪಟ್ಟಿಯಲ್ಲಿ ಬೈಂದೂರು ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿದ್ದು ಆರೆಸ್ಸೆಸ್ ತೆಕ್ಕೆಗೆ ಬಂದಿದೆ.ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿ ಹೈಕಮಾಂಡ್ ಬುಧವಾರ ತಡರಾತ್ರಿ 23 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಮಾಡಿದೆ. ಬೈಂದೂರು ತಾಲೂಕಿನ ಬಿಜೂರಿನ ಗಂಟಿಹೊಳೆಯ ಗುರುರಾಜ್ ಶೆಟ್ಟಿ ಗಂಟಿಹೊಳೆಗೆ ಬೈಂದೂರು ಬಿಜೆಪಿಯ ಟಿಕೆಟ್ ಘೋಷಣೆಯಾಗುವ ಮೂಲಕ ಅಧಿಕೃತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ. ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗುರುರಾಜ್ ಗಂಟಿಹೊಳೆ ಆರೆಸ್ಸೆಸ್ ಸ್ವಯಂಸೇವಕರಾಗಿದ್ದಾರೆ. ಹಲವಾರು ವರ್ಷಗಳ ಕಾಲ ತನ್ನ ಕುಟುಂಬವನ್ನೇ ತೊರೆದು ಸಂಘಕ್ಕಾಗಿ ಸೇವೆ ಸಲ್ಲಿಸಿದ […]