ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನಿಂದಾಗುವ ಆರೋಗ್ಯ ಪ್ರಯೋಜನಗಳು
ಆಡುಭಾಷೆಯಲ್ಲಿ ಮಜ್ಜಿಗೆ ಸೊಪ್ಪು ಎಂದು ಚಿರಪರಿಚಿತವಾಗಿರುವ ಹುಲ್ಲಿನ ಜಾತಿಯ ಈ ಸಸ್ಯದ ಎಲೆಗಳು ಮತ್ತು ಎಣ್ಣೆಯನ್ನು ಔಷಧವನ್ನು ತಯಾರಿಸಲು ಬಳಸಲಾಗುತ್ತದೆ. ಸಂಸ್ಕೃತದಲ್ಲಿ ತಕೃ ತೃಣ, ತುಳುವಿನಲ್ಲಿ ಅಲೆಪಂತಿ, ಕನ್ನಡದಲ್ಲಿ ಮಜ್ಜಿಗೆ ಸೊಪ್ಪು ಅಥವಾ ನಿಂಬೆ ಸೊಪ್ಪು ಮತ್ತು ಇಂಗೀಷ್ ನಲ್ಲಿ ಲೆಮನ್ ಗ್ರಾಸ್ ಎಂದು ಕರೆಯುತ್ತಾರೆ. ನಿಂಬೆಯ ಪರಿಮಳವನ್ನು ಸೂಸುವ ಮಜ್ಜಿಗೆ ಸೊಪ್ಪನ್ನು ಸಾಮಾನ್ಯವಾಗಿ ಮೌಖಿಕವಾಗಿ, ಚರ್ಮಕ್ಕೆ ನೇರವಾಗಿ ಅನ್ವಯಿಸಲಾಗುತ್ತದೆ ಅಥವಾ ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಅರೋಮಾಥೆರಪಿಯಾಗಿ ಬಳಸಲಾಗುತ್ತದೆ. ಅಲ್ಲದೆ, ಡಿಯೋಡರೆಂಟ್ ಗಳು, ಸಾಬೂನುಗಳು ಮತ್ತು […]
ಬೆಂಗಳೂರು-ದ.ಕ ಜಿಲ್ಲೆಗಳಲ್ಲಿ ಸಿಎನ್‌ಜಿ/ಪಿಎನ್‌ಜಿ ಬೆಲೆ ಪ್ರತಿ ಎಸ್.ಸಿಎಂಗೆ 7 ರೂ ಕಡಿತ: ಗೈಲ್ ನಿಂದ ಘೋಷಣೆ
ಬೆಂಗಳೂರು: ಸರ್ಕಾರವು ನೈಸರ್ಗಿಕ ಅನಿಲದ ಬೆಲೆ ಸೂತ್ರವನ್ನು ಬದಲಾಯಿಸಿದ ಕೆಲವೇ ದಿನಗಳಲ್ಲಿ, GAIL (ಗೈಲ್) ಗ್ಯಾಸ್ ಲಿಮಿಟೆಡ್ ಭಾನುವಾರ ಸಿ.ಎನ್.ಜಿ ಮತ್ತು ಪಿ.ಎನ್.ಜಿ ಬೆಲೆಗಳಲ್ಲಿ ಪ್ರತಿ ಯೂನಿಟ್‌ಗೆ ರೂ 7 ವರೆಗೆ ಕಡಿತವನ್ನು ಘೋಷಿಸಿದೆ. ಸಾರಿಗೆಗಾಗಿ ಬಳಸುವ ಸಂಕುಚಿತ ನೈಸರ್ಗಿಕ ಅನಿಲ (ಸಿ.ಎನ್.ಜಿ) ಕರ್ನಾಟಕದಲ್ಲಿ ಪ್ರತಿ ಕೆಜಿಗೆ 7 ರೂಪಾಯಿಗಳಷ್ಟು ಅಗ್ಗವಾಗಿದೆ ಎಂದು ಗೈಲ್ (ಇಂಡಿಯಾ) ಲಿಮಿಟೆಡ್‌ನ ಸಿಟಿ ಗ್ಯಾಸ್ ಆರ್ಮ್ ಗೈಲ್ ಗ್ಯಾಸ್ ಲಿಮಿಟೆಡ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ […]
ಸ.ಹಿ.ಪ್ರಾ.ಶಾಲೆ ಕಾರ್ಕಳ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಉಚಿತ ಬೇಸಿಗೆ ಶಿಬಿರ “ಕಲಾ ಸಿಂಚನ- 2023”
ಕಾರ್ಕಳ : ಸ.ಹಿ.ಪ್ರಾ.ಶಾಲೆ ಕಾರ್ಕಳ ಮೈನ್ ಇಲ್ಲಿ 6 ರಿಂದ 13 ವರ್ಷ ವಯೋಮಿತಿಯ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಕಲಾ ಸಿಂಚನ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆಯಾದ ಶ್ರೀಮತಿ ಶೋಭಾ ಅವರು ವಹಿಸಿ ಶುಭ ಹಾರೈಸಿದರು. ಶಾಲಾ ಹಿತೈಷಿ ಹಾಗೂ ಪೋಷಕರಾದ ಶ್ರೀ ವಿನಯ್ ಉಪಸ್ಥಿತರಿದ್ದು ಶಿಬಿರಕ್ಕೆ ಶುಭ ಹಾರೈಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಶಿಬಿರ ಅತ್ಯಂತ ಮಹತ್ವಪೂರ್ಣವಾದುದು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ […]
ಕಾಂಗ್ರೆಸ್ ವಿತರಿಸುತ್ತಿರುವ ಗ್ಯಾರಂಟಿ ಕಾರ್ಡ್‌ಗೆ ವಾರಂಟಿ ಇಲ್ಲ: ಕೋಟ ಶ್ರೀನಿವಾಸ ಪೂಜಾರಿ…!!
ಉಡುಪಿ: ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಯಾವುದೇ ಸರಕಾರ ಬಡವರಿಗೆ ನ್ಯಾಯವನ್ನು ಕೊಡುತ್ತಿರುವಾಗ ಇಲ್ಲಿಯವರೆಗೆ ಗ್ಯಾರಂಟಿ ಕಾರ್ಡ್‌ನ್ನು ಕೊಟ್ಟಿಲ್ಲ. ಗ್ಯಾರಂಟಿ ಕಾರ್ಡ್ ಕೊಡುತ್ತೇವೆ ಎಂಬುದರ ಅರ್ಥವೇನೆಂದರೆ ಜನ ತಮ್ಮನ್ನು ನಂಬುವುದಿಲ್ಲ ಎಂಬುದಾಗಿದೆ. ಈ ಕಾರಣಕ್ಕಾಗಿ ಕಾಂಗ್ರೆಸ್ ವಿತರಿಸುತ್ತಿರುವ ಗ್ಯಾರಂಟಿ ಕಾರ್ಡ್‌ಗಳಿಗೆ ಯಾವುದೇ ವಾರಂಟಿ ಇಲ್ಲ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೂದಲಿಸಿದ್ದಾರೆ. ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಉಡುಪಿ ಪುರಭವನದಲ್ಲಿ ಭಾನುವಾರ […]
ಕೆಮ್ತೂರು: ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಸುವರ್ಣ ಪೂಜಾ ಸೇವಾ ಮಹೋತ್ಸವ
ಉಡುಪಿ: ಇಲ್ಲಿನ ಕೆಮ್ತೂರು ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಭಾನುವಾರದಂದು ಇಲ್ಲಿನ ಪ್ರಧಾನ ಅರ್ಚಕರಾಗಿ ನಿರಂತರವಾಗಿ ಸುಮಾರು 50 ವರ್ಷಗಳ ಕಾಲ (ಸುವರ್ಣ ಪೂಜಾ ಸೇವಾ ಮಹೋತ್ಸವ) ಸೇವೆ ಸಲ್ಲಿಸಿದ ವೇದಮೂರ್ತಿ ಸುಜಯ ಆಚಾರ್ಯ ಉದ್ಯಾವರ ಇವರನ್ನು ದೇವಾಲಯ ಸಭಾ ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು. ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಹೂವಿನ ಅಲಂಕಾರ, ಸಾಮೂಹಿಕ ಪ್ರಾರ್ಥನೆ, ಗಣಹೋಮ, ಸತ್ಯನಾರಾಯಣ ಪೂಜೆ, ವಿವಿಧ ಭಜನಾ ಮಂಡಳಿಯ ವತಿಯಿಂದ ಬೆಳ್ಳಿಗ್ಗೆಯಿಂದ ಸಂಜೆಯವರೆಗೆ ಭಜನಾ ಕಾರ್ಯಕ್ರಮ, ಮಹಾ ಪೂಜೆ, ದರ್ಶನ ಸೇವೆ-ಪ್ರಸಾದ ವಿತರಣೆ, […]