ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಾಳೆ ಶ್ರೀ ಮನ್ಮಹಾರಥೋತ್ಸವ
ಉಚ್ಚಿಲ: ಶ್ರೀ ಕ್ಷೇತ್ರ ಉಚ್ಶಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವರ್ಷಾವಧಿ ಮಹೋತ್ಸವ ಎ. 4 ರಿಂದ 9ರವರೆಗೆ ನಡೆಯಲಿದ್ದು ಎ. 7 ರಂದು ಶ್ರೀ ಮಹಾಲಕ್ಷ್ಮೀ ರಥಾರೋಹಣ ನಡೆಯಲಿದೆ. ಎ. 6 ರಂದು ಬೆಳಿಗ್ಗೆ 9.30 ರಿಂದ ನಾಗಾಲಯದಲ್ಲಿ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಆಶ್ಲೇಷಾ ಬಲಿ, ಮಧ್ಯಾಹ್ನ 12: 30ಕ್ಕೆ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಪ್ರಧಾನ ಯಾಗ, ಮಹಾಪೂಜೆ, ರಾತ್ರಿ 7.30 ರಿಂದ ಆರಾಧನಾ ಪೂಜೆ, ಅನ್ನ ಸಂತರ್ಪಣ ಪ್ರಾರ್ಥನೆ, ರಾತ್ರಿ 11 ರಿಂದ ನಿತ್ಯ ಬಲಿ, […]
ವಿಶ್ವಸಂಸ್ಥೆಯ ಅತ್ಯುನ್ನತ ಅಂಕಿಅಂಶ ಸಂಸ್ಥೆಗೆ ಆಯ್ಕೆಯಾದ ಭಾರತ
ನವದೆಹಲಿ: ನಾಲ್ಕು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಅತ್ಯುನ್ನತ ಅಂಕಿಅಂಶ ಸಂಸ್ಥೆಗೆ ಭಾರತವನ್ನು ಆಯ್ಕೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಹೇಳಿದ್ದಾರೆ. ಇದೀಗ ಪೂರ್ಣಗೊಂಡಿರುವ ಯುಎನ್ ಸ್ಟ್ಯಾಟಿಸ್ಟಿಕಲ್ ಕಮಿಷನ್ ಚುನಾವಣೆಯಲ್ಲಿ ಭಾರತವು 53 ಮತಗಳಲ್ಲಿ 46 ಮತಗಳನ್ನು ಗಳಿಸುವ ಮೂಲಕ ಪ್ರತಿಸ್ಪರ್ಧಿಗಳಾದ ಆರ್.ಓ.ಕೆ(23) ಚೀನಾ (19), ಮತ್ತು ಯುಎಇ (15) ನಂತಹ ದೇಶಗಳನ್ನು ಹಿಂದಿಕ್ಕಿ ಜಯಗಳಿಸಿದೆ. 4 ವರ್ಷಗಳ ಅವಧಿಯು 1 ಜನವರಿ 2024 ರಂದು ಪ್ರಾರಂಭವಾಗುತ್ತದೆ. ಇದು ಬಹುಕೋನ ಚುನಾವಣೆಯಾಗಿದ್ದು, ಎರಡು ಸ್ಥಾನಗಳಿಗೆ […]
ಕಾರ್ಕಳ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಸಂಪೂರ್ಣ ವಿಫಲ, ಪುರಸಭೆ ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ…!!!
ಕಾರ್ಕಳ: ಪುರಸಭೆ ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ ಮುಂದುವರೆದಿದ್ದು, ಕುಡಿಯುವ ನೀರಿಗೂ ತತ್ವಾರ ಎದುರಿಸುವ ದಿನಗಳು ಆರಂಭವಾಗಿದೆ ಕೋಟ್ಯಾಂತರ ರೂ.ಯೋಜನೆಗಳು ಹಳ್ಳ ಹಿಡಿದಿರುವುದರಿಂದ ಈ ಸಂಕಷ್ಟ ಎದುರಾಗಿದೆ ಎಂದು ಪುರಸಭೆ ಸದಸ್ಯ ಕಾಂಗ್ರೇಸ್ ವಕ್ತಾರ ಶುಭದ ರಾವ್ ತಿಳಿಸಿದ್ದಾರೆ. ಮುಂಡ್ಲಿ ಜಲಾಶಯ ಸಂಪೂರ್ಣ ಬತ್ತಿಹೋಗಿದೆ. ರಾಮಸಮುದ್ರದಿಂದ ನೀರನ್ನು ಬಳಸಲಾಗುತ್ತಿದ್ದರೂ ಸಮರ್ಪಕವಾಗಿ ವಿತರಿಸಲು ಸಾದ್ಯವಾಗುತ್ತಿಲ್ಲ ಹಾಗಾಗಿ ಮಿತವಾದ ನೀರಿನ ಬಳಕೆ ಮಾಡುವಂತೆ ಪುರಸಭೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಈ ನಡುವೆ 136 ಕೋಟಿ ರೂ.ನಲ್ಲಿ ಪೂರ್ಣಗೊಂಡ ಎಣ್ಣೆಹೊಳೆ ಏತ ನೀರಾವರಿ […]
ಕಾಂಗ್ರೆಸ್ ಎರಡನೇ ಪಟ್ಟಿ ರಿಲೀಸ್: ಉಡುಪಿ ಸೇರಿ 42 ಕ್ಷೇತ್ರಗಳಿಗೆ ಟಿಕೆಟ್ ಫೈನಲ್
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷವು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದ ಕಾಂಗ್ರೆಸ್ ಹೈಕಮಾಂಡ್,ಇಂದು 42 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಬಹುದಿನಗಳಿಂದ ವಿಳಂಬವಾಗಿದ್ದ ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿಯಲ್ಲಿ ಗುರುವಾರ ಅಂತಿಮವಾಗಿ ಬಿಡುಗಡೆ ಮಾಡಲಾಗಿದ್ದು, ಯುವ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರಿಗೆ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಲು ಚುನಾವಣಾ ಟಿಕೆಟ್ ನೀಡಲಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ಮೊಗವೀರ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದೆ.. ಉಳಿದ ಕ್ಷೇತ್ರಗಳಿಗೆ ಹಂತ ಹಂತವಾಗಿ […]
ಮಾಹೆ ಗಾಂಧಿಯನ್ ಸೆಂಟರಿನಲ್ಲಿ ಪಟ್ಟಚಿತ್ರ ಕಾರ್ಯಾಗಾರ
ಮಣಿಪಾಲ: ಸಮಾಜವು ಕಲೆ ಮತ್ತು ಕಲಾವಿದರನ್ನು ಬೆಂಬಲಿಸಿದರೆ ಮಾತ್ರ ಕಲೆ ಉಳಿಯುತ್ತದೆ. ಉತ್ತಮ ಕಲೆಯ ರಚನೆಗೆ ಕಲಾಕಾರರ ಸಂಪೂರ್ಣ ಸಮರ್ಪಣೆ ಬೇಕು ಮತ್ತು ಅದರಲ್ಲಿ ಸಂತೋಷವೂ ಅಡಕವಾಗಿದೆ ಎಂದು ಒಡಿಶಾದ ಪಟ್ಟಚಿತ್ರ ಕಲಾವಿದೆ ಗೀತಾಂಜಲಿ ದಾಸ್ ಹೇಳಿದರು. ಪಟ್ಟಚಿತ್ರ ಕಾರ್ಯಾಗಾರವನ್ನು ನಡೆಸಲು ಉಡುಪಿಗೆ ಆಗಮಿಸಿದ್ದ ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡುತ್ತಿದ್ದರು. ಗೀತಾಂಜಲಿ ದಾಸ್ ಅವರು ಪಟ್ಟಚಿತ್ರ ಕಲಾ ಪ್ರಕಾರದ ವಿಶೇಷತೆಗಳು, ಅದಕ್ಕೆ ಬಳಸುವ ಮೂಲ […]