ದಾಖಲೆ ಬೆಲೆಗೆ ಮಾರಾಟವಾಯ್ತು ಬಾಕ್ಸ್ ಆಫೀಸ್ ಬಾಹುಬಲಿ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ವಿದೇಶೀ ಹಕ್ಕು!

ಭಾರತೀಯ ಚಿತ್ರರಂಗದ ಬಾಹುಬಲಿ ಎಂದೇ ಖ್ಯಾತನಾಮ ಪ್ರಭಾಸ್, ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುವ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಹಾಗೂ ಕೆ.ಜಿ.ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿಯ “ಸಲಾರ್” ಚಿತ್ರವು ಬಿಡುಗಡೆಗೂ ಮುನ್ನವೇ ಸದ್ದುಮಾಡುತ್ತಿರುವ ವರದಿಗಳಾಗಿವೆ. ವರದಿಗಳನ್ನು ನಂಬುವುದಾದರೆ, ಸಲಾರ್‌ನ ವಿದೇಶಿ ಹಕ್ಕುಗಳು 90 ರಿಂದ100 ಕೋಟಿ ರೂ.ಗೆ ಮಾರಾಟವಾಗಿದೆ. ಈ ಅಂಕೆಯೊಂದಿಗೆ, ಪ್ರಭಾಸ್ ಅಭಿನಯದ ಸಲಾರ್ ಚಿತ್ರವು ಅತಿ ಹೆಚ್ಚು ವಿದೇಶಿ ಹಕ್ಕುಗಳ ಒಪ್ಪಂದ ಹೊಂದಿದ ತೆಲುಗು ಚಲನಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. https://twitter.com/box0fficeindia/status/1642119837295194112?ref_src=twsrc%5Etfw%7Ctwcamp%5Etweetembed%7Ctwterm%5E1642119837295194112%7Ctwgr%5E91090cc57ea5e82f0daabbf964368ca74396f145%7Ctwcon%5Es1_&ref_url=https%3A%2F%2Fwww.indiatvnews.com%2Fentertainment%2Fregional-cinema%2Fprabhas-starrer-salaar-scripts-history-with-highest-overseas-rights-heres-what-we-know-latest-entertainment-news-2023-04-01-859614 ಪ್ರಭಾಸ್ ಅವರ […]

ಎಂಸಿಎಂಸಿ ಸಮಿತಿ ಅನುಮತಿ ಇಲ್ಲದೆ ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ಪ್ರಸಾರ ಮಾಡುವಂತಿಲ್ಲ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲಿದ್ದು, ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಕೇಬಲ್ ಟಿವಿ, ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳಲ್ಲಿ, ಯಾವುದೇ ರಾಜಕೀಯ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾ ಎಂಸಿಎಂಸಿ ಸಮಿತಿಯ ಅನುಮತಿ ಕಡ್ಡಾಯವಾಗಿದ್ದು, ಸಮಿತಿಯ ಅನುಮತಿ ಪಡೆಯದೇ ಜಾಹೀರಾತು ಪ್ರಕಟಿಸಿದಲ್ಲಿ ಸಂಬಂಧಪಟ್ಟವರ ವಿರುದ್ದ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಎಚ್ಚರಿಕೆ ನೀಡಿದ್ದಾರೆ. ಅವರು ಶನಿವಾರ ಜಿಲ್ಲಾಧಿಕಾರಿ […]

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧಿತ ದೂರು ನೀಡಲು ಅವಕಾಶ

ಉಡುಪಿ: ಮೇ ತಿಂಗಳಿನಲ್ಲಿ ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಗಳ ಕಚೇರಿಯ ಒಂದನೇ ಮಹಡಿಯ ಕೊಠಡಿ ಸಂಖ್ಯೆ ಎ204 ರಲ್ಲಿ ಚುನಾವಣಾ ಸಂಬಂಧಿ ದೂರುಗಳ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಪಟ್ಟ ದೂರುಗಳಿದ್ದಲ್ಲಿ cVIGIL App ಮೂಲಕ , ಮತದಾರರ ಸಹಾಯವಾಣಿ ಕೇಂದ್ರ 1950 ಹಾಗೂ ಸ್ಥಿರ ದೂರವಾಣಿ ಸಂಖ್ಯೆ 0820-2574991 ಗೆ ಕರೆ ಮಾಡುವ ಮೂಲಕ ಹಾಗೂ National Grievances Redressal System ಆನ್‌ಲೈನ್ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು […]

ಬನ್ನಂಜೆ ಬಾಲಭವನ ಆವರಣದಲ್ಲಿ ಸಂಜೀವಿನಿ ಸಂತೆ

ಉಡುಪಿ: ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವಾನೋಪಾಯ ಅಭಿಯಾನ-ಸಂಜೀವಿನಿ ಸಹಯೋಗದಲ್ಲಿ ನಗರದ ಬನ್ನಂಜೆ ಬಾಲಭವನ ಆವರಣದಲ್ಲಿ ಪ್ರತೀ ಭಾನುವಾರದಂದು ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ ಸಂಜೀವಿನಿ ಸಂತೆ ನಡೆಯಲಿದೆ. ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ತಿಂಡಿ-ತಿನಿಸುಗಳು, ನೆಲಕಡಲೆ ಚಿಕ್ಕಿ, ಮೂಡೆ, ಆಯುರ್ವೇದಿಕ್ ಉತ್ಪನ್ನ, ಫಿನಾಯಿಲ್, ವಿವಿಧ ಬಗೆಯ ಸೊಪ್ಪು ಹಾಗೂ ತರಕಾರಿ, ಅಣಬೆ, ಒಣ ಮೀನು, ಸಾಂಬಾರ್ ಮತ್ತು ಚಟ್ನಿ ಪೌಡರ್, ಬಟ್ಟೆಯ […]

ಬೆಂಗಳೂರು: ರಾಷ್ಟ್ರೀಯ ಟೆಕ್ ಶೃಂಗಸಭೆ – ಐಟಿ ಮತ್ತು ಆವಿಷ್ಕಾರ ಭವಿಷ್ಯದ ಡಿಕೋಡಿಂಗ್

ಬೆಂಗಳೂರು: ರಾಷ್ಟ್ರೀಯ ಟೆಕ್ ಶೃಂಗಸಭೆ, ಟೆಕ್‌ಎಕ್ಸ್-2023 ಮಾರ್ಚ್ 30 ರಂದು ಬೆಂಗಳೂರಿನ ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ರೆ. ಡೆನ್ಸಿಲ್ ಲೋಬೊ, ಎಸ್.ಜೆ. ಇವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಸೈಂಟ್ ಜೋಸೆಫ್ಸ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿಯಿಂದ ಮೊದಲ ಬಾರಿಗೆ ಡಿಕೋಡಿಂಗ್ ‘ದಿ ಫ್ಯೂಚರ್ ಆಫ್ ಐಟಿ ಮತ್ತು ಇನ್ನೋವೇಶನ್’ ಅನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಮುಖ ತಂತ್ರಜ್ಞಾನ ತಜ್ಞರು, ಶಿಕ್ಷಣ ತಜ್ಞರು, ಉದ್ಯಮ ನಾಯಕರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಇತ್ತೀಚಿನ ಪ್ರವೃತ್ತಿಗಳು, ಪ್ರಗತಿಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ […]