ಕೊಂಡಾಡಿ: ಏ. 02ರಂದು ಶ್ರೀರಾಮ ಭಜನಾ ಮಂಡಳಿ ಭಜನೆಕಟ್ಟೆ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ

ಕೊಂಡಾಡಿ: ಶ್ರೀರಾಮ ಭಜನಾ ಮಂಡಳಿ ಕೊಂಡಾಡಿ ಭಜನಕಟ್ಟೆ ಸುವರ್ಣ ಸಂಭ್ರಮದ ಕಾರ್ಯಕ್ರಮಗಳ ಉದ್ಘಾಟನೆಯು ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಕೆಮಾರು ಸಾಂದೀಪನಿ ಸಾಧನಾಶ್ರಮ ಇವರ ಉಪಸ್ಥಿತಿಯಲ್ಲಿ ಏ. 02.ಆದಿತ್ಯವಾರದಂದು ಕೊಂಡಾಡಿ ಭಜನೆಕಟ್ಟೆಯಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ. ಸುವರ್ಣ ಸಂಭ್ರಮದ ಕಾರ್ಯಕ್ರಮಗಳ ಉದ್ಘಾಟನೆ, ಲಾಂಛನ ಬಿಡುಗಡೆ, ನೆನೆದವರ ಮನದಲ್ಲಿ ಭಜನೆಗೆ ಚಾಲನೆ ನೀಡಲಾಗುವುದು ಎಂದು ಶ್ರೀರಾಮ ಭಜನಾ ಮಂಡಳಿ, ಶ್ರೀರಾಮ ಮಹಿಳಾ ಭಜನಾ ಮಂಡಳಿ, ಕೊಂಡಾಡಿ ಭಜನಕಟ್ಟೆ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಾದ್ಯಂತ 55 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ- 13,235 ವಿದ್ಯಾರ್ಥಿಗಳು ಹಾಜರು, 75 ಗೈರು

ಉಡುಪಿ: ಜಿಲ್ಲೆಯಾದ್ಯಂತ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು ಮೊದಲ ದಿನ ಯಾವುದೇ ಗೊಂದಲಗಳು ಇಲ್ಲದಂತೆ ನಡೆಯಿತು. 55 ಪರೀಕ್ಷಾ ಕೇಂದ್ರಗಳಲ್ಲಿ ಮಾತೃ ಭಾಷೆ ವಿಷಯದಲ್ಲಿ ನಡೆದ ಪರೀಕ್ಷೆಯಲ್ಲಿ 13,235 ವಿದ್ಯಾರ್ಥಿಗಳು ಹಾಜರಾಗಿದ್ದರು.75 ಮಂದಿ ಗೈರಾಗಿದ್ದರು. ಬೆಳಿಗ್ಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಉಡುಪಿಯ ಬೋರ್ಡ್ ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಭೇಟಿನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮಗಳ ಪಾಲನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭ ಡಿಡಿಪಿಐ ಗಣಪತಿ, ಡಯಟ್‌ ಅಧಿಕಾರಿ ಡಾ.ಅಶೋಕ್ ಕಾಮತ್ ಇದ್ದರು. ಮೊದಲ ದಿನದ ಪರೀಕ್ಷೆಯಲ್ಲಿ […]

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಂದಿನಿಂದ ಅಂದರೆ ಏಪ್ರಿಲ್ 1ರಿಂದ ಇಳಿಕೆಯಾಗಲಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಸರ್ಕಾರ ಕಡಿಮೆ ಮಾಡಿದೆ. ಇಂದಿನಿಂದಲೇ ಹೊಸ ದರಗಳನ್ನು ಜಾರಿಗೆ ತರಲಾಗಿದೆ. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 350 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಈಗ 91.50 ರೂಪಾಯಿ ಇಳಿಕೆಯಾಗಲಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 2024 ರ ಆರ್ಥಿಕ ವರ್ಷದ ಮೊದಲ ದಿನದಂದು ಕಡಿತಗೊಳಿಸಲಾಗಿದೆ. ಈ ಬದಲಾವಣೆಯನ್ನು ವಾಣಿಜ್ಯ ಅನಿಲ ಸಿಲಿಂಡರ್‌ಗಳ ವೆಚ್ಚದಲ್ಲಿ ಮಾತ್ರ ಮಾಡಲಾಗಿದೆ. ಮನೆಗಳಲ್ಲಿ ಬಳಸುವ 14.2 ಕೆಜಿ […]