ಕೌಶಲ್ಯ ಭಾರತ ಕೇಂದ್ರ ಹಾಗೂ Rooman Technolgies ವತಿಯಿಂದ ಉಚಿತ ತರಬೇತಿ ಹಾಗೂ ಉದ್ಯೋಗಾವಕಾಶ

ಮಣಿಪಾಲ: ಕೌಶಲ್ಯ ಭಾರತ ಕೇಂದ್ರ ಹಾಗೂ Rooman Technolgies ಮಣಿಪಾಲ ವತಿಯಿಂದ ಉಚಿತ ತರಬೇತಿ ಜೊತೆಗೆ ಉದ್ಯೋಗಾವಕಾಶ ತರಬೇತಿ ಕೇಂದ್ರವು ಹವಾನಿಯಂತ್ರಿತವಾಗಿದ್ದು ಜಾಗತಿಕ ದರ್ಜೆಯಲ್ಲಿ ರೂಪುಗೊಂಡಿದೆ. ಲಭ್ಯವಿರುವ ತರಬೇತಿಗಳು 1.ಸಾಫ್ಟ್ ವೇರ್ ಡೆವೆಲಪ್ ಮೆಂಟ್ 2.ಎಫ್ ಟಿ ಸಿ ಪಿ (ಫೀಲ್ಡ್ ಟೆಕ್ನೀಶಿಯನ್ ಕಂಪ್ಯೂಟರ್ ಫೆರಿಫೆರಲ್) 3.ಡೊಮೆಸ್ಟಿಕ್ ಐಟಿಹೆಲ್ಪ್ ಡೆಸ್ಕ್ ಅಟೆಂಡೆಂಟ್ 4.ಟೈಲರಿಂಗ್ ಕೋರ್ಸ್ ತರಬೇತಿಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9513222512/ 8904195713. ತರಗತಿಗಳು ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿವೆ.

ಕುಂದಾಪುರ: ಏಪ್ರಿಲ್ 30 ರೊಳಗೆ ಆಸ್ತಿ ತೆರಿಗೆ ಪಾವತಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ

ಕುಂದಾಪುರ: ಪುರಸಭಾ ವ್ಯಾಪ್ತಿಯ ವಾಸ್ತವ್ಯ, ವಾಣಿಜ್ಯ ಕಟ್ಟಡ ಹಾಗೂ ಖಾಲಿ ನಿವೇಶನಗಳ ಮಾಲೀಕರು, 2023-24 ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ರೊಳಗೆ ಪಾವತಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಜೂನ್ 30ರ ವರೆಗೆ ದಂಡ ರಹಿತವಾಗಿ ಆಸ್ತಿ ತೆರಿಗೆ ಪಾವತಿಸಲು ಅವಕಾಶವಿದ್ದು, ಜುಲೈ 1 ರ ನಂತರ ಪಾವತಿಸಿದ್ದಲ್ಲಿ ತಿಂಗಳಿಗೆ ಶೇ.2 ರ ದಂಡವನ್ನು ವಿಧಿಸಲಾಗುವುದು ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಗಾಂಧಿಯನ್ ಸೆಂಟರ್ ವಿದ್ಯಾರ್ಥಿಗಳಿಂದ ಐತಿಹಾಸಿಕ ಸ್ಥಳಗಳ ಭೇಟಿ

ಮಣಿಪಾಲ: ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ನ ವಿದ್ಯಾರ್ಥಿಗಳು ತಮ್ಮ ದೃಶ್ಯ ಕಲೆಗಳ ಅಧ್ಯಯನದ ಭಾಗವಾಗಿ ಮೂಡುಬಿದಿರೆ ಮತ್ತು ಮಂಗಳೂರಿನಲ್ಲಿರುವ ಐತಿಹಾಸಿಕ ಮತ್ತು ಕಲಾತ್ಮಕ ಮಹತ್ವವನ್ನು ಹೊಂದಿದ ಅನೇಕ ಸ್ಥಳಗಳಿಗೆ ಭೇಟಿ ನೀಡಿದರು. ಈ ಪ್ರದೇಶದ ಭಿತ್ತಿಚಿತ್ರಗಳನ್ನು ಅಧ್ಯಯನ ಮಾಡಲು ಅವರು ಸಾವಿರ ಕಂಬದ ಬಸದಿ, ಪ್ರಾಚೀನ ಜೈನ ಮಠ ಮತ್ತು ಸೇಂಟ್ ಅಲೋಶಿಯಸ್ ಚಾಪೆಲ್‌ಗೆ ಭೇಟಿ ನೀಡಿದರು. ಜೈನ ಮಠಾಧೀಶರಾದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರಯವರಿಯ ಸ್ವಾಮೀಜಿ ಅವರೊಂದಿಗೆ ಸಂವಾದ ನಡೆಸಿದ ಅವರು ತದನಂತರ […]

ಕಾರ್ಕಳ: ಏಪ್ರಿಲ್ 1 ರಿಂದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಹೊರರೋಗಿ ವಿಭಾಗದ ಸಮಯ ಬದಲಾವಣೆ

ಕಾರ್ಕಳ: ಇಲ್ಲಿನ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಹೊಸ ಹೊರರೋಗಿ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಹಲವು ಸೌಲಭ್ಯಗಳ ಸೇರ್ಪಡೆಯೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಜ್ಞ ವೈದ್ಯರ ಸೇರ್ಪಡೆಯೊಂದಿಗೆ 24*7 ಅಪಘಾತ ಮತ್ತು ತುರ್ತು ಚಿಕಿತ್ಸಾ ಸೌಲಭ್ಯವನ್ನು ಆರಂಭಿಸಲಾಗುವುದು. ಇದೀಗ ಸಾರ್ವಜನಿಕರ ಅಪೇಕ್ಷೆ ಮೇರೆಗೆ ಮತ್ತು ಅವರ ಅನುಕೂಲಕ್ಕಾಗಿ ಆಸ್ಪತ್ರೆಯ ಹೊರರೋಗಿ ವಿಭಾಗದ ವೈದ್ಯರ ಸಮಾಲೋಚನೆ ಸಮಯವನ್ನು ಬದಲಾಯಿಸಿಲಾಗಿದ್ದು, ಏಪ್ರಿಲ್ 1 ರಿಂದ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಅಪರಾಹ್ನ 3.30 […]

ರೈತರ ಬದುಕು ಬವಣೆಯ ಅನಾವರಣೆಯ “ಶ್ರೀಮಂತ”: ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿದ ಸೋನು ಸೂದ್

ಹಾಸನ್ ರಮೇಶ್ ಎಂಬ ಕಾವ್ಯನಾಮದಿಂದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ಹತ್ತು ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಟಿ.ಕೆ ರಮೇಶ್ ಇದೀಗ ತನ್ನದೇ ಆದ ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿಯಲ್ಲಿ ಪ್ರಥಮ ಬಾರಿಗೆ ಸ್ವತಂತ್ರವಾಗಿ “ಶ್ರೀಮಂತ” ಎಂಬ ಚಲನಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು, ಜಿ.ನಾರಾಯಣಪ್ಪ ಮತ್ತು ವಿ.ಸಂಜಯ್ ಬಾಬು ಸಹನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. “ಶ್ರೀಮಂತ” ಚಲನಚಿತ್ರವು ರೈತರ ದೈನಂದಿನ ಬದುಕು ಬವಣೆಯ ಅನಾವರಣವಾಗಿದ್ದು ಆತನೇ ಜಗತ್ತಿನ ದೊಡ್ಡ ಶ್ರೀಮಂತ ಎಂದು ಸಾಕ್ಷೀಕರಿಸುವ, ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ, ಹಾಡು […]