ಇಂದೋರ್: ಮಂದಿರದೊಳಿದ್ದ 100 ವರ್ಷಕ್ಕೂ ಹಳೆಯದಾದ 60 ಅಡಿ ಆಳದ ಬಾವಿಯೊಳಗೆ ಬಿದ್ದು 35 ಜನರ ಸಾವು

ಇಂದೋರ್‌: ಇಲ್ಲಿನ ಸ್ನೇಹ ನಗರದ ಪಟೇಲ್ ನಗರದಲ್ಲಿರುವ ಬೇಲೇಶ್ವರ ಮಹಾದೇವ ದೇವಾಲಯದಲ್ಲಿ 100 ವರ್ಷಕ್ಕೂ ಹಳೆಯದಾದ 60 ಅಡಿ ಆಳದ ಮೆಟ್ಟಿಲುಬಾವಿಯೊಳಗೆ ಹಠಾತ್ತಾಗಿ ಬಿದ್ದು, 35 ಜನರು ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲು ದೇವಸ್ಥಾನದಲ್ಲಿ ಜನ ಜಮಾಯಿಸಿದ್ದರು. ತಾವು ಕುಳಿತಿದ್ದ ನೆಲದ ಕೆಳಗೆ 60 ಅಡಿಯ ಬಾವಿ ಇರುವುದು ಅವರಿಗೆ ತಿಳಿದಿರಲಿಲ್ಲ. ಈ ಹಳೆಯ ಬಾವಿಯನ್ನು ತಂತಿ ಜಾಲರಿ ಮತ್ತು ಟೈಲ್ಸ್ ಗಳಿಂದ ಮುಚ್ಚಲಾಗಿತ್ತು. ರಾಮನವಮಿಯಾದ್ದರಿಂದ ಸಾಮರ್ಥ್ಯಕ್ಕಿಂತ ಹೆಚ್ಚು ಜನರು […]

ಕಾರ್ಕಳ ಬಂಗ್ಲೆಗುಡ್ಡೆ ಬಳಿ ಅತಿ ವೇಗದಿಂದ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಆಂಬುಲೆನ್ಸ್ ಪಲ್ಟಿ

ಕಾರ್ಕಳ: ಬಂಗ್ಲೆ ಗುಡ್ಡೆ ಬಳಿ, ಖಾಸಗಿ ಆಸ್ಪತ್ರೆಯ ರೋಗಿಗಳನ್ನು ತಮ್ಮ ಮನೆಗೆ ಬಿಡಲು ಕಾರ್ಕಳದಿಂದ ಕಡತಲಕ್ಕೆ ಹೋಗುವಾಗ ಬಂಗ್ಲೆ ಗುಡ್ಡೆ ಬಳಿ ಅತಿ ವೇಗದಿಂದ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಆಂಬುಲೆನ್ಸ್ ಮಾರ್ಗದಲ್ಲಿ ಪಲ್ಟಿ ಯಾದ ಘಟನೆ  ಸಂಜೆ ನಿನ್ನೆ ಸಂಜೆ ನಡೆದಿದೆ . ಈ ವೇಳೆಯಲ್ಲಿ ಅಂಬುಲೆನ್ಸಿನ ಒಳಗಿದ್ದವರು ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ.

ಆನ್‌ಲೈನ್ ತಂತ್ರಾಂಶದ ಮೂಲಕ ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಉದ್ದಿಮೆದಾರರು 2023-24 ನೇ ಸಾಲಿನಲ್ಲಿ ವ್ಯಾಪಾರ ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿಯುಳ್ಳ ಉದ್ದಿಮೆ ಪರವಾನಿಗೆ ಪಡೆಯಬೇಕಾಗಿದ್ದು, ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿಯುಳ್ಳ ಉದ್ದಿಮೆ ಪರವಾನಿಗೆ ಪಡೆಯಲು ಬಾಕಿ ಇರುವವರು ಹಾಗೂ ನವೀಕರಿಸದೇ ಇರುವವರು ಕೂಡಲೇ ದಂಡ ಪಾವತಿಯೊಂದಿಗೆ ವೆಬ್‌ಸೈಟ್ http://www.mrc.gov.in/TradeLicense/login ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 2023 ರ ಏಪ್ರಿಲ್ 1 ರ ನಂತರ 2023-24 ನೇ ಸಾಲಿನ ಪರವಾನಿಗೆ ನವೀಕರಣಕ್ಕೆ ಅವಕಾಶ […]

ಉಡುಪಿ: ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ಹಾಗೂ ಖಾಲಿ ನಿವೇಶನ ಮಾಲೀಕರು ಹಾಗೂ ಅಧಿಭೋಗದಾರರಿಗೆ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ಶೇ.3 ರಷ್ಟು ಹೆಚ್ಚಿಸಲಾಗಿದ್ದು, ಏಪ್ರಿಲ್ 1 ರಿಂದ 30 ರ ಒಳಗೆ ಪಾವತಿಸಿದ್ದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು. ಮೇ 1 ರಿಂದ ಜೂನ್ 30 ರ ಒಳಗೆ ಪಾವತಿಸಿದ್ದಲ್ಲಿ ದಂಡ ರಹಿತವಾಗಿ ಪಾವತಿಸಲು ಅವಕಾಶವಿದ್ದು, ಜುಲೈ 1 ರ ನಂತರ ಪಾವತಿಸುವವರಿಗೆ ಆಸ್ತಿ ತೆರಿಗೆಯ ಮೇಲೆ ಪ್ರತಿ ತಿಂಗಳು ಶೇ.2 ರಷ್ಟು ದಂಡ ವಿಧಿಸಲಾಗುವುದು […]

ಪರ್ಪಲೆ ಗಿರಿಯಲ್ಲಿ ಹೈ ಮಾಸ್ಟ್ ದೀಪ ಅಳವಡಿಕೆ

ಕಾರ್ಕಳ:   ಶ್ರೀ ಕ್ಷೇತ್ರ ಅತ್ತೂರು ಪರ್ಪಲೆ ಗಿರಿಯಲ್ಲಿ ದಾನಿಗಳೊಬ್ಬರು ಕೂಡ ಮಾಡಿದ ಹೈಮಾಸ್ಟ್ ದೀಪವನ್ನು  ರಾಮನವಮಿಯ ಪುಣ್ಯ ದಿನದಂದು ಅಳವಡಿಸಲಾಯಿತು. ಬಾಲಾಜಿ ಶಿಬಿರದ ಗುರುಸ್ವಾಮಿ ಬಾಲಕೃಷ್ಣ ಹೆಗ್ಡೆಯವರು ಗುಂಡಿಯನ್ನು ಒತ್ತುವುದರ ಮೂಲಕ ಉದ್ಘಾಟನೆ ಮಾಡಿದರು.   ಈ ಸಂದರ್ಭ ಟ್ರಸ್ಟಿಗಳಾದಂತಹ ಪ್ರಶಾಂತ್ ನಾಯಕ್, ಚಂದ್ರಶೇಖರ್ ಶೆಟ್ಟಿ ಪುನರತ್ಥಾನ ಸಮಿತಿಯಲ್ಲಿರುವ ಬೋಳ ಪ್ರಶಾಂತ್ ಕಾಮತ್, ನಿತ್ಯಾನಂದ ಪೈ, ಹಿಂ.ಜಾ.ವೇ ಸಂಘಟನೆಯ ಪ್ರಮುಖರಾದ ಪ್ರಕಾಶ್ ಕುಕ್ಕೆಹಳ್ಳಿ, ರಮೇಶ್ ಕಲ್ಲೊಟ್ಟೆ, ಗುರುಪ್ರಸಾದ್ ನಾರಾವಿ , ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.