ಮಲ್ಪೆ ತೇಲುವ ಸೇತುವೆ ಮುರಿದಿಲ್ಲ; ನಿರ್ವಹಣೆಗಾಗಿ ಸೇತುವೆ ಕಳಚಲಾಗಿದೆ: ನಿರ್ವಾಹಕರಿಂದ ಸ್ಪಷ್ಟನೆ
ಮಲ್ಪೆ: ಮಲ್ಪೆಯ ಫ್ಲೋಟಿಂಗ್ ಬ್ರಿಡ್ಜ್ನ್ನು ಎರಡು ತಿಂಗಳಿಗೊಮ್ಮೆ ನಿರ್ವಹಣೆ ಮಾಡುವ ಹಿನ್ನೆಲೆ ಬ್ರಿಡ್ಜ್ ಅನ್ನು ತೆರವುಗೊಳಿಸಲಾಗಿದೆ. ಆದರೆ ಫ್ಲೋಟಿಂಗ್ ಬ್ರಿಡ್ಜ್ ಮುರಿದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಫ್ಲೋಟಿಂಗ್ ಬ್ರಿಡ್ಜ್ನ ತಳಭಾಗದಲ್ಲಿ ಕಪ್ಪೆ ಚಿಪ್ಪು ಮೊದಲಾದವುಗಳು ಸೇರಿಕೊಳ್ಳುವುದರಿಂದ ಅದನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಹವಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಐದು ದಿನದವರೆಗೆ ಬಲವಾದ ಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಸೇತುವೆಯ ನಿರ್ವಹಣೆ ಮತ್ತು ಹವಮಾನ ಇಲಾಖೆಯ ಸೂಚನೆಯ ಹಿನ್ನೆಲೆ ಸೇತುವೆ ತೆಗೆಯಲಾಗಿದೆ ಹೊರತು ಸೇತುವೆ ತುಂಡಾಗಿಲ್ಲ ಎಂದು […]
ಏ.06 ರಂದು ಅಂಬಾಗಿಲು ಶ್ರೀ ವೀರಾಂಜನೇಯ ಗುಡಿ 61ನೇ ಹನುಮ ಜಯಂತಿ ಮಹೋತ್ಸವ
ಉಡುಪಿ: ಶ್ರೀ ವೀರಾಂಜನೇಯ ಗುಡಿ ಹಾಗೂ ಶ್ರೀ ಜನತಾ ವ್ಯಾಯಾಮ ಶಾಲೆ (ರಿ.) ಅಂಬಾಗಿಲು – ಪುತ್ತೂರು 61ನೇ ಹನುಮ ಜಯಂತಿ ಮಹೋತ್ಸವ ಹಾಗೂ ದ್ವಿತೀಯ ವರ್ಧಂತ್ಯೋತ್ಸವ ದಿನಾಂಕ : 06-04-2023ನೇ ಗುರುವಾರ ಬೆಳಿಗ್ಗೆ 7.01 ರಿಂದ ಪುಣ್ಯಾಹ ಶುದ್ದಿ, ನವಕಲಾ ಸಾನಿಧ್ಯ ಹೋಮ, ವಾಯುಸ್ತುತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮಧ್ಯಾಹ್ನ 12.35ಕ್ಕೆ ಮಹಾ ಅನ್ನಸಂತರ್ಪಣೆ ರಾತ್ರಿ ಗಂಟೆ 7.00ಕ್ಕೆ ಹನುಮ ಜಯಂತಿಯ ವಿಶೇಷ ಪೂಜೆ ಪ್ರಸಾದ ವಿತರಣೆ […]
ಬಜೆಟ್ನ ಹೊಸ ದರ ನಾಳೆಯಿಂದ ಜಾರಿ-ಯಾವುದು ದುಬಾರಿ? ಯಾವುದು ಅಗ್ಗ?
ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.ಇದೇ ಶನಿವಾರದಿಂದ (ಏಪ್ರಿಲ್ 1) ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಕೇಂದ್ರ ಬಜೆಟ್ನಲ್ಲಿ ಘೋಷಿಸಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಕೆಲವು ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಹಲವು ಬದಲಾವಣೆಗಳು ಆಗಲಿವೆ. ಹಣದುಬ್ಬರದ ಹೊರೆ ಶ್ರೀಸಾಮಾನ್ಯನ ಮೇಲೆ ಹೆಚ್ಚಾಗಲಿದೆ. ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಹಲವು ವಸ್ತುಗಳು ದುಬಾರಿಯಾಗಲಿವೆ. ಇದು ನೇರವಾಗಿ ಜನಸಾಮಾನ್ಯರ […]
ನಟ ಪ್ರಮೋದ್ ಶೆಟ್ಟಿ ಕುಟುಂಬದವರಿಂದ ಶ್ರೀಕೃಷ್ಣ ಮಠ ಭೇಟಿ
ಉಡುಪಿ: ಕನ್ನಡ ಚಲನಚಿತ್ರ ನಟ ಪ್ರಮೋದ್ ಶೆಟ್ಟಿಯವರು ಕುಟುಂಬ ಸಮೇತರಾಗಿ ಶ್ರೀಕೃಷ್ಣಮಠಕ್ಕಾಗಮಿಸಿ ಕೃಷ್ಣದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಾರಾಯಣ ಶರಳಾಯ ಉಪಸ್ಥಿತರಿದ್ದರು.
ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಆಚರಣೆ
ಉಡುಪಿ: ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಶ್ರೀದೇವರಿಗೆ ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ, ತೊಟ್ಟಿಲು ಸೇವೆ, ವಸಂತ ಪೂಜೆ, ಅಷ್ಟಾವಧಾನ ಸೇವೆ, ಪಲ್ಲಕಿ ಉತ್ಸವ, ರಾತ್ರಿ ಪೇಟೆ ಉತ್ಸವ ನಡೆಯಿತು. ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವಿನಾಯಕ ಭಟ್ ನೆರವೇರಿಸಿದರು. ದೇವಳದ ಆಡಳಿತ ಮೊಕ್ತೇಸರರಾದ ಪಿ ವಿ ಶೆಣೈ, ಜಿ ಎಸ್ ಬಿ, ಯುವಕ ಮಂಡಳಿ, ಮಹಿಳಾ ಮಂಡಳಿಯ ಸದಸ್ಯರು, ಸಮಾಜ ಭಾಂದವರು ಉಪಸ್ಥಿತರಿದ್ದರು.