ಮತದಾನ ಜಾಗೃತಿಗಾಗಿ ಮತದಾರರ ಜಾಗೃತ ವೇದಿಕೆ ಸ್ಥಾಪನೆ: ಪ್ರಸನ್ನ ಹೆಚ್

ಉಡುಪಿ: ಮತದಾರರೆಲ್ಲಾ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಸಲುವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಜಾಗೃತ ವೇದಿಕೆಯನ್ನು ಸ್ಥಾಪಿಸಲಾಗಿದ್ದು, ಕಚೇರಿಯ ಮುಖ್ಯಸ್ಥರು ಇದರ ಅಧ್ಯಕ್ಷರಾಗಿದ್ದು, ಉಳಿದ ಸಿಬ್ಬಂದಿಗಳು ಸದಸ್ಯರಾಗಿರುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲೆಯ ಸ್ವೀಪ್ ಸಮಿತಿ ಅಧ್ಯಕ್ಷ ಪ್ರಸನ್ನ ಹೆಚ್ ಹೇಳಿದರು. ಅವರು ಮಂಗಳವಾರ ಮತದಾರರ ಜಾಗೃತಿ ವೇದಿಕೆಗಳ ಸದಸ್ಯರಿಗೆ ಆನ್‌ಲೈನ್ ವೆಬಿನಾರ್ ಮೂಲಕ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ ಸಾಲಿಗಿಂತ ಶೇ. 10 […]
ನವೀಕೃತ ಕಾಂಕ್ರೀಟ್ ರಸ್ತೆ ಬಿರುಕು..!!. ಕಳಪೆ ಮಟ್ಟದ ಕಾಮಗಾರಿಗೆ ಆಕ್ರೋಶ.

ಉಡುಪಿ:ಭೂಮಿ ಕಂಪಿಸಿದಾಗ ರಸ್ತೆಗಳು ಬಿರುಕು ಬಿದ್ದಂತೆ, ಉಡುಪಿಯ ಶಾರದ ಕಲ್ಯಾಣ ಮಂಟಪದಿಂದ ಬೀಡಿನಗುಡ್ಡೆಯ ನವೀಕೃತ ಕಾಂಕೀಟು ರಸ್ತೆ ಬಿರುಕುಬಿಟ್ಟಿದೆ. ಒಮ್ಮೆಗೆ ಜನರನ್ನು ಆತಂಕ ಒಳಾಗಗುವಂತೆ ಮಾಡಿದರೂ, ಇಲ್ಲಿ ಯಾವುದೂ ಭೂಮಿ ಕಂಪಿಸಿಲ್ಲ. ಕಳೆದ ಹತ್ತು ದಿನಗಳ ಹಿಂದಷ್ಟೆ ನಿರ್ಮಾಣ ಮಾಡಿದ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿರುವುದು ಅತೀ ಕಳಪೆಮಟ್ಟದ ಕಾಮಗಾರಿಗೆ ಸಾಕ್ಷಿಯಾಗಿದೆ. ಹತ್ತಾರು ವರ್ಷವಾದರೂ ಸುಸ್ಥಿತಿಯಲ್ಲಿರ ಬೇಕಾದ ಕಾಂಕ್ರೀಟ್ ರಸ್ತೆ ಕೇವಲ ಹತ್ತೇ ದಿನಕ್ಕೆ ಬಿರುಕು ಬಿಟ್ಟಿರುವುದು, ಸಾರ್ವಜನಿಕರ ಹಣ ಪೋಲಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. […]
ಕಾರ್ಕಳ: ಸಾಂಸ್ಕೃತಿಕ ವೈಭವ ಕಾರ್ಯಕ್ರಮ

ಉಡುಪಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ರವಿವಾರ ಕಾರ್ಕಳ ಬೈಲೂರು ಉಮಿಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕಿನಲ್ಲಿ ನಡೆಯಿತು. ಯಕ್ಷರಂಗಾಯಣ ಅಧ್ಯಕ್ಷ ಜೀವನ್ ರಾಂ ಸುಳ್ಯ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಪೂಜಾರಿ, ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಪೂಜಾರಿ, ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷ […]
ಲೈನ್ ಶಿಫ್ಟಿಂಗ್ ಕಾಮಗಾರಿ: ಮಾ. 31 ರಂದು ವಿದ್ಯುತ್ ವ್ಯತ್ಯಯ

ಉಡುಪಿ: ಲೈನ್ ಶಿಫ್ಟಿಂಗ್ ಕಾಮಗಾರಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 110 ಕೆ.ವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬೈಲೂರು ಎಕ್ಸ್ಪ್ರೆಸ್, ಕೆ.ಹೆಚ್.ಬಿ, ಪದವು ಮತ್ತು ನಕ್ರೆ ಫೀಡರ್‌ಗಳ ಬೈಲೂರು, ನೀರೆ, ಎರ್ಲಪಾಡಿ, ಕೌಡೂರು, ಪರಪು, ಗುಂಡ್ಯಡ್ಕ, ಬೋರ್ಗಲ್ ಗುಡ್ಡೆ, ಕುಂಟಾಡಿ, ಪಳ್ಳಿ, ಆನಂದಿ ಮೈದಾನ, ನಕ್ರೆ, ಪೊಸನೊಟ್ಟು, ಜಾರ್ಕಳ, ಕೆ.ಹೆಚ್.ಬಿ. ಕಾಲೋನಿ, ಜೋಡುರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾರ್ಚ್ 31 ರಂದು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ […]
ಬೈರಂಪಳ್ಳಿ ಗ್ರಾಮದಲ್ಲೊಂದು ಗ್ರಾಮೀಣ ಸೊಗಡಿನ ಮಾದರಿ ವೈವಾಹಿಕ ಔತಣ ಕೂಟ

ಉಡುಪಿ: ಇಲ್ಲಿನ ಹರಿಖಂಡಿಗೆಯ ಬೈರಂಪಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ ವೈವಾಹಿಕ ಔತಣ ಕೂಟವು ಇತರರಿಗೆ ಮಾದರಿಯೆನಿಸುವಂತ್ತಿತ್ತು. ಗ್ರಾಮದಲ್ಲಿ ವಿನೂತನ ಅಪರೂಪದ ಅವಿಸ್ಮರಣೀಯ ನೂತನ ವಿವಾಹಿತರ ಔತಣ ಕೂಟ ಸಮಾರಂಭ. ಈಗಿನ ಅಬ್ಬರ ಆಡಂಬರ ತಮ್ಮ ಶ್ರೀಮಂತಿಕೆಯ ಪ್ರದರ್ಶನದ ಲವಲೇಷವೂ ಇರದ ಕಾರ್ಯಕ್ರಮ. ಮೂಲತಃ ಕೃಷಿಕ ಬೈರಂಪಳ್ಳಿ ಗ್ರಾಮದ ನಾಯಕ್ ಕುಟುಂಬದ ವರನ ವಿವಾಹವು, ಕಾರ್ಕಳದಲ್ಲಿ ಉದ್ಯಮಿಯಾಗಿರುವ ಮುರೂರು ಪ್ರಭು ಕುಟುಂಬದ ವಧುವಿನೊಂದಿಗೆ ನಡೆದ ಸಂತೋಷದ ಔತಣಕೂಟವು ಗ್ರಾಮೀಣ ಸೊಗಡಿನಲ್ಲಿ ನೆರವೇರಿಸಿದ್ದು ಇಂದಿನ ದಿನಗಳಲ್ಲಿ ವಿಶೇಷವಾಗಿದ್ದು ಅಪಾರ ಜನಮನ್ನಣೆಗೆ […]