ಎಸಿ ಮೆಷಿನ್ ಫಿಟ್ ಮಾಡಲು ಹೋಗಿ ಬಂಟ್ವಾಳದ ಯುವಕ ಮಹಡಿಯಿಂದ ಬಿದ್ದು ದಾರುಣ ಸಾವು!
ಮಂಗಳೂರು, ಮಾ.29 : ಹೊಸತಾಗಿ ಎಸಿ ಮೆಷಿನ್ ಫಿಟ್ ಮಾಡುತ್ತಿದ್ದಾಗ ಬಹುಮಹಡಿ ಕಟ್ಟಡದ ‘ಒಂಬತ್ತನೇ ಮಹಡಿಯಿಂದ ಆಯತಪ್ಪಿ ಬಿದ್ದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ನಂತೂರಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಮಣಿಹಳ್ಳಿ ನಿವಾಸಿ ವಿನಯ್ ತಾವ್ರೊ (23) ಮೃತ ಯುವಕ ನಂತೂರಿನ ಹಮಾರಾ ರೆಫ್ರಿಜರೇಟರ್ ಕಂಪೆನಿಯಲ್ಲಿ ಕೆಲಸಕ್ಕಿದ್ದ ವಿನಯ್, ನಂತೂರಿನ ಮೌಂಟ್ ಟಿಯಾರಾ ಅಪಾರ್ಟೆಂಟ್ ನಲ್ಲಿ ಎಸಿ ಮೆಷಿನ್ ಫಿಟ್ ಮಾಡಲು ತೆರಳಿದ್ದ ಒಂಬತ್ತನೇ ಮಹಡಿಯ ಮನೆಯ ಆವರಣ ಗೋಡೆಯ ಹೊರಭಾಗದಲ್ಲಿ ವಿನಯ್ ಮತ್ತು ಇನ್ನೊಬ್ಬ […]
ನಾಲ್ಕು ಆರೋಗ್ಯಕರ ಚಿರತೆ ಮರಿಗಳಿಗೆ ಜನ್ಮವಿತ್ತ ನಮೀಬಿಯಾದಿಂದ ಬಂದ ಚಿರತೆ ಸೀಯಾಯ
ಭೋಪಾಲ್: ಭಾರತದ ಚಿರತೆಯ ಆಮದುಗಳ ತವರು ಮಧ್ಯಪ್ರದೇಶದಲ್ಲಿರುವ ಕುನೊ ರಾಷ್ಟ್ರೀಯ ಉದ್ಯಾನವನವು ಪ್ರಾಜೆಕ್ಟ್ ಚೀತಾದ ಭಾಗವಾಗಿ ತನ್ನ ಮೊದಲ ಮರಿ ಚಿರತೆಗಳನ್ನು ಸ್ವಾಗತಿಸಿದೆ. ಚಿರತೆಗಳ ಸಂರಕ್ಷಣೆ ಮತ್ತು ಮರುಪರಿಚಯ ಯೋಜನೆಯಲ್ಲಿ ತೊಡಗಿರುವ ಅಧಿಕಾರಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಚಿರತೆ ಮರಿಗಳ ಜನನವು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ತಮ್ಮ ಹೊಸ ಪರಿಸರಕ್ಕೆ ಉತ್ತಮವಾಗಿ ಹೊಂದಿಕೊಳ್ಳುವ ಸಕಾರಾತ್ಮಕ ಸಂಕೇತವಾಗಿದೆ ಎಂದಿದ್ದಾರೆ. ಚಿರತೆಗಳ ಸ್ಥಳೀಯ ಅಳಿವಿನ ಏಳು ದಶಕಗಳ ನಂತರ, ಭಾರತವು ಸೆಪ್ಟೆಂಬರ್ 2022 ರಲ್ಲಿ ತನ್ನ ಮಧ್ಯಪ್ರದೇಶದ ಕಾಡಿನಲ್ಲಿ […]
ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಕ್ರಿಕೆಟ್ ಆಟಗಾರ ರವಿಶಾಸ್ತ್ರಿ
ಉಡುಪಿ: ಖ್ಯಾತ ಕ್ರಿಕೆಟ್ ಆಟಗಾರ ಮತ್ತು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿಯವರು ಶ್ರೀಕೃಷ್ಣಮಠಕ್ಕೆ ಆಗಮಿಸಿ ಕೃಷ್ಣದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರದಾದ ವರದರಾಜ ಭಟ್,ವಾದಿರಾಜ ಪೆಜತ್ತಾಯ,ವ್ರಜನಾಥ ಆಚಾರ್ಯ,ಲಾತವ್ಯ ಆಚಾರ್ಯ ,ಅಶ್ವಿನ್ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಮಂಗಳವಾರದಂದು ಅವರು ಪ್ರತಿವರ್ಷದಂತೆ ಈ ಬಾರಿಯೂ ಕಾರ್ಕಳ ಕರ್ವಾಲಿನ ಯರ್ಲಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೂ ಭೇತಿ ನೀಡಿ ಪೂಜೆ ಸಲ್ಲಿಸಿದ್ದರು.
ನಗರದ ಬಸ್ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಕುಸಿದುಬಿದ್ದು ವ್ಯಕ್ತಿ ಸಾವು
ಉಡುಪಿ:ಸರ್ವಿಸ್ ಬಸ್ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದ ವ್ಯಕ್ತಿಯನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು, ಸಾರ್ವಜನಿಕರ ಸಹಕಾರದೊಂದಿಗೆ ರಕ್ಷಿಸಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ವ್ಯಕ್ತಿಯು ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮೃತ ವ್ಯಕ್ತಿಯ ಹೆಸರು ಕೃಷ್ಣ, 55 ವರ್ಷ, ಹಿರಿಯಡಕ ಸಮೀಪದ ನಿವಾಸಿಯೆಂದು ತಿಳಿದುಬಂದಿದೆ. ಸಂಬಂಧಿಕರು ಕೂಡಲೇ ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ
ಮಾ. 31ರಿಂದ SSLC ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಉಡುಪಿ: ಎಸೆಸೆಲ್ಸಿ(SSLC) ವಾರ್ಷಿಕ ಪರೀಕ್ಷೆಗಳು ಮಾ. 31ರಿಂದ ಎ.15ರವರೆಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಪರೀಕ್ಷೆಗಳನ್ನು ಸುಸೂತ್ರ ಹಾಗೂ ದೋಷರಹಿತವಾಗಿ ನಡೆಸಲು ಸಲುವಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಉಡುಪಿಯಲ್ಲಿ 55 ಮತ್ತು ದ.ಕ. ಜಿಲ್ಲೆಯ 98 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ 7,185 […]