ಸಾಲಿಗ್ರಾಮ ಪ.ಪಂಚಾಯತ್ ವ್ಯಾಪ್ತಿಯ ಅನಧಿಕೃತ ಬ್ಯಾನರ್ ಗಳ ತಕ್ಷಣ ತೆರವಿಗೆ ಸೂಚನೆ
ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಅನಧಿಕೃತ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಹಾಗೂ ಕಟೌಟ್‌ಗಳನ್ನು ಈ ಕೂಡಲೇ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಅನಧಿಕೃತ ಬ್ಯಾನರ್, ಇತ್ಯಾದಿಗಳನ್ನು ಪಟ್ಟಣ ಪಂಚಾಯತ್ ವತಿಯಿಂದ ಯಾವುದೇ ಸೂಚನೆ ನೀಡದೇ ತೆರವುಗೊಳಿಸಲಾಗುವುದು. ಸಾರ್ವಜನಿಕರು ಬ್ಯಾನರ್ ಇತ್ಯಾದಿಗಳನ್ನು ಅಳವಡಿಸಲು ಅರ್ಜಿ ಸಲ್ಲಿಸುವಾಗ, ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್, ಕಟೌಟ್ ಅಳವಡಿಸುವ ಸ್ಥಳ, ಅವುಗಳನ್ನು ಅಳವಡಿಸುವ ದಿನಾಂಕ ಮತ್ತು ತೆರವುಗೊಳಿಸುವ ದಿನಾಂಕವನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಪಟ್ಟಣ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು […]
ಸೆಟ್ಟೇರುವುದಕ್ಕೂ ಮುನ್ನವೇ ವಿವಾದ ಸುಳಿಯಲ್ಲಿ ಕಾಂತಾರ-2: ನಿತ್ಯವೂ ದೈವಕ್ಕೆ ಅಪಚಾರ ನಡೆಯುತ್ತಿರುವುದನ್ನು ನೋಡಿ ಬೇಸತ್ತ ತುಳುವರು
ಬೆಂಗಳೂರು: ದೇಶ ಮಾತ್ರವಲ್ಲ ವಿದೇಶಗಳಲ್ಲೂ ತುಳುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಕಾಂತಾರ ಚಲನಚಿತ್ರವು ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಲೇ ಬಂದಿದೆ. ವರಾಹರೂಪಂ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪದಿಂದ ಹಿಡಿದು ದೈವಾರಾಧನೆಗೆ ಅಪಚಾರ ಮಾಡಿದ ಆರೋಪದವರೆಗೆ ಕಾಂತಾರ ಚಿತ್ರ ಮತ್ತು ಅದರ ನಿರ್ಮಾತೃಗಳ ಸುತ್ತ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳು ಸುತ್ತಿಕೊಂಡಿವೆ. ಇದೀಗ ಈ ಆರೋಪಕ್ಕೆ ಹೊಸ ಸೇರ್ಪಡೆಯಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದದಂತೆ ಅಲಂಕಾರ ಮಾಡಿರುವುದು ತುಳುವರ ಕೋಪಕ್ಕೆ ಕಾರಣವಾಗಿದೆ. […]
ಉಡುಪಿ ಹಾಗೂ ಬ್ರಹ್ಮಾವರದಲ್ಲಿ ಸ್ಮಶಾನ ಭೂಮಿಗಾಗಿ ಅರ್ಜಿ ಆಹ್ವಾನ
ಉಡುಪಿ: ಜಿಲ್ಲೆಯ ಎಲ್ಲಾ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದ್ದು, ಉಡುಪಿ ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ, ಸಾರ್ವಜನಿಕರಿಗೆ ಅವರ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಸ್ಮಶಾನ ನಿರ್ಮಾಣಕ್ಕೆ ಜಮೀನಿನ ಅವಶ್ಯಕತೆ ಇದ್ದಲ್ಲಿ ಬೇಡಿಕೆಗಳನ್ನು ತಾಲೂಕಿನ ತಹಶೀಲ್ದಾರರು ಅಥವಾ ಗ್ರಾಮ ವ್ಯಾಪ್ತಿಯ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಸ್ಮಶಾನ ಭೂಮಿ ಅವಶ್ಯಕತೆಯ ಬಗ್ಗೆ ಅರ್ಜಿ ಸಲ್ಲಿಸುವ ವ್ಯಕ್ತಿಗಳು ಮನವಿಯ ಜೊತೆಗೆ ಹೆಸರು, ತಂದೆಯ ಹೆಸರು, ಆಧಾರ್ ಕಾರ್ಡ್ ನಂಬರ್, […]
ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮತಿ ಕ್ಲಿನಿಕ್ ಕಾರ್ಯಾರಂಭ
ಉಡುಪಿ: ಮಹಿಳೆಯರು ತಮ್ಮ ಆರೋಗ್ಯದ ಸಮಸ್ಯೆಗಳ ಬಗ್ಗೆ ಸಕಾಲದಲ್ಲಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳದಿದ್ದಲ್ಲಿ ಅದರಿಂದ ಆಕೆಯ ಆರೋಗ್ಯ ಮಾತ್ರವಲ್ಲದೇ, ಆಕೆಯ ಕುಟುಂಬ ಮತ್ತು ಸಮಾಜದ ಆರೋಗ್ಯದ ಮೇಲೆ ಸಹ ವ್ಯತಿರಿಕ್ತ ಪರಿಣಾಮ ಉಂಟಾಗಲಿದ್ದು, ಮಹಿಳೆಯರು ಸುಸ್ಥಿರ ಆರೋಗ್ಯವಂತರಾಗಿರಲು ಆಯುಷ್ಮತಿ ಕ್ಲಿನಿಕ್‌ಗಳು ಸಹಕಾರಿಯಾಗಲಿವೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಹೇಳಿದರು. ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಹಾಗೂ […]
ಅಂಗವಿಕಲ ಮಗಳನ್ನು ಮರೆತ ಕುಟುಂಬ: ಮತ್ತೆ ಅಪತ್ಭಾಂಧವರಾದ ವಿಶು ಶೆಟ್ಟಿ
ಉಡುಪಿ : ತಾಯಿ ಅನಾರೋಗ್ಯ ಪೀಡಿತೆ ಎಂದು ಆಕೆಯ ಅಂಗವಿಕಲೆ ಮಗಳನ್ನು ಹೆಬ್ರಿ ರಾಘವೇಂದ್ರ ಆಸ್ಪತ್ರೆಯಲ್ಲಿ ದಾಖಲಿಸಿ ಕೈ ತೊಳೆದುಕೊಂಡ ಶಂಕರನಾರಾಯಣ ಮೂಲದ ಕುಟುಂಬವೊಂದು ಇದೀಗ ಜಾಣ ಕುರುಡು ತೋರಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ವಿದ್ಯಮಾನ ನಡೆದಿದ್ದು, ಆಪದ್ಭಾಂಧವ ವಿಶು ಶೆಟ್ಟಿ ಅವರು ಇದೀಗ ಎರಡನೇ ಬಾರಿಗೆ ಸ್ಪಂದಿಸಿ ಯುವತಿಯನ್ನು ಕಾರ್ಕಳ ಆಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆ ಮತ್ತು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದಾರೆ. ಭಿನ್ನ ಸಾಮರ್ಥ್ಯ ಅಂಗವಿಕಲೆ ಯುವತಿಯ ಬಗ್ಗೆ ಕುಟುಂದವರಿಗೆ ಪೋನ್ ಮೂಲಕ ಸಂಪರ್ಕಿಸಿದರೆ ಯುವತಿಗೂ […]