ಶಿರೂರು: ಮರದಿಂದ ಬಿದ್ದು ಬಾಲಕ ಮೃತ್ಯು

ಬೈಂದೂರು: ಮಾವಿನ ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ. ಶಿರೂರು ಗ್ರಾಮದಲ್ಲಿ 15ವರ್ಷದ ಬಾತ್ಯಾ ನೌಮನ್ ಮೃತದುರ್ದೈವಿ. ಈತ ಮಾ.12ರಂದು ಮನೆಯ ಬಳಿ ಮಾವಿನ ಕಾಯಿ ತೆಗೆಯಲು ಮಾವಿನ ಮರದ ಹತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು. ಕೂಡಲೇ ಆತನನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ […]
ರಾಹುಲ್ ಗಾಂಧಿಯವರ “ಸಾವರ್ಕರ್ ಅಲ್ಲ” ಹೇಳಿಕೆಗೆ ಉದ್ಧವ್ ಠಾಕ್ರೆಯಿಂದ ಎಚ್ಚರಿಕೆ

ಮುಂಬೈ: ಸಾವರ್ಕರ್’ಗೆ ಅವಮಾನ ಮಾಡಿದರೆ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಉಂಟಾಗಲಿದೆ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ್ದಾರೆ. ಹಿಂದುತ್ವ ಸಿದ್ಧಾಂತವಾದಿ ಸಾವರ್ಕರ್ ಅವರನ್ನು ಮಾದರಿಯಾಗಿ ಪರಿಗಣಿಸುತ್ತೇವೆ. ಅವರನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದರು.ಪ್ರಧಾನಿ ವಿರುದ್ಧದ ರಾಹುಲ್ ಗಾಂಧಿ ಟೀಕೆಗೆ ಬಿಜೆಪಿ ನಿಲುವನ್ನು ತೀವ್ರವಾಗಿ ಖಂಡಿಸಿರುವ ಅವರು ಮೋದಿ ಎಂದರೆ ಭಾರತವಲ್ಲ. ಮೋದಿಯನ್ನು ಪ್ರಶ್ನಿಸುವುದು ಭಾರತಕ್ಕೆ ಮಾಡುವ ಅಪಮಾನವಲ್ಲ ಎಂದಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್’ಗೆ ಕೊಲೆ ಬೆದರಿಕೆ: ಓರ್ವನ ಬಂಧನ

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್’ಗೆ ಕೊಲೆ ಬೆದರಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 21ರ ವಯಸ್ಸಿನ ಧಕದ್ ರಾಮ್ ಬಿಷ್ಣೋಯಿ ಬಂಧಿತ ವ್ಯಕ್ತಿ.ಈತ ರಾಜಸ್ಥಾನದ ಜೋದ್ ಪುರ್ ಬಳಿಯ ಸಿಯೋಗಿ ಕಿ ಧಾನಿ ನಿವಾಸಿ ಎಂದು ಹೇಳಲಾಗುತ್ತಿದೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ […]
ಉಡುಪಿ: ಆಡಳಿತ ನಿರ್ವಾಹಣ ತರಬೇತಿ ಶಿಬಿರ ಉದ್ಘಾಟನೆ

ಯಾವುದೇ ಕ್ಷೇತ್ರದಲ್ಲಿ ಪರಿಪೂರ್ಣವಾಗಬೇಕಾದರೆ ಸೂಕ್ತವಾದ ತರಬೇತಿ ಪಡೆಯುವುದು ಅಗತ್ಯ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆಪಿ ಸುಚರಿತ ಶೆಟ್ಟಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಇಂದು ಹಮ್ಮಿಕೊಂಡ ಆಡಳಿತ ನಿರ್ವಾಹಣ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವಿವಿಧ ಕಾಯ್ದೆಗಳನ್ನ ಸರ್ಕಾರ ರಚಿಸಿದಾಗ ಅವುಗಳ ಬಗ್ಗೆ ಸೂಕ್ತವಾದ ಮಾಹಿತಿ ಪಡೆದು ಅನುಷ್ಠಾನ ಮಾಡುವುದು ನಮ್ಮೆಲ್ಲರ […]
ಮಾ.27-28: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂತನ ರಜತ (ಬೆಳ್ಳಿ) ರಥದ ಪುರ ಪ್ರವೇಶ ಹಾಗೂ ಲೋಕಾರ್ಪಣೆ

ಬ್ರಹ್ಮಾವರ: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದುರ್ಗಾಪರಮೇಶ್ವರೀ ದೇವಿಗೆ ಸೇವಾ ರೂಪದಲ್ಲಿ ನೀಡಲಿರುವ ನೂತನ ರಜತ (ಬೆಳ್ಳಿ) ರಥದ ಪುರ ಪ್ರವೇಶ ಮಾ.27 ರಂದು ಹಾಗೂ ಲೋಕಾರ್ಪಣೆಯು ಮಾ.28 ರಂದು ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಪೇಜಾವರ ಅಧೋಕ್ಷಜಮಠ ಉಡುಪಿ ಇವರಿಂದ ನಡೆಯಲಿದೆ. ಹಾಗೂ ಆಶೀರ್ವಚನ ಮತ್ತು ದಾನಿಗಳಿಗೆ ಸನ್ಮಾನವು ಕಾರ್ಯಕ್ರಮ ನಡೆಯಲಿದೆ. ಮಾ.28 ಮಂಗಳವಾರದಂದು ರಾತ್ರಿ ಗಂಟೆ 8.00 ರಿಂದ ರಂಗ ಪೂಜೆ ಹಾಗೂ ಪ್ರಥಮ ರಥೋತ್ಸವ […]