ಮಾ.27: ಆಯುಷ್ಮತಿ ಕ್ಲಿನಿಕ್ ಉದ್ಘಾಟನೆ
ಉಡುಪಿ: ಆಯುಷ್ಮತಿ ಕ್ಲಿನಿಕ್ ನ ಉದ್ಘಾಟನಾ ಕಾರ್ಯಕ್ರಮವನ್ನು ಮಾರ್ಚ್ 27 ರಂದು ಬೆಳಗ್ಗೆ 11.30 ಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಭಾರತ ಸರ್ಕಾರದ ಆರೋಗ್ಯ ಸಚಿವರು ಮತ್ತು ರಾಜ್ಯದ ಆರೋಗ್ಯ ಸಚಿವರು ವರ್ಚುಲ್ ಮೂಲಕ ನೆರವೇರಿಸಲಿದ್ದು, ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಉಡುಪಿಯ ಅಲಂಕಾರ್ ಚಿತ್ರಮಂದಿರದ ಬಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಆಯುಷ್ಮತಿ ಕ್ಲಿನಿಕ್ ನಲ್ಲಿ ಮಾಡಲಾಗಿದ್ದು, ಜಿಲ್ಲೆಯ ಆಯುಷ್ಮತಿ ಕ್ಲಿನಿಕ್ ನ ಉದ್ಘಾಟನೆ ಸಹ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ […]
ಸೀತಾ ಪೂಜಾರ್ತಿ ಮೂಡು ಅಂಜಾರು ನಿಧನ
ಹಿರಿಯಡಕ: ಸೀತಾ ಪೂಜಾರ್ತಿ ಮೂಡು ಅಂಜಾರು ಹಿರಿಯಡಕ ಇವರು ಮಾ.25 ರಂದು ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಇವರು ಉತ್ತಮ ಕೃಷಿಕರಾಗಿದ್ದು, ದಿ|| ದಾದು ಪೂಜಾರಿ ಅವರ ಧರ್ಮಪತ್ನಿ ಆಗಿರುತ್ತಾರೆ.
ನರಿಂಗಾನ “ಲವ – ಕುಶ” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಉಳ್ಳಾಲ: ಮಾ.25 ರಂದು ನಡೆದ ನರಿಂಗಾನ “ಲವ – ಕುಶ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 05 ಜೊತೆ ಅಡ್ಡಹಲಗೆ: 06 ಜೊತೆ ಹಗ್ಗ ಹಿರಿಯ: 20 ಜೊತೆ ನೇಗಿಲು ಹಿರಿಯ: 26 ಜೊತೆ ಹಗ್ಗ ಕಿರಿಯ: 24 ಜೊತೆ ನೇಗಿಲು ಕಿರಿಯ: 45 ಜೊತೆ ಸಬ್ ಜೂನಿಯರ್ ನೇಗಿಲು: 61 ಒಟ್ಟು ಕೋಣಗಳ ಸಂಖ್ಯೆ: 187 ಜೊತೆ ಕನೆಹಲಗೆ: ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ […]
3ನೇ ವರ್ಷದ ಹಡಿಲು ಭೂಮಿ ಕೃಷಿ – ಭತ್ತದ ಚಾಪೆ ನೇಜಿ ತಯಾರಿಕಾ ಘಟಕಕ್ಕೆ ಶಾಸಕ ರಘುಪತಿ ಭಟ್ ಚಾಲನೆ
ಕೇದಾರೋತ್ಥಾನ ಟ್ರಸ್ಟ್ (ರಿ.), ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ವತಿಯಿಂದ ಈ ಬಾರಿ ಉಡುಪಿಯಲ್ಲಿ ಕೈಗೊಂಡಿರುವ 3ನೇ ವರ್ಷದ “ಹಡಿಲು ಭೂಮಿ ಕೃಷಿ” ಮಾಡಲು ಬೇಕಾದ ಭತ್ತದ ಚಾಪೆ ನೇಜಿ ತಯಾರಿಕಾ ಘಟಕ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿಯಲ್ಲಿ ನಿರ್ಮಿಸಲಾಗಿದ್ದು, ಕೇದಾರೋತ್ಥಾನ ಟ್ರಸ್ಟ್ ನ ಅಧ್ಯಕ್ಷ, ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಇಂದು ಭೂ ಮಾತೆಗೆ ಹಾಲನ್ನು ಅರ್ಪಿಸಿ ಟ್ರಾಕ್ಟರ್ ಚಲಾಯಿಸಿ 3 ನೇ ವರ್ಷದ ಹಡಿಲು ಭೂಮಿ ಕೃಷಿಗೆ ಚಾಲನೆ ನೀಡಿದರು. […]
1 ಕೋಟಿ ವೆಚ್ಚದಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ತೀರ್ಥ ಕೆರೆ ಅಭಿವೃದ್ಧಿ; ಶಾಸಕರಿಂದ ಭೂಮಿ ಪೂಜೆ
ಉಡುಪಿ ನಗರಸಭಾ ವ್ಯಾಪ್ತಿಯ ಕೊಡವೂರು ವಾರ್ಡಿನ ಕೊಡವೂರು ಶ್ರೀ ಶಂಕರನಾರಾಯಣ ತೀರ್ಥ ಕೆರೆ ಅಭಿವೃದ್ಧಿಗೆ ಶಾಸಕರಾದ ಶ್ರೀ. ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ 1.00 ಕೋಟಿ ರೂ ಅನುದಾನ ಮಂಜೂರಾಗಿದೆ. ಶಾಸಕ ಕೆ. ರಘುಪತಿ ಭಟ್ ಅವರು ಇಂದು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಶ ಕೊಡವೂರು, ಸ್ಥಳೀಯ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ನಗರ ಸಭಾ ಸದಸ್ಯರಾದ ಸುಂದರ್ ಕಲ್ಮಾಡಿ, ಕೆ.ಎಂ.ಎಫ್ ಮಾಜಿ ಅಧ್ಯಕ್ಷರಾದ ರವಿರಾಜ್ […]