ಮಾ.28 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಉಡುಪಿ: ಮಣಿಪಾಲದಿಂದ ಶಿರ್ವಕ್ಕೆ ಹಾದು ಹೋಗುವ 33 ಕೆ.ವಿ ಮಾರ್ಗದ ತಂತಿಗಳನ್ನು ಬದಲಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.80 ಕಾಮಗಾರಿಯು ಪೂರ್ಣಗೊಂಡಿದ್ದು, ಪ್ರಸ್ತುತ ಬಾಕಿ ಇರುವ ತಂತಿಗಳನ್ನು ಬದಲಿಸಲು ಕೇಮಾರಿನಿಂದ ಮಣಿಪಾಲಕ್ಕೆ ಹಾದುಹೋಗಿರುವ 110/33/11 ಕೆವಿ ಮಾರ್ಗವು ಮಣಿಪಾಲದಿಂದ ಶಿರ್ವ 33 ಕೆವಿ ಮಾರ್ಗದ ಮಧ್ಯದಲ್ಲಿ ಹಾದು ಹೋಗುವುದರಿಂದ, ಈ ಕಾಮಗಾರಿಯನ್ನು ನಿರ್ವಹಿಸಲು 110/33/11 ಕೆವಿ ವಿದ್ಯುತ್ ಸ್ಥಾವರ ಮಣಿಪಾಲದಿಂದ ಹೊರಡುವ 110 ಕೆ.ವಿ ಮಣಿಪಾಲ, ನಿಟ್ಟೂರು, ಬ್ರಹ್ಮಾವರ, 33 ಕೆ.ವಿ ಶಿರ್ವ, 33 ಕೆ.ವಿ ಕುಂಜಿಬೆಟ್ಟು 1 […]

ಐಟಿ ವಲಯದ ಬೃಹತ್ ಕಂಪನಿಯ 19,000 ಉದ್ಯೋಗಿಗಳ ವಜಾ

ವಾಷಿಂಗ್ಟನ್: ಐಟಿ ವಲಯದ ದೈತ್ಯ ಆಕ್ಸೆಂಚರ್ ಕಂಪನಿಯು ಜಾಗತಿಕ ಆರ್ಥಿಕ ಹಿಂಜರಿಕೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ 19,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದೆ. ಆಕ್ಸೆಂಜರ್ ಕಂಪನಿಯು ಐರ್ಲೆಂಡ್ ಮೂಲದ ಐಟಿ ವಲಯದ ಬೃಹತ್ ಕಂಪನಿಯಾಗಿದ್ದು ಆರ್ಥಿಕ ಹಿಂಜರಿತ ಎದುರಿಸುತ್ತಿರುವ ಕಾರಣ ತನ್ನ ವಾರ್ಷಿಕ ಆದಾಯದ ಬೆಳವಣಿಗೆ ಮತ್ತು ಲಾಭದ ಮಿತಿಯನ್ನು ಇಳಿಕೆ ಮಾಡಿರುವುದರಿಂದ ಸುಮಾರು 19,000 ಉದ್ಯೋಗಿಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಕಂಪನಿಯ ವಾರ್ಷಿಕ ಆದಾಯ ಶೇ.10 ರಿಂದ ಶೇ.8ಕ್ಕೆ ಇಳಿಕೆ ಮಾಡಿದ್ದು 1989 ರಲ್ಲಿ ಸ್ಥಾಪನೆಯಾಗಿರುವ ಈ ಕಂಪನಿಯು […]

ಸಂಸದ ಸ್ಥಾನದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ: ವೆರೋನಿಕಾ ಕರ್ನೇಲಿಯೋ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಅಭಿಪ್ರಾಯಪಟ್ಟಿದ್ದಾರೆ. ಮೋದಿಯವರನ್ನು ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಒರ್ವ ಜನರಿಂದ ಆಯ್ಕೆಗೊಂಡ ಸಂಸದರನ್ನು ಅಮಾನತುಗೊಳೀಸುತ್ತಾರೆ ಎಂದರೆ ಈ ಹಿಂದೆ ಹಲವು ಬಾರಿ ಹಲವು ಬಿಜೆಪಿ ಪಕ್ಷದ ನಾಯಕರು ಕೂಡ ಟೀಕಿಸಿದ ಅನೇಕ ಉದಾಹರಣೆಗಳಿವೆ. ಅವರೆಲ್ಲರನ್ನು ಹೀಗಿಯೇ ಅಮಾನತು ಮಾಡುತ್ತಾ ಹೋದರೆ ಮುಂದೊಂದು ದಿನ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಇವರ ಪಕ್ಷದವರು ಸಂಪೂರ್ಣ ಖಾಲಿಯಾಗಬೇಕಾಗಿತ್ತು. ನರೇಂದ್ರ ಮೋದಿಯವರು ದೇಶದ […]

ನೌಕರರ ತುಟ್ಟಿ ಭತ್ಯೆ ಹೆಚ್ಚಳ; ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ..?

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನೌಕರರ ತುಟ್ಟಿ ಭತ್ಯೆಯನ್ನು ಹಾಗೂ ತುಟ್ಟಿ ಪರಿಹಾರವನ್ನು ಶೇ 4ರಷ್ಟು ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆ ಹೆಚ್ಚಳಕ್ಕೆ ನಿರ್ಣಯ ಕೈಗೊಳ್ಳಲಾಗಿದೆ. ತುಟ್ಟಿಭತ್ಯೆಯನ್ನು ಶೇ.38ರಿಂದ ಶೇ.42ಕ್ಕೆ ಹೆಚ್ಚಿಸಲಾಗಿದೆ. ಮೋದಿ ಸರ್ಕಾರದ ಈ ನಿರ್ಧಾರದಿಂದ 47.58 ಲಕ್ಷ ಕೇಂದ್ರ ಸರ್ಕಾರಿ […]

ಈ ತಿಂಗಳೊಳಗೆ ಆದಾಯ ತೆರಿಗೆ ಸಲ್ಲಿಸಲು ತಪ್ಪಿದರೆ, 5000ರೂ ಬಾರಿ ದಂಡ, ಕಾನೂನು ಕ್ರಮ

2022- 23ನೇ ಹಣಕಾಸು ವರ್ಷದ (Financial year) ಆದಾಯ ತೆರಿಗೆ (Income Tax Return) ರಿಟರ್ನ್ಸ್ ಜುಲೈ 31 ರೊಳಗೆ ಸಲ್ಲಿಸಬೇಕು. ಹೌದು, ಆದಾಯ ತೆರಿಗೆದಾರರ ಆದಾಯವು ರೂ.2.5 ಲಕ್ಷಕ್ಕಿಂತ ಹೆಚ್ಚಿದ್ದರೆ, ಅಗತ್ಯವಾಗಿ ನೀವು ಐಟಿಆರ್(ITR Filing) ಅನ್ನು ಸಲ್ಲಿಸಬೇಕಾಗುತ್ತದೆ. ಇದನ್ನು, ನೀಡಿದ ಗಡುವಿನೊಳಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (Income Tax Returns) ಸಲ್ಲಿಸಬೇಕು. ಸಲ್ಲಿಸದಿದ್ದರೆ ಹಲವಾರು ಪರಿಣಾಮಗಳಿಗೆ ಕಾರಣವಾಗುತ್ತವೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234 ಎಫ್ ಪ್ರಕಾರ, ಐಟಿಆರ್ ((Income Tax Returns) […]