ಸಾಲಿಗ್ರಾಮ ಜನೌಷಧಿ ಕೇಂದ್ರಕ್ಕೆ ಆರನೇ ವರ್ಷದ ಸಂಭ್ರಮ: ನಾಳೆ (ಮಾ.25) ಉಚಿತ ತಪಾಸಣೆ ಶಿಬಿರ, ಗ್ರಾಹಕರೊಂದಿಗೆ ಸಂವಾದ

ಬ್ರಹ್ಮಾವರ: ಸಹಕಾರಿ ತತ್ವದಲ್ಲಿ ಶ್ರೀ ಸಾಮಾನ್ಯರ ಸಹಕಾರದಿಂದ ಶ್ರೀ ಸಾಮಾನ್ಯರ ಆರೋಗ್ಯ ಸುರಕ್ಷೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಜನೌಷಧಿ ಕೇಂದ್ರ ಪ್ರಧಾನ ಭಾರತೀಯ ಜನೌಷಧಿ ಕೇಂದ್ರ ಸಾಲಿಗ್ರಾಮ ಸದ್ಗುರು ಸೌಹಾರ್ದ ಸಹಕಾರಿ ನಿಯಮಿತ, ಉಡುಪಿ ಇದರ ಅಂಗ ಸಂಸ್ಥೆಯಾಗಿದೆ. ನಮ್ಮ ಗ್ರಾಹಕರೊಂದಿಗೆ ಐದು ವರ್ಷಗಳ ಪರಿಪೂರ್ಣ ಜನಸೇವೆಯ ನಂತರ ಆರನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದೆ. ಈ ಶುಭ ದಿನದಂದು ವಿಶೇಷ ಕಾರ್ಯಕ್ರಮವು ಶನಿವಾರ, ಮಾರ್ಚ್ 25, ಸಮಯ: 9.30-5.30 ರವರೆಗೆ ನಡೆಯಲಿದ್ದು, ಹಾಗೂ ನಮ್ಮೊಂದಿಗೆ ಸಹಕರಿಸಿದ ಮಹನಿಯರಿಗೆ ಗೌರವ ಸಮರ್ಪಣೆ […]

ಮಾ.25 ರಿಂದ 27: ಹಿರಿಯಡಕ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಸ್ಥಾನದಲ್ಲಿ ಸಿರಿಸಿಂಗಾರದ ನೇಮೋತ್ಸವ 

ಹಿರಿಯಡಕ: ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ 6ನೇ ವರ್ಷದ ಸಿರಿ ಸಿಂಗಾರದ ನೇಮೋತ್ಸವ ಕಾರ್ಯಕ್ರಮಗಳು ಮಾ.25 ರಿಂದ ಮಾ.27ರ ವರೆಗೆ ಹಿರಿಯಡಕ‌ ಪಡುಭಾಗದಲ್ಲಿ (ಪಡಂ‌) ನಡೆಯಲಿದೆ. ಮಾ.25 ರಂದು ಪೂರ್ವಾಹ್ನ 8 ಗಂಟೆಗೆ ಕ್ಷೇತ್ರಶುದ್ದಿ, ಕಲಶಾರಾಧನೆ, ಪ್ರಾರಂಭ ಪೂಜೆ ಪೂರ್ವಾಹ್ನ ಗಂಟೆ 9.00ಕ್ಕೆ : ಮಹಾಚಪ್ಪರದ ಗಜಕಂಬ ಪ್ರತಿಷ್ಠೆ ಪೂರ್ವಾಹ್ನ ಗಂಟೆ 11.00ಕ್ಕೆ : ಕಂಬಿಗಾರ ದರ್ಶನ ಪೂರ್ವಾಹ್ನ ಗಂಟೆ 11.30ಕ್ಕೆ : ಮಹಾಚಪ್ಪರ ಆರೋಹಣ ಅಪರಾಹ್ನ ಗಂಟೆ 12.30ಕ್ಕೆ : ಮಹಾ ಅನ್ನ ಸಂತರ್ಪಣೆ […]

ಪ್ಯಾನ್- ಆಧಾರ್‌ ಜೋಡಣೆಗೆ ಅವಧಿ ವಿಸ್ತರಣೆಯಾಗುತ್ತಾ? ಇಲ್ಲಿದೆ‌ ಮಹತ್ವದ ಮಾಹಿತಿ  

ಹಲವು ದಿನಗಳಿಂದ ಎಲ್ಲೆಡೆ ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ಜೋಡಿಸುವಂತೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಅಲ್ಲದೆ ಇದಕ್ಕಾಗಿ ಗಡುವನ್ನು ನೀಡಲಾಗಿತ್ತು. ಇದೀಗ ಈ ಗಡುವು ಹತ್ತಿರ ಬರುತ್ತಿದ್ದಂತೆ ಈ ದಿನಾಂಕವನ್ನು ಇನ್ನೊಮ್ಮೆ ವಿಸ್ತರಿಸಬೇಕೆಂಬ ಬೇಡಿಕೆ ಹೆಚ್ಚಾಗ ತೊಡಗಿದೆ. ಆದರೆ ಈ ವರ್ಷ ಈ ದಿನಾಂಕ ಇನ್ನೊಮ್ಮೆ ವಿಸ್ತರಿಸುವ ನಿರೀಕ್ಷೆ ಇಲ್ಲ. ಈಗಾಗಲೇ ಗಮನಿಸಿದರೆ PAN-Aadhaar ಜೋಡಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದಿಂದ ಹಲವು ಬಾರಿ ದಿನಾಂಕಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ ಇಲಾಖೆಯು ವಿಸ್ತರಿಸಿತ್ತು. ಈ […]

ಹೆರ್ಗ ಬಬ್ಬುಸ್ವಾಮಿ ಲೇಔಟ್ ನಲ್ಲಿ 240 ಫಲಾನುಭವಿಗಳಿಗೆ ಶಾಸಕರಿಂದ ಮನೆಯ ಹಕ್ಕುಪತ್ರ ವಿತರಣೆ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ “ಸರ್ವರಿಗೂ ಸೂರು ಕಾರ್ಯಕ್ರಮ” ದಡಿ ಉಡುಪಿ ನಗರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ ಮೊದಲ ಹಂತದಲ್ಲಿ 240 ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಇಂದು ವಿತರಣೆ ಮಾಡಲಾಯಿತು. ಶಾಸಕ ಕೆ. ರಘುಪತಿ ಭಟ್ ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ಸ್ಥಳೀಯ ನಗರಸಭಾ ಸದಸ್ಯರಾದ […]

ರಾಹುಲ್ ಗಾಂಧಿ ‘ಸಂಸತ್ ಸದಸ್ಯತ್ವ’ ರದ್ದು

ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಶುಕ್ರವಾರ ಹೊರಡಿಸಿದೆ. C.C./18712/2019 ರಲ್ಲಿ ಸೂರತ್‌ನ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿದ ಪರಿಣಾಮವಾಗಿ, ಕೇರಳದ ವಯನಾಡ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ಶ್ರೀ ರಾಹುಲ್ ಗಾಂಧಿ ಅವರು ಅಪರಾಧ ಸಾಬೀತಾದ ದಿನಾಂಕದಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖವಾಗಿದೆ. ಪ್ರಕರಣದ ಹಿನ್ನಲೆ: 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೋಲಾರದಲ್ಲಿ […]