ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ ಎಂಎಎಸ್ ಸಿಸಿನಿಂದ ಶ್ರೇಷ್ಠತೆಯ ಕೇಂದ್ರ ಮನ್ನಣೆ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವನ್ನು (MCCCC) ಕ್ಯಾನ್ಸರ್‌ನಲ್ಲಿನ ಬೆಂಬಲಿತ ಆರೈಕೆಯಲ್ಲಿ ಶ್ರೇಷ್ಠತೆಯ ಕೇಂದ್ರವೆಂದು ‘ಮಲ್ಟಿನ್ಯಾಷನಲ್ ಅಸೋಸಿಯೇಷನ್ ಆಫ್ ಸಪೋರ್ಟಿವ್ ಕೇರ್ ಇನ್ ಕ್ಯಾನ್ಸರ್ (MASCC) ನಿಂದ ಗೊತ್ತುಪಡಿಸಲಾಗಿದೆ. ಈ ಪ್ರತಿಷ್ಠಿತ ಮನ್ನಣೆಯು ರೋಗಿಗಳಿಗೆ ಅಸಾಧಾರಣವಾದ ಕ್ಯಾನ್ಸರ್ ಆರೈಕೆಯನ್ನು ಒದಗಿಸಲು ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವು ಶ್ರಮಿಸುತ್ತಿರುವ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಸಂಸ್ಥೆಯು ಈ ನಿಯೋಜಿತ ಮನ್ನಣೆ ಪಡೆದ ಏಷ್ಯಾದ ಮೊತ್ತ ಮೊದಲ ಆಸ್ಪತ್ರೆಯಾಗಿದೆ. ಮಣಿಪಾಲ ಸಮಗ್ರ ಕ್ಯಾನ್ಸರ್ […]

ಮತ್ತೆ ಕಾಂಗ್ರೆಸ್ ಸೇರಿದ ಬಾಬುರಾವ್ ಚಿಂಚನಸೂರು: ಖರ್ಗೆ, ಡಿಕೆಶಿ ನಾಯಕತ್ವಕ್ಕೆ ಬೆಂಬಲ

ಬೆಂಗಳೂರು: ಇತ್ತೀಚೆಗೆಗಷ್ಟೇ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಹಿರಿಯ ಮುಖಂಡ ಬಾಬೂರಾವ್‌ ಚಿಂಚನಸೂರು ಬುಧವಾರ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ಸಮ್ಮುಖದಲ್ಲಿ ಕಾಂಗ್ರೆಸ್’ಗೆ ಸೇರ್ಪಡೆಯಾಗಿದ್ದಾರೆ. ಕೋಲಿ ಸಮಾಜದ ಪ್ರಮುಖ ನಾಯಕರಾಗಿರುವ ಚಿಂಚನಸೂರ್ ಅವರು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ಬಳಿಕ ಮುನಿಸಿಕೊಂಡು ಬಿಜೆಪಿ ಸೇರಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್’ನ ಮಲ್ಲಿಕಾರ್ಜುನ ಖರ್ಗೆಯಯವರನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಬಿಜೆಪಿಯಿಂದ ವಿಧಾನ ಪರಿಷತ್’ಗೂ ಆಯ್ಕೆಯಾಗಿದ್ದರು. ಸೋಮವಾರ ಹುಬ್ಬಳ್ಳಿಯಲ್ಲಿ ಪರಿಷತ್‌ ಸಭಾಪತಿ […]

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 8 ಮಂದಿ ಮೃತ್ಯು

ಚೆನ್ನೈ: ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ 8 ಮಂದಿ ಸಾವನ್ನಪ್ಪಿ, 16ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಕಾಂಚೀಪುರಂ ಜಿಲ್ಲಾಧಿಕಾರಿ ಎಂ.ಆರತಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.

ಬೆಂಕಿಪೊಟ್ಟಣ ನೀಡದಿದ್ದಕ್ಕೆ ಆಟೋ ಚಾಲಕನಿಗೆ ಚೂರಿ ಇರಿದು ಕೊಲೆಗೆ ಯತ್ನ

ಬೆಂಗಳೂರು: ಆಟೊ ಚಾಲಕ ಸರ್ದಾರ್ ಎಂಬುವವರನ್ನು ಬೆಂಕಿಪೊಟ್ಟಣ ನೀಡಲಿಲ್ಲವೆಂಬ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ‘ಸ್ಥಳೀಯ ಜಾನಕಿರಾಮ್ ಬಡಾವಣೆ ನಿವಾಸಿ ಸರ್ದಾರ್ ಅವರು ಘಟನೆ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೃತ್ಯದ ನಂತರ ಆರೋಪಿ ಪರಾರಿಯಾಗಿದ್ದು, ಆತನನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು. ಸೋಮವಾರ ಸಂಜೆ ಸರ್ದಾರ್ ಅವರು ಆಟೊ ಚಲಾಯಿಸಿಕೊಂಡು ಮನೆ ಸಮೀಪದಲ್ಲಿ ಹೋಗುತ್ತಿದ್ದರು. ಯುವಕನೊಬ್ಬ ಯುವತಿ ಜೊತೆ ಬೈಕ್‌ನಲ್ಲಿ ಬಂದು ಆಟೊ ಅಡ್ಡಗಟ್ಟಿ […]

ಅಬಕಾರಿ ಅಕ್ರಮ: ಕಂಟ್ರೋಲ್ ರೂಮ್’ಗೆ ದೂರು ನೀಡಲು ಕರೆ

ಮಂಗಳೂರು: 2023ನೇ ಸಾಲಿನಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಅಕ್ರಮ ಮಧ್ಯ, ಬೀರ್ ತಯಾರಿಕೆ, ದಾಸ್ತಾನು ಹಾಗೂ ಸಾಗಾಣಿಕೆ ಬಗ್ಗೆ ಸಾರ್ವಜನಿಕರಿಂದ ನೀಡಲಾಗುವ ದೂರುಗಳನ್ನು ಸ್ವೀಕರಿಸಲು ಹಾಗೂ ಚುನಾವಣಾ ಆಯೋಗದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಯಲು ಅಬಕಾರಿ ಇಲಾಖೆಯ ಜಿಲ್ಲಾ ಕೇಂದ್ರ ಕಚೇರಿಯಲ್ಲಿ, ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ಗಳನ್ನು ತೆರೆಯಲಾಗಿದೆ. ಈ ಕಂಟ್ರೋಲ್ ರೂಮ್’ಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿದ್ದು, […]