ಕಾಂತಾರ ಖ್ಯಾತಿಯ ನಟಿಯ ‘ಜುಗಲ್ ಬಂದಿ’ ಟ್ರೇಲರ್ ರಿಲೀಸ್
ಹೊಸಬರ ವಿನೂತನ ಪ್ರಯತ್ನವಿರುವ ‘ಜುಗಲ್ ಬಂದಿ’ (Jugal Bandi) ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ದಿವಾಕರ ಡಿಂಡಿಮ (Diwakar Dindama) ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಹೆಜ್ಜೆ ಇಡಲಿದ್ದು, ಅದಕ್ಕೂ ಮುನ್ನ ಟ್ರೇಲರ್ ಮೂಲಕ ಸಿನಿಮಾಗೆ ಆಮಂತ್ರಣ ನೀಡಿದೆ ಚಿತ್ರತಂಡ. ಡಿಂಡಿಮ ಪ್ರೊಡಕ್ಷನ್ಸ್ ನಡಿ ನಿರ್ಮಾಣವಾದ ಈ ಚಿತ್ರ ಹಲವು ಕಥೆಗಳ ಜುಗಲ್ ಬಂದಿ. […]
9 ಸಾವಿರ ಉದ್ಯೋಗಿಗಳ ವಜಾಕ್ಕೆ ಮುಂದಾದ ಅಮೆಜಾನ್
ನವದೆಹಲಿ; ಎರಡನೇ ಬಾರಿಗೆ ಅಮೆಜಾನ್ ಸಂಸ್ಥೆ ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದೆ. ಇದೀಗ 9,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಈ ಕುರಿತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡಿ ಜಾಸ್ಸಿ ಘೋಷಣೆ ಮಾಡಿದ್ದಾರೆ. ಆರ್ಥಿಕತೆಯ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು ವೆಚ್ಙಗಳನ್ನು ನಿರ್ವಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಸಂಸ್ಥೆ ಸುಮಾರು 18,000 ಉದ್ಯೋಗಿಗಳನ್ನು ವಜಾ ಮಾಡಿತ್ತು.
ಅಯೋಧ್ಯೆಯಲ್ಲಿ 25000 ಭಕ್ತರ ವಸತಿ ಸಾಮರ್ಥ್ಯದ ಯಾತ್ರಿ ಭವನ ನಿರ್ಮಾಣ: ಪೇಜಾವರ ಶ್ರೀ
ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ಬೆಳವಣಿಗೆಗಳಕುರಿತು ಮಾಹಿತಿ ನೀಡಿದ ಶ್ರೀಗಳು, ಮಂದಿರ ನಿರ್ಮಾಣ ಕಾರ್ಯ ವೇಗದಿಂದ ನಡೆಯುತ್ತಿದ್ದು ಪ್ರಸ್ತುತ ಗರ್ಭಗುಡಿಯ ಉಭಾಪೀಠದ ಮೇಲೆ ಸ್ತಂಭಗಳನ್ನು ಜೋಡಣೆ ಮತ್ತು ಗೋಡೆ ನಿರ್ಮಾಣ ನಡೆಯುತ್ತಿದೆ ಮುಂದಿನ ಹತ್ತು ದಿನಗಳಲ್ಲಿ ಮೇಲ್ಛಾವಣಿಯ ಶಿಲಾ ಬೀಮ್ ಮತ್ತು ಶಿಲಾ ಹೊದಿಗೆಗಳನ್ನು ಅಳವಡಿಸುವ […]
ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡ ಯಾವುದು ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ..
ಹೊಸದಿಲ್ಲಿ: ಕಳೆದ 15 ಆವೃತ್ತಿಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಯಾವ ತಂಡ ಎಷ್ಟು ಸಿಕ್ಸರ್ ಸಿಡಿಸಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಮುಂಬೈ ಇಂಡಿಯನ್ಸ್ 231 ಪಂದ್ಯಗಳಲ್ಲಿ 1408 ಸಿಕ್ಸರ್ಗಳನ್ನು ಬಾರಿಸಿ ಮೊದಲ ಸ್ಥಾನವನ್ನು ಪಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 226 ಪಂದ್ಯಗಳಲ್ಲಿ 1377 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನವನ್ನು ಪಡೆದ ಪಂಜಾಬ್ ಕಿಂಗ್ಸ್ ತಂಡ 218 ಪಂದ್ಯಗಳಲ್ಲಿ 1276 […]
ಬಿಜೆಪಿ ಸರ್ಕಾರಕ್ಕೆ 35 ದಿನ ಮಾತ್ರ ಆಯಸ್ಸು: ಯು.ಟಿ ಖಾದರ್
ಮಂಗಳೂರು: ಬಿಜೆಪಿ ಸರಕಾರ ಜನಸಾಮನ್ಯರ ವಿರುದ್ಧ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಈ ಸರಕಾರವನ್ನು ಸಾಮರ್ಥ್ಯವಿರುವ ಸರ್ಕಾರ ಎಂದು ಹೇಳಲು ಸಾಧ್ಯವಿಲ್ಲ. ಸರಕಾರ ಪೌರ ಕಾರ್ಮಿಕರ ಬೇಡಿಕೆಯನ್ನು ಕಡೆಗಣಿಸಿದೆ. ಹಲವು ದಿನಗಳಿಂದ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರಕಾರ ಇವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ಪ್ರತಿಭಟನೆಯಿಂದ ಕಸ ವಿಲೇವಾರಿಯಾಗುತ್ತಿಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಮೊದಲೇ ಕರ್ನಾಟಕದ ಜನ ಭ್ರಷ್ಟಾಚಾರದ ವಾಸನೆಯಿಂದ […]