ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್: ಗವರ್ನರ್ ಭೇಟಿ, ವಿವಿಧ ಯೋಜನೆಗಳ ಲೋಕಾರ್ಪಣೆ

ಉದ್ಯಾವರ: ಲಯನ್ಸ್ ಜಿಲ್ಲಾ 317c ಇದರ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಗೆ ಲಯನ್ಸ್ ಜಿಲ್ಲೆಯ ಗವರ್ನರ್ ಲ. ಡಾ. ಎಂ ಕೆ ಭಟ್ ಎಂ ಜೆ ಎಫ್ ಅಧಿಕೃತ ಭೇಟಿ ನೀಡಿದ್ದು, ವಿವಿಧ ಸಮಾಜಮುಖಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಐದು ವರ್ಷಗಳ ಹಿಂದೆ ಆರಂಭಗೊಂಡಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವಿವಿಧ ಜನ ಸೇವಾ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ತನ್ನದೇ ಆದ ಯಶಸ್ವಿಯ ಮೈಲುಗಲ್ಲನ್ನು ಇಟ್ಟಿದೆ. ಪ್ರಸ್ತುತ ವರ್ಷ […]

ಡಿವೈನ್ ಪ್ರೇಯರ್ ಸೆಂಟರ್ ತೊಕ್ಕೊಟ್ಟು ಇಲ್ಲಿ ತಪಸ್ಸು ಕಾಲದ ಪ್ರಯುಕ್ತ ಡಿವೈನ್ ವಚನ ಮಹೋತ್ಸವ

ಡಿವೈನ್ ಪ್ರೇಯರ್ ಸೆಂಟರ್ ತೊಕ್ಕೊಟ್ಟು (ತೊಕ್ಕೊಟ್ಟು ಬಸ್ಸ್ ಸ್ಟ್ಯಾಂಡ್ ಹಿಂಬದಿ) ಇಲ್ಲಿ ತಪಸ್ಸು ಕಾಲದ ಪ್ರಯುಕ್ತ ‘ಡಿವೈನ್ ವಚನ ಮಹೋತ್ಸವ’ ಇಂದಿನಿಂದ ಮೂರು ದಿನಗಳ ಕಾಲ ಬೆಳಿಗ್ಗೆ ೯ ರಿಂದ ಸಂಜೆ ೬ರ ವರೆಗೆ ಕನ್ನಡದಲ್ಲಿ ರಿಟ್ರೀಟ್ ನಡೆಯಲಿರುವುದು. ಪೊಟ್ಟಾ ಡಿವೈನ್ ರಿಟ್ರೀಟ್ ಸೆಂಟರಿನ ಪ್ರಖ್ಯಾತ ಬ್ರದರ್ ಸಾಜಿತ್ ಜೋಸೆಫ್ ಮುಖ್ಯ ಪ್ರಭೋಧಕರಾಗಿ ನಡೆಸಿಕೊಡಲಿದ್ದು, ತೊಕ್ಕೊಟ್ಟು ಡಿವೈನ್ ಪ್ರೇಯರ್ ಸೆಂಟರ್ ನಿರ್ದೇಶಕರಾದ ಫಾ| ಜೋಸೆಫ್ ವಾಣಿಯಂತರ, ಪೆರ್ಮನ್ನೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ ಪ್ರಧಾನ ಗುರುಗಳಾದ ಫಾ| ಸಿಪ್ರಿಯನ್ […]

ಮೀನುಗಾರರಿಂದ ಕೇಂದ್ರ ಮೀನುಗಾರಿಕಾ ಸಚಿವರಿಗೆ ಮನವಿ ಸಲ್ಲಿಕೆ

ಉಡುಪಿ: ಜಿಲ್ಲೆಯ ಮೀನುಗಾರರು ತಮ್ಮ ವಿವಿಧ ಬೇಡಿಕೆಗಳ ಬಗ್ಗೆ, ಸಾಗರ ಪರಿಕ್ರಮದ ಅಂಗವಾಗಿ ಇಂದು ಉಡುಪಿ ಭೇಟಿ ನೀಡಿದ ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಪರಷೋತ್ತಮ ರೂಪಾಲ ಅವರಿಗೆ ಮಲ್ಪೆ ಬಂದರಿನಲ್ಲಿರುವ ಮೀನುಗಾರರ ಸಂಘದಲ್ಲಿ ಮನವಿಗಳನ್ನು ಸಲ್ಲಿಸಿದರು. ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ನೀಡಲು ಬಿ.ಪಿಎಲ್. ಕಾರ್ಡ್ ಪರಿಗಣಿನೆ ಮಾಡದ ಬಗ್ಗೆ, ಬೋಟ್ ಗಳಿಗೆ ರೋಡ್ ಸೆಸ್ ವಿಧಿಸುವುದನ್ನು ತೆಗೆಯುವ ಬಗ್ಗೆ, ಅಂತರರಾಜ್ಯ ಸಮನ್ವಯ ಸಮಿತಿ ರಚನೆ ಬಗ್ಗೆ,ಅನಿಯಮಿತ ಸೀಮೆಎಣ್ಣೆ ಸರಬರಾಜು ಬಗ್ಗೆ, ಮಲ್ಪೆಯಲ್ಲಿ […]

ಮೀನುಗಾರಿಕೆಯನ್ನು ಆದ್ಯತಾ ವಲಯವಾಗಿ ಅಭಿವೃದ್ದಿ: ಕೇಂದ್ರ ಸಚಿವ ಪರಷೋತ್ತಮ ರೂಪಾಲ

ಉಡುಪಿ: ದೇಶದಲ್ಲಿ ಮೀನುಗಾರಿಕಾ ವಲಯವನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿ, ಸಮಗ್ರವಾಗಿ ಅಭಿವೃಧ್ದಿಪಡಿಸುವ ನಿಟ್ಟಿನಲ್ಲಿ ಕಾಯಕ್ರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಪರಷೋತ್ತಮ ರೂಪಾಲ ಹೇಳಿದರು. ಅವರು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದ ಸಾಗರ ಪರಿಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೀನುಗಾರರ ಸಮಸ್ಯೆಗಳನ್ನು ಅರಿಯಲು ಪ್ರತ್ಯೇಕ ಮೀನುಗಾರಿಕಾ ಸಚಿವಾಲಯವನ್ನು ಆರಂಭಿಸಲಾಗಿದ್ದು, ಮೀನುಗಾರಿಕೆ ವಲಯದ ಅಭಿವೃಧ್ದಿಗಾಗಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಮೂಲಕ 20,050 ಕೋಟಿ ಗಳ ವೆಚ್ಚದಲ್ಲಿ ಮೀನಿನ ಉತ್ಪಾದಕತೆ […]

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಉದ್ಘಾಟನೆ

ಉಡುಪಿ: ಇಂದಿನ ಭ್ರಷ್ಟ ರಾಜಕೀಯ ಪರಿಸ್ಥಿತಿಗೆ ಸಮಾಜವೇ ಕಾರಣ. ಸಮಾಜದ ಭಾವನೆ ಬದಲಾಯಿಸದಿದ್ದರೆ ದೇಶಕ್ಕೆ ವಿಪತ್ತು ಎದುರಾಗಲಿದೆ. ಆದುದರಿಂದ ಭ್ರಷ್ಟಾಚಾರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದೇ ಪತ್ರಕರ್ತ ಮಾಡಬಹುದಾದ ಬಹು ದೊಡ್ಡ ದೇಶ ಸೇವೆ ಯಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ. ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರಂಭವನ್ನು ಉದ್ದನೆಯ ಪೆನ್ನಿನ ಕ್ಯಾಪ್ ತೆಗೆದು ಪತ್ರಕರ್ತರಿಗೆ ಹಸ್ತಾಂತರಿಸುವ […]