ಬೊಮ್ಮರಬೆಟ್ಟು ಪಂಚಾಯತ್: ಚುನಾವಣಾ ಪೂರ್ವಭಾವಿ ಸಭೆ

ಕಾಪು: ಬೊಮ್ಮರಬೆಟ್ಟು ಪಂಚಾಯತ್ ವ್ಯಾಪ್ತಿಯ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ ನಡೆಯಿತು. ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪ್ರಸ್ತಾವನೆಗೈದು ಚುನಾವಣಾ ತಯಾರಿ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಲಾಲಾಜಿ ಆರ್ ಮೆಂಡನ್ ವಿಭಾಗ ಪ್ರಭಾರಿಗಳಾದ ಉದಯ್ ಕುಮಾರ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚದ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಮಾತನಾಡಿ ಚುನಾವಣೆಯನ್ನು ಎದುರಿಸುವ ಕುರಿತು ಮಾಹಿತಿ ನೀಡಿದರು. ಶಕ್ತಿ ಕೇಂದ್ರ […]

ಬೈಲೂರು ಶ್ರೀ ಧೂಮಾವತಿ ದೈವಸ್ಥಾನ: ದೈವಸ್ಥಾನಕ್ಕೆ 15 ಸೆಂಟ್ಸ್ ಜಾಗವನ್ನು ನೀಡಿದ ದಾನಿ ಸದಾನಂದ ಶೆಟ್ಟಿ ಅವರಿಗೆ ಗೌರವ

ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಸಂಬಂದಿಸಿದ 5 ಗ್ರಾಮಗಳಾದ ಬೈಲೂರು, ಮಾರ್ಪಳ್ಳಿ, ಚಿಟ್ಪಾಡಿ, ಕೊರಂಗ್ರಪಡಿ, ಕೆಮೊತ್ತುರು ಮಾಗಣೆಗೆ ಒಳಪಟ್ಟ ಮೂಲ ಮಹಿಷಂತಾಯ, ಧೂಮಾವತಿ, ಬಂಟ, ಪಂಜುರ್ಲಿ ದೈವಗಳ ಶಿಲಾಮಯ ಆಲಯದಲ್ಲಿ ಹನುಮಾನ್ ರಸ್ತೆಯ 76 ಬಡುಗುಬೆಟ್ಟಿನ ಬೈಲೂರು ನಲ್ಲಿಶುಕ್ರವಾರ ಬೆಳ್ಳಿಗೆ ಪ್ರತಿಷ್ಠಾಪನೆ ಮಾಡಲಾಯಿತು. ಧಾರ್ಮಿಕ ಪೂಜಾ ವಿಧಾನಗಳನ್ನು ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ತಂತ್ರಿಗಳಾದ ಶ್ರೀ ರಮಣ ತಂತ್ರಿ, ಕೃಷ್ಣಮೂರ್ತಿ ತಂತ್ರಿ, ಪ್ರಧಾನ ಅರ್ಚಕ ವಾಸುದೇವ ಭಟ್ ಹಾಗೂ ಅರ್ಚಕ ವೃಂದ ನೆಡೆಸಿಕೊಟ್ಟರು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ […]

ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕುಂಜಿಬೆಟ್ಟು: ಕೆ.ವೈ.ಸಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವೆಗೆ ಗೌರವ

ಉಡುಪಿ: ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕುಂಜಿಬೆಟ್ಟು ಇವರ ಆಶ್ರಯದಲ್ಲಿ ಅಶಕ್ತ ಬಡ ಕುಟುಂಬದ ನೆರವಿಗಾಗಿ ನಡೆದ ಅಜ್ಜಮ್ಮ ಟ್ರೋಫಿ – 2023 ಪಂದ್ಯಾಟದಲ್ಲಿ ಕರಾವಳಿ ಯೂತ್ ಕ್ಲಬ್ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಕೇರಳ ರಾಜ್ಯದ ಮೊದಲ ತೃತೀಯಲಿಂಗಿ ವಕೀಲರಾಗಿ ಪದ್ಮಲಕ್ಷ್ಮಿ ಆಯ್ಕೆ

ಕೇರಳ: ಕೇರಳ ರಾಜ್ಯದ ಬಾರ್ ಕೌನ್ಸಿಲ್‌ನ ಮೊದಲ ತೃತೀಯಲಿಂಗಿ ವಕೀಲರಾಗಿ ಪದ್ಮಲಕ್ಷ್ಮಿ ಅವರು ಆಯ್ಕೆಯಾಗಿದ್ದಾರೆ. ರಾಜ್ಯದ ಕೈಗಾರಿಕಾ ಸಚಿವ ಪಿ.ರಾಜೀವ್ ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೀವನದ ಎಲ್ಲಾ ಅಡೆತಡೆಗಳನ್ನು ಎದುರಿಸಿ ಕೇರಳದ ಮೊದಲ ತೃತೀಯಲಿಂಗಿ ವಕೀಲರಾಗಿ ಆಯ್ಕೆಯಾದ ಪದ್ಮಲಕ್ಷ್ಮಿಯವರಿಗೆ ಅಭಿನಂದನೆಗಳು. ಮೊದಲಿಗರಾಗುವುದು ಇತಿಹಾಸದಲ್ಲಿ ಕಠಿಣವಾಗಿದೆ. ಗುರಿಯ ಹಾದಿಯಲ್ಲಿ ಅಡೆತಡೆಗಳಿರುತ್ತದೆ. ಅಲ್ಲಿ ನಿರುತ್ಸಾಹಗೊಳಿಸುವ ಜನರು ತುಂಬಾ ಇರುತ್ತಾರೆ. ಆದರೆ ಪದ್ಮಲಕ್ಷ್ಮಿಯವರು ಇವೆಲ್ಲವನ್ನೂ ಮೀರಿ ಕಾನೂನು ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಇವರ ಜೀವನವು ಉಳಿದ […]

ಹೆರ್ಗ ಗ್ರಾಮದಲ್ಲಿ 106 ಫಲಾನುಭವಿಗಳಿಗೆ ಮನೆ ಹಂಚಿಕೆ

ಶಾಸಕ ಕೆ. ರಘುಪತಿ ಭಟ್ ಅವರ ಮಹತ್ವಾಕಾಂಕ್ಷೆಯ ಯೋಜನೆ, ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ “ಸರ್ವರಿಗೂ ಸೂರು ಕಾರ್ಯಕ್ರಮ” ದಡಿ ಉಡುಪಿ ನಗರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ G+3 ಮಾದರಿಯಲ್ಲಿ 460 ಮನೆಗಳನ್ನು ಒಳಗೊಂಡ ವಸತಿ ಸಮುಚ್ಛಯ ನಿರ್ಮಿಸಲಾಗುತ್ತಿದೆ. ಇದಕ್ಕೆ ಅರ್ಜಿ ಹಾಕಿ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ದ್ವಿತೀಯ ಹಂತದಲ್ಲಿ 106 ಮನೆಗಳ ಹಂಚಿಕೆ ಚೀಟಿ ಎತ್ತುವ ಮೂಲಕ ನಡೆಯಿತು. ಸರಳಬೆಟ್ಟು ಬಬ್ಬುಸ್ವಾಮಿ […]