ರೋಹನ್ ಕಾರ್ಪೊರೇಷನ್ ಗೆ ಟೈಮ್ಸ್ ಆಫ್ ಇಂಡಿಯಾ 2023 ವರ್ಷದ ಉದಯೋನ್ಮುಖ ಯೋಜನೆ ಪ್ರಶಸ್ತಿ
ಟೈಮ್ ಬ್ಯುಸಿನೆಸ್ ಅವಾರ್ಡ್ ಸಮಾರಂಭವು ಮಾ.14ರಂದು ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು ಎಸ್ ಪಿಎ ಮೈಸೂರಿನಲ್ಲಿ ನಡೆಯಲಾಯಿತು. ಆ ಪ್ರಯುಕ್ತ 2023 ವರ್ಷದ ಉದಯೋನ್ಮುಖ ಯೋಜನೆ ಪ್ರಶಸ್ತಿಯನ್ನು ಮಂಗಳೂರಿನ ರೋಹನ್ ಸಿಟಿಯ ಯೋಜನೆ ನಿರ್ಮಾಪಕರಾದ ರೋಹನ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ರೋಹನ್ ಮೊಂತೇರೋ ರವರಿಗೆ ನೀಡಲಾಯಿತು. ಅವರ ಪರವಾಗಿ ದಿಮನ್ ಸುವರ್ಣ ಮತ್ತು ಶ ಅಲ್ಫೋನ್ಸ್ ಫರ್ನಾಂಡಿಸ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಟೈಮ್ ಬ್ಯು ಸಿನೆಸ್ ಅವಾರ್ಡ್ ಸಮಾರಂಭವು ಮಾ.14ರಂದು ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು […]
ರಾಮಾಂಜಿಗೆ ಬ್ಯಾಂಕ್ ಆಫ್ ಬರೋಡಾ ಸಾಧಕ ಪುರಸ್ಕಾರ
ಉಡುಪಿ: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ ಶಿಕ್ಷಣ, ಕ್ರೀಡೆ ಹಾಗೂ ಸರ್ವಾಂಗೀಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಕುಂದಾಪುರದ ನಮ್ಮ ಭೂಮಿ ಸಂಸ್ಥೆಯ ರಾಮಾಂಜಿ ಅವರನ್ನು ಬ್ಯಾಂಕ್ ಆಫ್ ಬರೋಡ ಸಾಧಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ವಿವಿಯ ಅಂತಿಮ ಸ್ನಾತಕೋತ್ತರ ಪದವಿಯ ಮುತ್ತಮ್ಮ (ಕ್ರೀಡಾ ಕ್ಷೇತ್ರ), ಮನೋಹರ್ ಪ್ರಸಾದ್ (ಶಿಕ್ಷಣ) ಇವರು ಕೂಡ ಸಾಧಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಮಾರ್ಚ್ 18ರಂದು ಮಧ್ಯಾಹ್ನ 2.30ಕ್ಕೆ ಮಂಗಳೂರು ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ […]
ಬೈಂದೂರು: ದಾಖಲಾತಿ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 20 ಲಕ್ಷ ರೂ. ಜಪ್ತಿ
ಬೈಂದೂರು: ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 20 ಲಕ್ಷ ರೂ.ಗಳನ್ನು ಬೈಂದೂರು ಠಾಣೆಯ ಪೊಲೀಸರು ಮಾ.16ರಂದು ಜಪ್ತಿ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಗಡಿಭಾಗದ ಶಿರೂರು ಚೆಕ್ಪೋಸ್ಟ್ನಲ್ಲಿ ಮಾ.16ರಂದು ಮಧ್ಯಾಹ್ನ 1.40ರ ಸುಮಾರಿಗೆ ವಾಹನ ತಪಾಸಣೆ ನಡೆಸುತ್ತಿದ್ದ ಎಸ್ಐ ನಿರಂಜನಗೌಡ ಮತ್ತು ಸಿಬ್ಬಂದಿ ಭಟ್ಕಳದಿಂದ ಬಂದ ನೋಂದಣಿ ನಂಬರ್ ಪ್ಲೇಟ್ ಇಲ್ಲದ ಕಾರನ್ನು ತಡೆದಿದ್ದಾರೆ. ಈ ವೇಳೆ ಕಾರನ್ನು ಪರಿಶೀಲಿಸಿದಾಗ ಹಿಂಬದಿ ಸೀಟಿನ ಕೆಳಗೆ ಪ್ಲಾಸ್ಟಿಕ್ ಬಂಡಲ್ ಇದ್ದು ಅದರಲ್ಲಿ ನಗದು ಕಂಡುಬಂದಿದೆ. ಹಣದ ದಾಖಲೆ ಬಗ್ಗೆ […]
ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಸಾಗರ ಪರಿಕ್ರಮ ಕಾರ್ಯಕ್ರಮ
ಉಡುಪಿ: ಮೀನುಗಾರರ ಸರ್ವತೋಮುಖ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಸಾಗರ ಪರಿಕ್ರಮ (ಹಂತ-4) ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮವು ಮಾರ್ಚ್ 19 ರಂದು ಬೆಳಗ್ಗೆ 10 ಗಂಟೆಗೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆಯಲಿದೆ. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರಷೋತ್ತಮ ರೂಪಾಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಡಾ. ಸಂಜೀವ ಕುಮಾರ್ ಬಲ್ಯಾನ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ […]
ಮಾ.19: ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕುಂಜಿಬೆಟ್ಟು ಇವರ ಆಶ್ರಯದಲ್ಲಿ ಅಶಕ್ತ ಬಡ ಕುಟುಂಬದ ನೆರವಿಗಾಗಿ 2ನೇ ವರ್ಷದ 90 ಗಜಗಳ ಅಜ್ಜಮ್ಮ ಟ್ರೋಫಿ- 2023 ಕ್ರಿಕೆಟ್ ಪಂದ್ಯಕೂಟ
ಉಡುಪಿ: ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕುಂಜಿಬೆಟ್ಟು ಉಡುಪಿ ಇವರ ಆಶ್ರಯದಲ್ಲಿ ಅಶಕ್ತ ಬಡ ಕುಟುಂಬದ ನೆರವಿಗಾಗಿ, ಎರಡನೇ ವರ್ಷದ 90 ಗಜಗಳ “ಅಜ್ಜಮ್ಮ ಟ್ರೋಫಿ 2023” ಕ್ರಿಕೆಟ್ ಪಂದ್ಯಕೂಟ ಮಾ.19 ರಂದು ಉಡುಪಿ ಎಂಜಿಎಂ ಮೈದಾನದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಕರಾವಳಿ ಯೂತ್ ಕ್ಲಬ್ (ರಿ) ಉಡುಪಿ ಮತ್ತು ಜನತಾ ಗ್ಯಾರೇಜ್ ಉಡುಪಿ ತಂಡವನ್ನು ಸನ್ಮಾನಿಸಲಾಗುವುದು.