ಕಸ್ತೂರ್ಬಾ ಆಸ್ಪತ್ರೆಯಲ್ಲಿ ಜಾಗೃತಿ ಶಿಕ್ಷಣ ಮತ್ತು ಉಚಿತ ಗ್ಲುಕೋಮಾ ತಪಾಸಣಾ ಶಿಬಿರ

ಉಡುಪಿ: ಗ್ಲುಕೋಮಾ ಕಾಯಿಲೆಯು ಶಾಶ್ವತ ಕುರುಡುತನಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಗ್ಲುಕೋಮಾದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಗ್ಲುಕೋಮಾ ಸಪ್ತಾಹವನ್ನು ಪ್ರತಿವರ್ಷ ಮಾರ್ಚ್ ಎರಡನೇ ವಾರದಲ್ಲಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಗ್ಲುಕೋಮಾ ಸಪ್ತಾಹ 2023 ರ ಅಂಗವಾಗಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ವಿಭಾಗ ಮತ್ತು ಆಪ್ಟೋಮೆಟ್ರಿ ವಿಭಾಗ –ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಜಾಗೃತಿ ಶಿಕ್ಷಣ ಮತ್ತು ಉಚಿತ ಗ್ಲುಕೋಮಾ ತಪಾಸಣಾ ಶಿಬಿರ […]

ಶ್ರೀ ಶಾರದ ಟೀಚರ್ ಟ್ರೈನಿಂಗ್ ಮಣಿಪಾಲ: ಹತ್ತನೇ ವಾರ್ಷಿಕೋತ್ಸವ ಆಚರಣೆ

ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್‍ನ ಹತ್ತನೇ ವಾರ್ಷಿಕೋತ್ಸವವು ಮಾ.11ರಂದು ಸಂಸ್ಥೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶಾ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಗೋಪಾಲ ಕೃಷ್ಣರವರು ಮಾತನಾಡಿ ಭಾರತ್ ಸೇವಕ ಸಮಾಜದ ವಿವಿಧ ವೃತ್ತಿಪರ ಕೋರ್ಸುಗಳ ಬಗ್ಗೆ ತಿಳಿಸಿದರು. ಇಂದಿನ ಶಿಕ್ಷಕಿಯರು ಮಗುವಿಗೆ ಯಾವ ರೀತಿಯಲ್ಲಿ ತರಬೇತಿ ಕೊಡಬೇಕು ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸುವಲ್ಲಿ, ಶಿಸ್ತಿನ ಶಿಕ್ಷಕರ ಪಾತ್ರವು, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಲು ಇರುವ ದಾರಿಯೆಂದು ಹೇಳಿದರು. ಕಾರ್ಯಕ್ರಮದ […]

ಹೆಬ್ರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ: ಹೆಬ್ರಿ ಕಾರ್ಕಳದ 10 ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ

ಹೆಬ್ರಿ: ಮಹಿಳೆಯರು ಈಗ ಸಬಲರಾಗಿದ್ದಾರೆ. ಪುರುಷರಷ್ಟೇ ಸಮಾನರಾಗಿದ್ದಾರೆ. ಆದರೂ ಹಲವೆಡೆ ಪುರುಷರಿಂದ ನಡೆಯುತ್ತಿರುವ ದೌರ್ಜನ್ಯ ಕೊನೆಯಾಗಬೇಕಿದೆ ಎಂದು ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸ್ನೇಹಲತಾ ಟಿ.ಜಿ. ಹೇಳಿದರು. ಅವರು ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಭವನದಲ್ಲಿ ಭಾನುವಾರ ಸಾವಿತ್ರಿ ಸತ್ಯವಾನ್ ಟ್ರಸ್ಟ್ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರ್ಕಳ ಹಾಗೂ ಹೆಬ್ರಿ ತಾಲ್ಲೂಕಿನ ಸಾಧಕಿಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ […]

ಜೈ ತುಲುನಾಡ್ ಸಂಘಟನೆದ ವತಿಡ್ದ್ ತುಲು ಬರವು- ಸರವು ತಂತ್ರಾಂಶ ಬುಡುಗಡೆ 

ಜೈ ತುಲುನಾಡ್(ರಿ) ಸಂಘಟನೆದ ವತಿಡ್ದ್ ತುಲು ಬರವು-ಸರವು ತಂತ್ರಾಂಶ ಬುಡುಗಡೆ ಲೇಸ್ ಮಾ.12 ತಾರೀಕುದಾನಿ ಕಾಪು ಜೆಸಿಐ ಭವನೊಡ್ ನಡತುಂಡ್. ಮಲ್ಲ ಬಿನ್ನೆರಾದಿತ್ತಿನ ಕರ್ನಾಟಕ ತುಲುಸಾಹಿತ್ಯ ಅಕಾಡೆಮಿದ ಮಾಜಿ ಪದುಕೆರಾಯನ ತಾರಾ ಉಮೇಶ್ ಆಚಾರ್ಯ ಪಾತೆರ್ದ್ ಜೈ ತುಲುನಾಡ್ ಸುರುಡಿಂಚಿಲಾ ದಿಂಜ ಬೇಲೆ ಮಲ್ರೊಂದ್ ಬರೊಂದುಂಡ್..2 ವರ್ಷದ ಅವಧಿಡ್ ಮಸ್ತ್ ಪುಗಾರ್ತೆನ್ ಪಡೆಯೊಂದುಂಡ್.ಅಯಿಕ್ ಸಂಘಟನೆದ ಬೆನ್ಪಾಟಿಗೆನೇ ಕಾರಣ ಪಂಡೆರ್.ಪೊಸ ಕಾಲಘಟ್ಟೊಡ್ ಉಪ್ಪುನ ಇತ್ತೆದ ಜನಕ್ಲೆಗ್ ಪೂರಕವಾದ್ ಪೊಸ ತುಲು ಆ್ಯಪ್ ನ್ ಮಲ್ತುದ್ ತುಲುಬಾಸೆಗ್ ಎಡ್ಡೆ ಕೊಡುಗೆ […]

ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ‘ಸಮೃದ್ಧಿ ಸಹಕಾರ ಸೌಧ’ ಉದ್ಘಾಟನೆ

ಕಾರ್ಕಳ: ಜನರಿಗೆ ಉತ್ತಮ ಸೇವೆಯನ್ನು ನೀಡಲು ಸಹಕಾರಿ ಕ್ಷೇತ್ರ ಸದಾ ಸಿದ್ಧವಿದೆ. ಸೇವೆಗೆ ಉತ್ತಮ ಹೆಸರು ಇದ್ದರೆ, ಅದು ಸಹಕಾರಿ ಕ್ಷೇತ್ರದಲ್ಲಿ ಮಾತ್ರ. ಸಹಕಾರಿ ಕ್ಷೇತ್ರಗಳು ವಿಕಸನಗೊಳ್ಳುತ್ತಿದೆ. ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಾನಾಪಾಟೇಕರ್ ಸಭಾಭವನದಲ್ಲಿ ಜರುಗಿದ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಿಸ್ತರಣಾ ನವೀಕರಣ ಕಟ್ಟಡ ಸಮೃದ್ಧಿ ಸಹಕಾರಿ ಸೌಧದ ಉದ್ಘಾಟನಾ ಸಭಾ […]