ತ್ರಿಪುರಾ ನಾಗಾಲ್ಯಾಂಡ್ ನಲ್ಲಿ ಸರಕಾರ ರಚಿಸುವತ್ತ ಬಿಜೆಪಿ; ಮೇಘಾಲಯ ಸಮ್ಮಿಶ್ರ ಸರ್ಕಾರದತ್ತ ಚುನಾವಣಾ ಫಲಿತಾಂಶ

ನವದೆಹಲಿ: ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶಗಳ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ತ್ರಿಪುರಾ ಮತ್ತು ನಾಗಾಲ್ಯಾಂಡ್ ಎರಡರಲ್ಲೂ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿವೆ. ಏತನ್ಮಧ್ಯೆ, ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸ್ಪಷ್ಟ ಬಹುಮತದ ಕೊರತೆಯಿಂದಾಗಿ ಮೇಘಾಲಯವು ಸಮ್ಮಿಶ್ರ ಸರಕಾರ ರಚಿಸುವತ್ತ ಸಾಗುತ್ತಿದೆ. ಚುನಾವಣಾ ಟ್ರೆಂಡ್‌ಗಳು ಇದೇ ರೀತಿ ಮುಂದುವರಿದಲ್ಲಿ ಬಿಜೆಪಿಯು ಈಶಾನ್ಯ ಭಾರತದಲ್ಲಿ ತನ್ನ ಬಲವಾದ ಹಿಡಿತವನ್ನು ಉಳಿಸಿಕೊಳ್ಳುತ್ತದೆ ಮತ್ತು 8 ರಲ್ಲಿ 7 ರಾಜ್ಯಗಳಲ್ಲಿ ಸರ್ಕಾರವನ್ನು ಹೊಂದಲಿದೆ. […]
ಕಟಪಾಡಿ ಕಂಬಳ ನೇಗಿಲು ಕಿರಿಯ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಯಶವಂತ್ ಕೋಟ್ಯಾನ್ ಕೋಣಗಳು

ಉಡುಪಿ: ಇತಿಹಾಸ ಪ್ರಸಿದ್ಧ ಕಟಪಾಡಿ ಕಂಬಳದಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ 84 ಜೋಡಿ ಕೋಣಗಳು ಭಾಗವಹಿಸಿದ್ದು ಕಟಪಾಡಿ ಕಂಬಳಕಟ್ಟ ‘ಅಕ್ಷಯ ನಿಲಯ’ ಯಶವಂತ್ ಇಶವಂತ್ ಕೋಟ್ಯಾನ್ ಅವರ ‘A’ ಕೋಣವು ದ್ವಿತೀಯ ಪ್ರಶಸ್ತಿ ಪಡೆದಿದ್ದು ಬಾರಾಡಿ ನಟೇಶ್ ಕೋಣೆಗಳನ್ನು ಓಡಿಸಿದ್ದರು.
ಅನುಷ್ಕಾ ನಟನೆಯ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ

ನಿರ್ದೇಶಕ ಮಹೇಶ್ ಬಾಬು ಪಿ ಅವರ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಎಂಬ ಚಿತ್ರಕ್ಕಾಗಿ ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ನವೀನ್ ಪೋಲಿಶೆಟ್ಟಿ ಜೊತೆಯಾಗಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಅನ್ನು ಬುಧವಾರ ಅನಾವರಣಗೊಳಿಸಲಾಗಿದ್ದು, ಸಮಕಾಲೀನ ಪ್ರೇಮಕಥೆಯ ಕಥಾಹಂದರದ ತುಣುಕನ್ನು ನೀಡುತ್ತದೆ. ಪೋಸ್ಟರ್ ಇಬ್ಬರು ವ್ಯಕ್ತಿಗಳ ಕೊಲಾಜ್ ಅನ್ನು ತೋರಿಸುತ್ತಿದ್ದು, ಇಬ್ಬರೂ ತಮ್ಮ ಜೀವನದ ವಿಭಿನ್ನ ಹಂತದಲ್ಲಿದ್ದಾರೆ ಎಂದು ತೋರುತ್ತದೆ. ಅನುಷ್ಕಾ ಲಂಡನ್‌ನಲ್ಲಿ ವಾಸಿಸುತ್ತಿದ್ದು, ‘ಹ್ಯಾಪಿ ಸಿಂಗಲ್’ ಎಂದು ಬರೆದಿರುವ ಪುಸ್ತಕ ಕೈಯಲ್ಲಿದ್ದರೆ, ಹೈದರಾಬಾದ್ ಹುಡುಗನ ಪಾತ್ರದಲ್ಲಿರುವ […]
ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

ಉಡುಪಿ: ರಾಜ್ಯದಲ್ಲಿರುವ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳಿಂದ ವಿದ್ಯಾನಿಧಿ ಯೋಜನೆಯಡಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಸೌಲಭ್ಯ ಪಡೆಯಲು ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ https://sevasindhu.karnataka.gov.in/Sevasindhu/kannada ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳ ಆಧಾರ್ ಗೆ ಜೋಡಿಸಿದ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಪದ್ಧತಿ ಮೂಲಕ ಪಾವತಿಸಲಾಗುವುದು. ರಾಜ್ಯದ ಯಾವುದೇ ಪ್ರಾದೇಶಿಕ ಅಥವಾ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮೋಟಾರು ಕ್ಯಾಬ್ […]
ಕೆ.ಎಂ.ಸಿ ಆಸ್ಪತ್ರೆ ವತಿಯಿಂದ “ಯುವೈಟಿಸ್ ಪೇ ಚರ್ಚಾ” ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಮಣಿಪಾಲ: ನೇತ್ರಶಾಸ್ತ್ರ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಾಹೆ, ಯುವೈಟಿಸ್ ಸೊಸೈಟಿ ಆಫ್ ಇಂಡಿಯಾ, ಕರ್ನಾಟಕ ಆಫ್ತಾಲ್ಮಿಕ್ ಸೊಸೈಟಿ (KOS) ಆಶ್ರಯದಲ್ಲಿ ಉಡುಪಿ ಜಿಲ್ಲಾ ಆಫ್ತಾಲ್ಮಿಕ್ ಸೊಸೈಟಿ (UDOS) ಸಹಯೋಗದೊಂದಿಗೆ ಕೆಎಂಸಿ, ಮಣಿಪಾಲದ ಇಂಟರಾಕ್ಟ್ ಸಭಾಂಗಣದಲ್ಲಿ ಫೆ. 26 ರಂದು “ಯುವೈಟಿಸ್ ಪೇ ಚರ್ಚಾ” ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ನಡೆಯಿತು. ಕೆಎಂಸಿ ಆಸ್ಪತ್ರೆಯ ಡೀನ್ ಡಾ.ಪದ್ಮರಾಜ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೋಗಿಗಳ ಆರೈಕೆಯನ್ನು ಸುಧಾರಿಸುವಲ್ಲಿ ಉಪವಿಭಾಗಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು […]