ಹಿರಿಯ ಕಲಾವಿದ ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ ಕಾರ್ಯಕ್ರಮ

ಉಡುಪಿ: ಹಿರಿಯ ಸಾಹಿತಿ, ಶಿಕ್ಷಕ, ಹರಿದಾಸ,ಜಿನದಾಸ, ಅರ್ಥಧಾರಿ, ಕಲಾವಿದ, ನಾಟಕಕಾರ ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ ಕಾರ್ಯಕ್ರಮವು ಫೆ.27 ರಂದು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಮಾತನಾಡಿ, ಅಂಬಾತನ ಮುದ್ರಾಡಿಯವರೊಂದಿಗೆ ಕಳೆದ ದಿನಗಳು ಸ್ಮರಣೀಯವಾದುದು. ಧರ್ಮರಾಯ, ವಿದುರ, ಅಕ್ರೂರ ಮುಂತಾದ ಸಾತ್ವಿಕ ಪಾತ್ರಗಳನ್ನು ಅಂಬಾತನಯರು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದರು. ಅಂಬಾತನಯರಂತಹ ಸರಳ, ಸಜ್ಜನಿಕೆಯ ಸಾತ್ವಿಕ ವ್ಯಕ್ತಿಗಳನ್ನು ತಾನು ಕಂಡದ್ದು ವಿರಳ. ತೀವ್ರ ಅನಾರೋಗ್ಯದ ನಡುವೆಯೂ ಯಕ್ಷಗಾನ ಸಮ್ಮೇಳನದಲ್ಲಿ […]

ಉಡುಪಿ-ಚಿಕ್ಕಮಗಳೂರು ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸಿದ ರೈಲ್ವೆ ಇಲಾಖೆ: ವಿಭಿನ್ನ ರೈಲುಗಳಿಗೆ ನಿಲುಗಡೆ ನೀಡಿ ಆದೇಶ

ಉಡುಪಿ: ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಭಾಗದ ಜನರ ಬಹುದಿನದ ಬೇಡಿಕೆಯನ್ನು ರೈಲ್ವೆ ಇಲಾಖೆ ಈಡೇರಿಸಿದೆ. ಈ ಕೆಳಗಿನ ರೈಲುಗಳ ನಿಲುಗಡೆಗೆ ಬಹುದಿನಗಳಿಂದ ಜನರ ಬೇಡಿಕೆಯಿದ್ದು ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರದ ರೈಲ್ವೆ ಸಚಿವರಿಗೆ ಪತ್ರ ಬರೆದು ಸಭೆ ನಡೆಸಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಕೆಳಗಿನ ರೈಲುಗಳಿಗೆ ಕೆಳಕಂಡ […]

ಮಾ.1 ರಿಂದ 7 ರವರೆಗೆ ಮುನಿಯಾಲ್ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ

ಮಣಿಪಾಲ: ಮುನಿಯಾಲು ಆಯುರ್ವೇದ ಆಸ್ಪತ್ರೆ ವತಿಯಿಂದ ಮಾ.1 ರಿಂದ 7 ರವರೆಗೆ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಶಿವಳ್ಳಿ ಕೈಗಾರಿಕಾ ಕ್ಷೇತ್ರದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಕಾಯಚಿಕಿತ್ಸಾ ವಿಭಾಗ ನೋವು ನಿವಾರಕ ಆರೋಗ್ಯ ಚಿಕಿತ್ಸಾ ಶಿಬಿರ-ವೇದನಾಹರ ಕಲ್ಪವನ್ನು ಆಯೋಜಿಸಲಾಗಿದೆ. ಶಿಬಿರದ ಪ್ರಯೋಜನಗಳು: # ಉಚಿತ ತಪಾಸಣೆ # ಪಂಚಕರ್ಮ, ಲ್ಯಾಬ್ ಪರೀಕ್ಷೆ, ಎಕ್ಸ್ ರೇ, ಇಸಿಜಿ ಮುಂತಾದ ಪರೀಕ್ಷೆಗಳಿಗೆ ಶೇ 50 ರಿಯಾಯಿತಿ # ಔಷಧಿಗಳ ಮೇಲೆ ಶೇ 10 ರಿಯಾಯತಿ # […]

ಬ್ರಹ್ಮಾವರ: ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ

ಉಡುಪಿ: ಬ್ರಹ್ಮಾವರದಲ್ಲಿ ನರ್ಸಿಂಗ್ ವ್ಯಾಸಾಂಗ ಮಾಡುತ್ತಿದ್ದ ಕುಂದಾಪುರ ತಾಲೂಕು ಕೆರಾಡಿ ಗ್ರಾಮದ ನಿವಾಸಿ, ಭೂಮಿಕಾ (18) ಎಂಬ ಯುವತಿಯು ಪೆಬ್ರವರಿ 26 ರಂದು ಕೆರಾಡಿಯ ತನ್ನ ಮನೆಯಿಂದ ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂ. (08254) 258233, 9480805460 , ಬೈಂದೂರು […]

ಬ್ರಹ್ಮಾವರ: ವಿದ್ಯುನ್ಮಾನ ಮತಯಂತ್ರ ಬಳಕೆ ಅರಿವು ಕಾರ್ಯಗಾರ

ಬ್ರಹ್ಮಾವರ: ಕರ್ನಾಟಕ ಸರ್ಕಾರ ಕಂದಾಯ ಇಲಾಖೆ, ತಹಶೀಲ್ದಾರ್ ಕಚೇರಿ ಉಡುಪಿ ತಾಲೂಕು, ರಾಷ್ಟ್ರೀಯ ಸೇವಾ ಯೋಜನೆ ಘಟಕ, ರಾಜ್ಯಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ ಎಸ್ಎಮ್ಎಸ್ ಕಾಲೇಜು ಬ್ರಹ್ಮಾವರ ಇದರ ಸಹಯೋಗದೊಂದಿಗೆ ವಿದ್ಯುನ್ಮಾನ ಮತಯಂತ್ರದ ಅರಿವು ಕಾರ್ಯಗಾರವು ಫೆ.28 ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಕಾರ್ಯಾಗಾರದಲ್ಲಿ ಸೆಕ್ಟರ್ ಅಧಿಕಾರಿಯಾಗಿದ್ದ ಡಾ. ಗುರುರಾಜ್ ಪ್ರಭು, ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಉಡುಪ, ಉಪನ್ಯಾಸಕ ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.