ಗೃಹ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳ ದಿಂದ ಗೃಹಿಣಿಯರ ಕಣ್ಣಲ್ಲಿ ನೀರು: ವೆರೋನಿಕಾ ಕರ್ನೇಲಿಯೋ ಆಕ್ರೋಶ
ಮತ್ತೊಮ್ಮೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸುವುದರ ಮೂಲಕ ಗೃಹಿಣಿಯರ ಕಣ್ಣಲ್ಲಿ ನೀರು ತರಿಸುವಂತಹ ಪಾಪದ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ಮಾಡಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿಯವರ ಅಚ್ಚೇ ದಿನದ ಪರಿಣಾಮ ಗೃಹಬಳಕೆಯ ಸಿಲಿಂಡರ್ ಬೆಲೆ ಸಾವಿರದ ಗಡಿ ದಾಟಿ ಹೋಗಿದೆ. ಈಗ ಮತ್ತೊಮ್ಮೆ 50 ರೂ ಹೆಚ್ಚಳ ಮಾಡುವುದರ ಮೂಲಕ ಚುನಾವಣೆಯ ಸಮಯದಲ್ಲಿ ಮತ್ತೆ ರೂ 25 ಕಡಿಮೆ ಮಾಡುವ ನಾಟಕ ಮಾಡುತ್ತಾರೆ. ಕೇಂದ್ರದ ಉಜ್ವಲಾ […]
ಹೆಗ್ಗುಂಜೆ ಡಾ.ಸುರೇಶ್ಚಂದ್ರ ಶೆಟ್ಟಿ ನಿಧನ
ಹೆಗ್ಗುಂಜೆ: ಮಂಗಳವಾರ ಮಧ್ಯರಾತ್ರಿ 12.30 ಗಂಟೆಗೆ ಡಾ. ಸುರೇಶ್ಚಂದ್ರ ಶೆಟ್ಟಿ ಇವರು ನಿಧನರಾಗಿದ್ದಾರೆ. ಸುತ್ತಮುತ್ತ ನಾಲ್ಕು ಗ್ರಾಮಗಳಲ್ಲಿ ವೈದ್ಯಕೀಯ ವೃತ್ತಿಯಿಂದ ಮನೆಮಾತಾಗಿದ್ದ ಇವರು ಜನರಿಗೆ ಉತ್ತಮ ಸೇವೆ ನೀಡಿದ್ದಾರೆ. ತನ್ನ ಅನಾರೋಗ್ಯವನ್ನೂ ಲೆಕ್ಕಿಸದೆ ಮಧ್ಯರಾತ್ರಿ ಹೊತ್ತಿನಲ್ಲೂ ರೋಗಿಗಳ ಮನೆಗೆ ತೆರಳಿ ಸೇವೆಯನ್ನು ನೀಡಿರುತ್ತಾರೆ. ಸೇವೆಗೆ ಪ್ರಚಾರ ಬಯಸದ ಇವರು ಹಲವಾರು ಸನ್ಮಾನಗಳನ್ನು ಕೂಡಾ ನಿರಾಕರಿಸಿದ್ದಾರೆ.
ಜೆ.ಇ.ಇ.ಮೈನ್-ಬಿ.ಆರ್ಕ್ ಫಲಿತಾಂಶ: ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ
ಕಾರ್ಕಳ :ರಾಷ್ಟ್ರಮಟ್ಟದಲ್ಲಿಎನ್.ಟಿ.ಎ ನಡೆಸಿದ ಜೆ.ಇ.ಇ ಮೈನ್ – ಬಿ.ಆರ್ಕ್ ಪರೀಕ್ಷೆಯಲ್ಲಿಗಣಿತನಗರದ ಕಾರ್ಕಳ ಜ್ಞಾನಸುಧಾ ಪಿ.ಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್, 6 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೀಕಾಂತ್.ಎಚ್. 99.64 ಪರ್ಸಂಟೈಲ್ ಹಾಗೂ ಚಮನ್ ಡಿ.ಪಿ 99.32 ಪರ್ಸಂಟೈಲ್ ಗಳಿಸುವುದರ ಜೊತೆಗೆ, ಸೂರ್ಯ ವಿ. 96.67 ಅಖಿಲ್ ದಯಾನಂದ ನಾಯಕ್ 92.22 ಶ್ರೀರಾಮ್ ಗಜಾನನ ಪಟಗಾರ್ 92.22 ಅಮೋಘ ಎಸ್.ಆರ್.91.84 ಪರ್ಸಂಟೈಲ್ ಗಳಿಸಿದ್ದಾರೆ. ಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್ […]
ಏಪ್ರಿಲ್ 1 ರಿಂದ ಸರ್ಕಾರಿ ನೌಕರರರಿಗೆ ಶೇ.17ರಷ್ಟು ಮಧ್ಯಂತರ ಪರಿಹಾರ ಮಂಜೂರು: ಆದೇಶ ಹೊರಡಿಸಿದ ಸರ್ಕಾರ
ಬೆಂಗಳೂರು: ಸರ್ಕಾರಿ ನೌಕರರ ವೇತನ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು,ಪ್ರಸಕ್ತ ವರ್ಷದ ಏಪ್ರಿಲ್ 1ರಿಂದ ನೂತನ ಆದೇಶ ಜಾರಿಯಾಗಲಿದೆ. ಸರ್ಕಾರದ ಆದೇಶದಲ್ಲಿ 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇಕಡಾ 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲಾಗಿದೆ. ರಾಜ್ಯದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಚರ್ಚಿಸಿದ […]
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡಲು ಲಂಡನ್ ಗೆ ತೆರಳಿದ ರಾಹುಲ್ ಗಾಂಧಿ
ನವದೆಹಲಿ: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡುವ ಮುನ್ನ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯ ಬಳಿಕ ಮೊದಲ ಬಾರಿಗೆ ತಮ್ಮ ಕೂದಲು ಮತ್ತು ಗಡ್ಡವನ್ನು ಟ್ರಿಮ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ನಾಯಕ ಮಂಗಳವಾರ ಲಂಡನ್‌ಗೆ ಬಂದಿಳಿದಿದ್ದು, ತಮ್ಮ ಒಂದು ವಾರದ ಪ್ರವಾಸದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಲಿದ್ದಾರೆ. ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್‌ನ (ಕೇಂಬ್ರಿಡ್ಜ್ ಜೆಬಿಎಸ್) ವಿಸಿಟಿಂಗ್ ಫೆಲೋ ಆಗಿರುವ ರಾಹುಲ್ ಗಾಂಧಿ “ಲರ್ನಿಂಗ್ ಟು ಲಿಸನ್ ಇನ್ […]