ಶಿವಪಾಡಿ: ಅತಿರುದ್ರಮಹಾಯಾಗದಲ್ಲಿ ತೇಜಸ್ವಿ ಸೂರ್ಯ ಹಾಗೂ ಅಣ್ಣಾಮಲೈ ಭಾಗಿ
ಶಿವಪಾಡಿ: ಇಲ್ಲಿನ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ. 22 ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ, ಆರನೇ ದಿನವಾದ ಫೆ. 27, ಸೋಮವಾರದಂದು, ಮುಂಜಾನೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಋತ್ವಿಜರಿಂದ ಸಪ್ತಶತೀ ಪಾರಾಯಣ, ಮಹಾಮೃತ್ಯುಂಜಯ ಹೋಮ ನೆರವೇರಿತು. ಅತಿರುದ್ರ ಮಹಾಯಾಗದಂದು ಬೆಳಗ್ಗೆ ಸಚಿವ ವಿ. ಸುನೀಲ್ ಕುಮಾರ್ ಆಗಮಿಸಿದ್ದು, ಮಧ್ಯಾಹ್ನ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಶ್ರೀ […]
ಕಟಪಾಡಿ ಕಂಬಳದಲ್ಲಿ ಪ್ರಥಮ ಸ್ಥಾನ ಪಡೆದ ಅಚ್ಚಡ ಸುಪ್ರಸಾದ ವಸಂತ ಶೆಟ್ಟಿಯವರ ಕೋಣ
ಕಟಪಾಡಿ: ಇತಿಹಾಸ ಪ್ರಸಿದ್ದ ಕಟಪಾಡಿ ಕಂಬಳದಲ್ಲಿ ಭಾಗವಹಿಸಿದ ಅಚ್ಚಡ ಸುಪ್ರಸಾದ ವಸಂತ ಶೆಟ್ಟಿಯವರ ಕೋಣವು ನೇಗಿಲ ಹಿರಿಯ ವಿಭಾಗದಲ್ಲಿ 84 ಜೋಡಿ ಕೋಣಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಕೋಣವನ್ನು ರಾಜ್ಯ ಪ್ರಶಸ್ತಿ ವಿಜೇತ ಮಿಜಾರು ಅಶ್ವತ್ಥಪುರ ಶ್ರೀನಿವಾಸ್ ಗೌಡ ಓಡಿಸಿದ್ದು, ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಮಾರ್ಚ್ 5 ರಂದು ಕಾಪುವಿನಲ್ಲಿ ಫಲಾನುಭವಿ ಸವಲತ್ತು ವಿತರಣೆಯ ಬೃಹತ್ ಸಮ್ಮೇಳನ: ಎಸ್.ಅಂಗಾರ
ಉಡುಪಿ : ಜಿಲ್ಲೆಯಲ್ಲಿ ಸರಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ನೇರವಾಗಿ ವಿತರಿಸಲು ಜಿಲ್ಲಾ ಮಟ್ಟದ ಫಲಾನುಭವಿಗಳ ಬೃಹತ್ ಸಮ್ಮೇಳನವನ್ನು ಮಾರ್ಚ್ 5 ರಂದು ಕಾಪು ಕ್ಷೇತ್ರದಲ್ಲಿ ಆಯೋಜಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ ನೀಡಿದರು. ಅವರು ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ […]
ವಿವಿಧೆಡೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಾಗಿ ಅರ್ಜಿ ಆಹ್ವಾನ
ಉಡುಪಿ: ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನೆಯ ಗ್ರಾಮ ಪಂಚಾಯತ್, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಾದ ಶಿವಾನಂದನಗರ (ಸಾಮಾನ್ಯ), ಹೆಜಮಾಡಿ ಬೋರುಗುಡ್ಡೆ (ಸಾಮಾನ್ಯ), ಕಾಜರಗುತ್ತು (ಸಾಮಾನ್ಯ), ಧರ್ಮೆಟ್ಟು (ಸಾಮಾನ್ಯ) ಮತ್ತು ಮಣಿಪುರ ವಿ.ಪಿ (ಸಾಮಾನ್ಯ) ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ಪಿ.ಯು.ಸಿ ತೇರ್ಗಡೆ ಹೊಂದಿರುವ, ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಹಾಗೂ ಅದಮಾರು (ಸಾಮಾನ್ಯ), ಶಿವಾನಂದನಗರ (ಸಾಮಾನ್ಯ), […]
ಲಯನ್ ಹರಿಪ್ರಸಾದ್ ರೈ “ಲಯನ್ ಆಫ್ ದ ಇಯರ್”
ಉಡುಪಿ: ಫೆ 25 ರಂದು ಬ್ರಹ್ಮಗಿರಿ ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾಧ್ಯಕ್ಷರ ಭೇಟಿ ಕಾರ್ಯಕ್ರಮವು ಉದ್ಯಾವರ ಬಲಾಯಿಪಾದೆ ನಿತ್ಯಾನಂದ ಆರ್ಕೆಡ್ ನಲ್ಲಿ ನಡೆಯಿತು. ಮಾಜಿ ಜಿಲ್ಲಾ ಗವರ್ನರ್ ಗಳ ಮಾಸಿಕದಂದು ಆರು ಮಂದಿ ಮಾಜಿ ಜಿಲ್ಲಾ ಗವರ್ನರ್ ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಂತೀಯ ಅಧ್ಯಕ್ಷ ಲಯನ್ ಹರಿಪ್ರಸಾದ್ ರೈ ಅವರನ್ನು “ಲಯನ್ ಆಫ್ ದ ಇಯರ್” ಎಂದು ಕ್ಲಬ್ಬಿನ ಅಧ್ಯಕ್ಷ ಲಯನ್. ಉಮೇಶ್ ನಾಯಕ್ ಘೋಷಿಸಿ, ಪ್ರಾಂತೀಯ ಅಧ್ಯಕ್ಷರ ಜೊತೆಯಲ್ಲಿ ಪ್ರಾಂತೀಯ ಪ್ರಥಮ ಮಹಿಳೆ ಲಯನ್ […]