ಕಾರ್ಕಳ: ತಾಯಿ, ಮಗು ನಾಪತ್ತೆ

ಉಡುಪಿ: ಕಾರ್ಕಳ ತಾಲೂಕು ಗಣಪತಿಕಟ್ಟೆ ದಿಡಿಂಬಿರಿ ನಿವಾಸಿ ರಂಗಿತಾ (23) ಎಂಬ ಮಹಿಳೆಯು ತನ್ನ 3 ವರ್ಷದ ಮಗಳಾದ ಶಾನ್ವಿಕಾಳೊಂದಿಗೆ ಫೆಬ್ರವರಿ 18 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 150 ಸೆಂ.ಮೀ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.  

ಮೇ 11ರಂದು ಕಡಿಯಾಳಿ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ಉಪನಯನ

ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮತ್ತು ಕಡಿಯಾಳಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಇವರ ನೇತೃತ್ವದಲ್ಲಿ ಮೇ 11ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಆವರಣದಲ್ಲಿ ಸಾಮೂಹಿಕ ಉಪನಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಚಿತ ಉಪನಯನ ಸಂಸ್ಕಾರ ಬಯಸುವ ವಟುಗಳ ಪೋಷಕರು 9008190489 ಈ ಸಂಖ್ಯೆಗೆ ಸಂಪರ್ಕಿಸಬಹುದು. ಈ ಬ್ರಹ್ಮೋಪದೇಶಕ್ಕೆ ತಗಲುವ ಎಲ್ಲಾ ವೆಚ್ಚವು ಸಂಪೂರ್ಣ ಉಚಿತವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಣಿಯವರ ದ್ವಿತೀಯ ಮಗನಾದ ರಚಿತ್ ಕಿಣಿಗೂ […]

ಕೊಂಕಣಿ ಲೇಖಕ ಸಂಘದಿಂದ ಶ್ರೀಮತಿ ಐರಿನ್ ಪಿಂಟೋರವರಿಗೆ ಪ್ರಶಸ್ತಿ ಪ್ರದಾನ

ಮಂಗಳೂರು: ಖ್ಯಾತ ಲೇಖಕಿ ಶ್ರೀಮತಿ ಐರಿನ್ ಪಿಂಟೋ ಇವರಿಗೆ ಕೊಂಕಣಿ ಲೇಖಕ ಸಂಘವು ಕೊಂಕಣಿ ಸಾಹಿತ್ಯ ಪ್ರಶಸ್ತಿ 2023 ನೀಡಿ ಗೌರವಿಸಿದೆ. ಫೆ. 25 ರಂದು ನಂತೂರಿನ ಬಜ್ಜೋಡಿ ಸಂದೇಶ ಪ್ರತಿಷ್ಠಾನದ ಸಂದೇಶ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಮುಖ್ಯ ಅತಿಥಿಯಾಗಿ ರಾಕ್ಣೋ ವಾರಪತ್ರಿಕೆಯ ಮಾಜಿ ಸಂಪಾದಕ ರೆ.ಫ್ರಾನ್ಸಿಸ್ ರೊಡ್ರಿಗಸ್ ಹಾಗೂ ಗೌರವ ಅತಿಥಿಯಾಗಿ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ರಾಧಾಕೃಷ್ಣ ಬೆಳ್ಳೂರು ಭಾಗವಹಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಐರಿನ್ ಪಿಂಟೋ, ಕೊಂಕಣಿ ಲೇಖಕಿ, […]

ಮಲ್ಪೆ: ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜಟ್ಟಿ ನಿರ್ಮಿಸಲು ರೂ. 5.50 ಕೋಟಿ ಬಿಡುಗಡೆ

ಉಡುಪಿ: ಪ್ರಮುಖ ಪ್ರವಾಸಿ ತಾಣವಾದ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ಫ್ಲೋಟಿಂಗ್ ಜಟ್ಟಿ ನಿರ್ಮಿಸುವ ರೂ. 5.50 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಪ್ರಮುಖ ಕಾಮಗಾರಿ ಕೈಗೊಳ್ಳುವ ಬೇಡಿಕೆಯನ್ನು ಪೂರೈಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕ ಟೂರಿಸಂ ವಿಷನ್ ಗ್ರೂಪಿನ ಶಿಫಾರಸ್ಸುಗಳಲ್ಲಿ ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ಐಲ್ಯಾಂಡ್ ಬಳಿ ನಿರ್ಮಿಸುವ ಫೆರ್ರಿ ಜಟ್ಟಿ ನಿರ್ಮಿಸುವ ಕಾಮಗಾರಿಯನ್ನು ಪ್ರವಾಸೋದ್ಯಮ ಇಲಾಖೆಯ ಮೇಲುಸ್ತುವಾರಿಯಲ್ಲಿ, […]

ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ನೂತನ ಬ್ರಹ್ಮರಥ ಪುರಪ್ರವೇಶ

ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನಕ್ಕೆ ದಾನಿಗಳು ಸೇವಾ ರೂಪವಾಗಿ ನೀಡಿದ ನೂತನ ಬ್ರಹ್ಮರಥವು ಸೋಮವಾರ ಪುರಪ್ರವೇಶಗೊಂಡಿದೆ. ಕೋಟೇಶ್ವರದ ಶ್ರೀ ಕಾಳಿಕಾಂಬಾ ಶಿಲ್ಪಕಲಾದಿಂದ ಹೊರಟ ವೈಭವದ ಪುರ ಮೆರವಣಿಗೆಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಮತ್ತಿತರ ಗಣ್ಯರು ಚಾಲನೆ ನೀಡಿದರು. ಕೋಟೇಶ್ವರದಿಂದ ನೀಲಾವರದವರೆಗೆ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಬ್ರಹ್ಮರಥಕ್ಕೆ ವಿಶೇಷ ಪೂಜೆ ಜರಗಿತು. ನೀಲಾವರ ಕ್ರಾಸ್ ನಿಂದ ಕಾಲ್ನಡಿಗೆಯಲ್ಲಿ ವಿವಿಧ ಭಜನಾ ತಂಡಗಳೊಂದಿಗೆ, ಚಂಡೆ […]