ಫೆ 25-27 ರಂದು ಸಮಾಜ ಕಲ್ಯಾಣ ಇಲಾಖೆ ಸಚಿವರ ಪ್ರವಾಸ ಕಾರ್ಯಕ್ರಮ
ಉಡುಪಿ : ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಫೆಬ್ರವರಿ 25 ಹಾಗೂ 27 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ. 25 ರಂದು ಬೆಳಗ್ಗೆ 7.30 ರಿಂದ 8.30 ರ ವರೆಗೆ ಕೋಟ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ, ಬೆ. 10.30 ರಿಂದ ಮ. 12 ರ ವರೆಗೆ ಉಡುಪಿಯ ಸಚಿವರ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮತ್ತು […]
ಜಪ್ತಿ ಪಡಿಸಿದ ವಾಹನಗಳ ಬಹಿರಂಗ ಹರಾಜು ಪ್ರಕಟಣೆ
ಉಡುಪಿ : ಉಡುಪಿ ನಗರ ಪೊಲೀಸ್ ಠಾಣೆಗಳ ಆವರಣಗಳಲ್ಲಿ ಜಪ್ತಿಪಡಿಸಿಕೊಂಡು ನಿಲ್ಲಿಸಲಾದ ಕೆ.ಎ 20 ಎಂ.52 ಬಿಳಿ ಬಣ್ಣದ ಪಿಯೆಟ್ ಪದ್ಮಿನಿ ಕಾರು, ಕೆ.ಎ 19 ಏಸ್ 7866 ಯುನಿಕಾರ್ನ್ ಬೈಕ್, ಕೆ.ಎ 09 ಝಡ್ 5252 ಮಾಟಿಜ್ ಕಾರು, ಕೆ.ಎ 13 ಎಮ್ 443 ಮಾರುತಿ ಜೆನ್ ಕಾರು, ಕೆ.ಎ 29 ಕ್ಯೂ 9341 ಬಜಾಜ್ ಎಕ್ಸಿಡ್ ಮೋಟಾರ್ ಸೈಕಲ್, ಕೆ.ಎ 20 5897 ಆಟೋರಿಕ್ಷಾ, ಕೆ.ಎ 19 ಇ.ಬಿ 4096 ಮತ್ತು ಕೆ.ಎ 20 […]
ಫೆ. 28 ರಂದು ವಿದ್ಯುತ್ ವ್ಯತ್ಯಯ
ಉಡುಪಿ: 33/11 ಕೆ.ವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ ರೀ-ಕಂಡಕ್ಟರಿಂಗ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಸದರಿ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳು, ಉಳಿಯಾರಗೋಳಿ, ಬಂಟಕಲ್ಲು, ಮೂಡಬೆಟ್ಟು, ಪಾಂಗಳ, ಶಿರ್ವ ಹಾಗೂ ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಮಟ್ಟಾರು, ಪದವು, ಪಾಂಬೂರು, ಪಿಲಾರು ಖಾನ, ಪೆರ್ನಾಲು, ಕುತ್ಯಾರು, ಪುಂಚಲಕಾಡು, ಕಳತ್ತೂರು, ಚಂದ್ರನಗರ, ಮಲ್ಲಾರು, ಪೊಲಿಪು, ಕೊಪ್ಪಲಂಗಡಿ, ಪಣಿಯೂರು, ಕಾಪು ಬಡಾ ಗ್ರಾಮ(ಉಚ್ಚಿಲ), ಮೂಳೂರು, ಬೆಳಪು, ಅಬ್ಬೇಟ್ಟು, ಪಾದೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೆಬ್ರವರಿ 28 […]
ಕುಂದಾಪುರ: ಅಕ್ರಮ ಮರಳುಗಾರಿಕೆ ಧಕ್ಕೆಗೆ ದಾಳಿ; 2 ಟಿಪ್ಪರ್ ವಶ
ಕುಂದಾಪುರ: ತಾಲೂಕಿನ ಶಂಕರನಾರಾಯಣ ವ್ಯಾಪ್ತಿಯ ಭರತ್ಕಲ್ ಎಂಬಲ್ಲಿ ವಾರಾಹಿ ನದಿಯಿಂದ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ಬಂದ ಹಿನ್ನೆಲೆ, ಇಲಾಖೆಯ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ.ಯು ಮಾರ್ಗದರ್ಶನದಲ್ಲಿ ಭೂವಿಜ್ಞಾನಿ ಸಂಧ್ಯಾ ಅವರು ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿ ಮರಳು ಧಕ್ಕೆಯಲ್ಲಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ವಹಿಸುವವರೆಗೆ ಮರಳು ಸಾಗಾಣಿಕೆಗೆ ಬಳಸುತ್ತಿದ್ದ 2 ಲಾರಿ ಹಾಗೂ […]
ಜರ್ಮನಿಯಲ್ಲಿ 1.5 ವರ್ಷದ ಮಗುವಿಗಾಗಿ ಮೊರೆಯಿಡುತ್ತಿರುವ ಭಾರತೀಯ ದಂಪತಿಗಳು: ಟ್ವಿಟರ್ ನಲ್ಲಿ ಬಾಯ್ ಕಾಟ್ ಜರ್ಮನಿ ಟ್ರೆಂಡ್
ರ್ಲಿನ್: ಅಹಮದಾಬಾದ್ ಮೂಲದ ಪೋಷಕರಾದ ಭಾವೇಶ್ ಮತ್ತು ಧಾರಾ ಶಾ ಕಳೆದ 1.5 ವರ್ಷದಿಂದ ತಮ್ಮ ಮಗಳು ಅರಿಹಾ ನನ್ನು ವಾಪಾಸು ಕೊಡುವಂತೆ ಜರ್ಮನಿ ಸರಕಾರವನ್ನು ಅಂಗಲಾಚುತ್ತಿದ್ದಾರೆ. ಆದರೆ, ಅಲ್ಲಿನ ಮಕ್ಕಳ ರಕ್ಷಣಾ ಸಂಸ್ಥೆಯು ಪೋಷಕರಿಂದ ಮಗುವನ್ನು ಬಲವಂತವಾಗಿ ಕಿತ್ತುಕೊಂಡು ಪ್ರಕರಣವಿಲ್ಲದಿದ್ದರೂ ಮಗುವನ್ನು ಹಿಂತಿರುಗಿಸದೆ ದಿನದೂಡುತ್ತಿದೆ. ಅರಿಹಾ ತಂದೆ ಕೆಲಸದ ವೀಸಾದಲ್ಲಿ ಯುರೋಪಿಯನ್ ರಾಷ್ಟ್ರವಾದ ಜರ್ಮನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅರಿಹಾಳ ಅಜ್ಜಿ 2021ರ ಸೆಪ್ಟೆಂಬರ್‌ನಲ್ಲಿ ಆಕಸ್ಮಿಕವಾಗಿ ಮಗುವಿಗೆ ನೋವುಂಟು ಮಾಡಿದ್ದರು ಎನ್ನುವ ಕಾರಣಕ್ಕೆ […]