ಮಂಗಳೂರು: ಕುಲದೀಪ್ ಕುಮಾರ್ ಆರ್ ಜೈನ್ ನೂತನ ಪೊಲೀಸ್ ಕಮಿಷನರ್
ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಶಶಿ ಕುಮಾರ್ ಬದಲಿಗೆ ಕುಲದೀಪ್ ಕುಮಾರ್ ಆರ್ ಜೈನ್ ಐಪಿಎಸ್ (ಕೆಎನ್-2011) ನೂತನ ಕಮಿಷನರ್ ಆಗಿ ನೇಮಕಗೊಳ್ಳಲಿದ್ದಾರೆ. ಕುಲದೀಪ್ ಕುಮಾರ್ ಆರ್ ಜೈನ್ ಪ್ರಸ್ತುತ ಬೆಂಗಳೂರು ನಗರ ಸಂಚಾರ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಅವರನ್ನು ವರ್ಗಾವಣೆ ಮಾಡಿ ಫೆ.23ರಂದು ಅಧಿಕೃತ ಆದೇಶ ಹೊರಡಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ರೈಲ್ವೇ ಉಪ […]
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಿಂದ ಜಗನ್ನಾಥ ಭವನ ಭೇಟಿ
ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಇಂದು ಕರ್ನಾಟಕದ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಗಳಾದ ಮನ್ ಸುಖ್ ಮಾಂಡವೀಯ ಹಾಗೂ ಕೆ. ಅಣ್ಣಾಮಲೈ ಭೇಟಿ ನೀಡಿ, ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ಜಗನ್ನಾಥ್ ರಾವ್ ಜೋಷಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಜಿ.ವಿ ಮುಂತಾದವರು ಉಪಸ್ಥಿತರಿದ್ದರು.
ಆರೋಗ್ಯ ಭಾರತಿ ರಾಷ್ಟ್ರೀಯ ಅಧ್ಯಕ್ಷರಿಂದ ಎಸ್.ಡಿ.ಎಂ ಆಯುರ್ವೇದ ಕಾಲೇಜಿಗೆ ಭೇಟಿ
ಉಡುಪಿ: ಆರೋಗ್ಯ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾ. ರಾಕೇಶ ಪಂಡಿತ್ ಇವರು ಬುಧವಾರ ಉಡುಪಿ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿಗೆ ಭೇಟಿ ನೀಡಿದರು. ಆರೋಗ್ಯ ಭಾರತಿಯ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಸದಾಶಿವಜೀ ಮತ್ತು ಮಂಗಳೂರು ವಿಭಾಗ ಸಂಯೋಜಕ್ ಪುರುಷೋತ್ತಮ ಗೌಡ ದೇವಸ್ಯ, ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಭಟ್, ಸಹ ಕಾರ್ಯದರ್ಶಿ ಕೃಷ್ಣರಾಜ ಸಾಮಗ ಮತ್ತು ಡಾ. ಸದಾನಂದ ಭಟ್ ಉಪಸ್ಥಿತರಿದ್ದರು. ಅತಿಥಿಗಳನ್ನು ಮೆಡಿಕಲ್ ಸುಪರಿಡೆಂಟ್ ನಾಗರಾಜ್ ಎಸ್ […]
ಫೆಬ್ರವರಿ 27 ರಂದು ಸಿ.ಆರ್.ಝಡ್ ಕಾಯ್ದೆ ಕುರಿತು ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ
ಉಡುಪಿ: ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಝಡ್) ಕಾಯ್ದೆಯ ಕುರಿತು ಜಿಲ್ಲೆಯ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮವು ಫೆಬ್ರವರಿ 27 ರಂದು ಮಧ್ಯಾಹ್ನ 3.30 ಕ್ಕೆ ನಗರದ ಮಣಿಪಾಲ ಶಿವಳ್ಳಿ ಕೈಗಾರಿಕಾ ಪ್ರದೇಶದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನಡೆಯಲಿದ್ದು, ಕರಾವಳಿ ನಿಯಂತ್ರಣ ವಲಯದ ಜಿಲ್ಲಾ ಪ್ರಾದೇಶಿಕ ನಿರ್ದೇಶಕರು (ಪರಿಸರ) ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಕೈಗಾರಿಕೋದ್ಯಮಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ದೂ: 9448623952 […]
ಶಿವಪಾಡಿ: ಅತ್ರಿರುದ್ರಮಾಹಾಯಾಗದ ಇಂದಿನ ಧಾರ್ಮಿಕ ಸಭಾ ಕಾರ್ಯಕ್ರಮಗಳು
ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನ ಅತಿರುದ್ರಮಹಾಯಾಗದ ಪ್ರಯುಕ್ತ ಫೆ.22 ರಿಂದ 12 ದಿನಗಳ ಕಾಲ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಜೆ 5 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಫೆ.23 ರಂದು ಸಂಜೆ 5 ರಿಂದ ಬಾಲವಾಗ್ಮಿ ಕು.ಹಾರಿಕಾ ಮಂಜುನಾಥ್ ಇವರಿಂದ ಉಪನ್ಯಾಸ ಹಾಗೂ ಸಂಜೆ 7 ರಿಂದ ವಿದುಷಿ ಉಮಾಶಂಕರಿ ಮತ್ತು ಬಳಗದವರಿಂದ ಭಕ್ತಿ ಸಂಗೀತ, ಆಬಳಿಕ ಶ್ರೀಮತಿ ಪ್ರತಿಮಾ ಕೋಡೂರು ಮತ್ತು ಬಳಾಗದವರಿಂದ ದಕ್ಷಯಜ್ಞ ಹರಿಕಥಾ ವಾಚನ ನಡೆಯಲಿದೆ. ಫೆ.24 […]