ಶಿವಪಾಡಿ: ಅತಿರುದ್ರ ಮಹಾಯಾಗದಲ್ಲಿ ವಾರಣಾಸಿಯ ಗಂಗಾರತಿಯ ಮಾದರಿ ಶಿವಾರತಿ

ಶಿವಪಾಡಿ: ಇಲ್ಲಿನ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ 22 ರಿಂದ ಮಾರ್ಚ್ 05 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯು ಮಂಗಳವಾರದಂದು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಮಾತನಾಡಿ , 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನಗಳ ಕಾಲ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಆಗಮಿಸಲಿರುವ 180 ಋತ್ವಿಜರ ವಾಸ್ತವ್ಯಕ್ಕಾಗಿ “ಈಶಾವಾಸ್ಯಾಂ” ವಸತಿ ಗೃಹ ರಚನೆಯಾಗಿದೆ. ಈ […]