ಚಿಕ್ಕಮಗಳೂರು: ಬದಲಾವಣೆ ಸಂಕಲ್ಪ ಯಾತ್ರೆ ಬೈಕ್ ರ‍್ಯಾಲಿ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಹೆಚ್.ಡಿ ತಮ್ಮಯ್ಯ ಅವರ ಅಭಿಮಾನಿಗಳು ಫೆ.21 ರಂದು ಮಂಗಳವಾರದಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ “ಬದಲಾವಣೆ ಸಂಕಲ್ಪ ಯಾತ್ರೆ” ಬೃಹತ್ ಬೈಕ್ ರ‍್ಯಾಲಿ ಏರ್ಪಡಿಸಿದ್ದು, ಬೆಳಗ್ಗೆ 11.30 ಕ್ಕೆ ಕರ್ತಿಕೆರೆ ಯಿಂದ ಹೊರಟು ಬೇಲೂರು ರಸ್ತೆ, ಐ.ಜಿ ರಸ್ತೆ, ಎಂ.ಜಿ ರಸ್ತೆ ಮೂಲಕ ಜಿಲ್ಲಾ ಕಾಂಗ್ರೆಸ್ ಕಛೇರಿಯನ್ನು ತಲುಪಲಿದೆ ಎಂದು ಮಾಜಿ ನಗರಸಭೆ ಅಧ್ಯಕ್ಷ ಹೆಚ್.ಡಿ ತಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟರ್ಕಿಯಲ್ಲಿ ಮತ್ತೊಮ್ಮೆ 6.4 ತೀವ್ರತೆಯ ಭೂಕಂಪ; ಹಟಾಯ್ ಪ್ರಾಂತ್ಯದಲ್ಲಿ ಕಟ್ಟಡ ಕುಸಿತ

ಹಟಾಯ್: ಎರಡು ವಾರಗಳ ಹಿಂದೆ ದೇಶವನ್ನು ಅಪ್ಪಳಿಸಿ ಬದುಕನ್ನು ನುಚ್ಚುನೂರಾಗಿಸಿದ ಭೂಕಂಪಗಳಿಂದ ನೆಲಸಮವಾದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆಯನ್ನು ಟರ್ಕಿ ಸರ್ಕಾರವು ಮುಂದುವರೆಸುತ್ತಿರುವ ಬೆನ್ನಲ್ಲೇ, ಸೋಮವಾರ ಸಂಜೆ ದೇಶದ ದಕ್ಷಿಣ ಹಟಾಯ್ ಪ್ರಾಂತ್ಯದಲ್ಲಿ ಮತ್ತೊಂದು 6.4 ತೀವ್ರತೆಯ ಕಂಪನ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ. Breaking News: Another earthquake hits Turkey-Syria border. Oh my God 😢 pic.twitter.com/iG4tZMEULu — Nation's Blogger (@EmpiresNtakor) February 20, 2023 […]

ಸಂತ ಮಂಥನದಲ್ಲಿ ಭಾಗಿಯಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ

ಉಡುಪಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಚುನಾವಣಾ ಪ್ರವಾಸ ನಿಮಿತ್ತ ಉಡುಪಿಗೆ ಆಗಮಿಸಿದ ಸಂದರ್ಭ ಶ್ರೀಕೃಷ್ಣ ದೇವರ ದರ್ಶನ ಪಡೆದು ಬಳಿಕ ಪೇಜಾವರ ಮಠದ ಸಭಾಂಗಣದಲ್ಲಿ “ಸಂತ ಮಂಥನ” ಎನ್ನುವ ಕಾರ್ಯಕ್ರಮದಲ್ಲಿ ಕರಾವಳಿ ಭಾಗದ ಅನೇಕ ಮಠಾಧೀಶರೊಂದಿಗೆ ಸಮಾಲೋಚನೆಯನ್ನು ನಡೆಸಿದರು. ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಅನೇಕ ಮಠಾಧೀಶರು ಭಾಗವಹಿಸಿದ್ದರು. ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣುಮೂರ್ತಿ ಆಚಾರ್ಯ,ಕೃಷ್ಣ ಭಟ್,ಇಂದುಶೇಖರ ಹೆಗಡೆ ಮೊದಲಾದವರು ನಡ್ಡಾರವರನ್ನು ಗೌರವದಿಂದ […]

ತ್ರಿಪದಿಗಳ ಮೂಲಕ ಬದುಕಿನ ಅರಿವು ಮೂಡಿಸಿದ ಕವಿ ಸರ್ವಜ್ಞ: ವೀಣಾ ಬಿ.ಎನ್

ಉಡುಪಿ: ಸರ್ವಜ್ಞ ಕವಿಯು ತಮ್ಮ ತ್ರಿಪದಿಗಳ ಮೂಲಕ ಜೀವನದ ಅನುಭವ ಕಲಿಸಿಕೊಟ್ಟು, ಬದುಕಿನ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು. ಅವರು ಸೋಮವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ನಡೆದ ಕವಿ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ, ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು. ಸಮಾಜದ ಜ್ಞಾನವನ್ನು ಅರಿತವನು. […]

ಹಿರಿಯ ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ವಿಧಿವಶ

ಉಡುಪಿ: ಖ್ಯಾತ ಸಾಹಿತಿ, ಕವಿ, ಹರಿದಾಸ, ತಾಳಮದ್ದಳೆ ಅರ್ಥದಾರಿ, ಯಕ್ಷಗಾನ ಕಲಾವಿದ ಅಂಬಾತಯ ಮುದ್ರಾಡಿ ವಿಧಿವಶರಾಗಿದ್ದಾರೆ. ರಾಜ್ಯೋತ್ಸವ ಹಾಗೂ ಪಾರ್ತಿಸುಬ್ಬ ಪ್ರಶಸ್ತಿಪುರಸ್ಕೃತರಾಗಿದ್ದ ಮುದ್ರಾಡಿಯವರು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿಯವರು. ಕಲೆ ಮತ್ತು ಸಾಹಿತ್ಯ ರಂಗದ ಹಲವು ಪ್ರಕಾರಗಳಲ್ಲಿ ಸೇವೆ ಸಲ್ಲಿಸಿರುವ ಅಂಬಾತನಯ ಮುದ್ರಾಡಿ (88) ಮಂಗಳವಾರ ಮುಂಜಾನೆ ಎಲ್ಲರನ್ನೂ ಅಗಲಿದ್ದಾರೆ. ಇತ್ತೀಚೆಗಷ್ಟೇ ಉಡುಪಿಯಲ್ಲಿ ನಡೆದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಐವರು ಪುತ್ರಿ, ಅಪಾರ ಶಿಷ್ಯ ವೃಂದ […]