ಉಡುಪಿ: ಫೆ. 21 ರಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಬೂತ್ ಅಧ್ಯಕ್ಷರ ಸಭೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 226 ಬೂತ್‌ಗಳಿದ್ದು, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಯಲ್ಲಿ ಸುಮಾರು 132 ಬೂತ್‌ಗಳಿವೆ. ಈ 132 ಬೂತ್‌ಗಳಿಗೆ ಬೂತ್ ಲೆವೆಲ್ ಏಜೆಂಟ್-2 (B.L.A-2) ಈಗಾಗಲೇ ಆಯ್ಕೆಯಾಗಿದ್ದು 132 ಬೂತ್‌ಗಳ B.L.A-2 ಮತ್ತು ಬೂತ್ ಅಧ್ಯಕ್ಷರ ಸಭೆಯನ್ನು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಫೆ. 21 ರಂದು ಸಂಜೆ 3.00 ಗಂಟೆಗೆ ಕರೆಯಲಾಗಿದೆ. ಈ ಸಭೆಯಲ್ಲಿ ಲೋಕಸಭಾ ಸದಸ್ಯ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಸ್ತುವಾರಿ ಪ್ರತಾಪನ್ನ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, […]

ಮಣಿಪಾಲ: ತಿರುಮಲೇಶರನ್ನು ತಿಳಿಯೋಣ- ಒಂದು ನೆನಪು ಕಾರ್ಯಕ್ರಮ

ಮಣಿಪಾಲ: ಹೆಸರಾಂತ ಕವಿ-ವಿಮರ್ಶಕ-ಲೇಖಕ ಪ್ರೊ.ಕೆ.ವಿ.ತಿರುಮಲೇಶ್ ಅವರು ವಾಸ್ತವಿಕ ಪ್ರಪಂಚ ಮತ್ತು ಪ್ರಜ್ಞಾ ಪ್ರಪಂಚದ ನಡುವಿನ ಕೊಂಡಿಯಾಗಿರುವ ಭಾಷೆಯ ಬಗ್ಗೆ ಅತೀವ ಕಾಳಜಿ ವಹಿಸಿದ್ದರು ಮತ್ತು ತತ್ತ್ವಶಾಸ್ತ್ರವು ಅವರ ಚಿಂತನಾ ಪ್ರಕ್ರಿಯೆಯ ಆಧಾರ ಎಂದು ಹಿರಿಯ ವಿಮರ್ಶಕರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಕೇಂದ್ರದ ಗೌರವ ನಿರ್ದೇಶಕ ಪ್ರೊ.ಎಸ್.ಆರ್.ವಿಜಯಶಂಕರ್ ಅಭಿಪ್ರಾಯಪಟ್ಟರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ನಡೆದ ‘ತಿರುಮಲೇಶರನ್ನು ತಿಳಿಯೋಣ: ಒಂದು ನೆನಪು’ ಕಾರ್ಯಕ್ರಮದಲ್ಲಿ ತಿರುಮಲೇಶ್ ಕುರಿತು ಮಾತನಾಡಿದ ಪ್ರೊ.ವಿಜಯಶಂಕರ್, […]

ಉಡುಪಿ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತರು ಬಿಜೆಪಿ ಸೇರ್ಪಡೆ

ಉಡುಪಿ: ಭಾರತೀಯ ಜನತಾ ಪಕ್ಷನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾಳಜಿಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕೆ. ರಘುಪತಿ ಭಟ್ ಅವರ ಕಾರ್ಯ ವೈಖರಿ, ಜನಪರ ಕಾಳಜಿ ಹಾಗೂ ಕ್ಷೇತ್ರದಾದ್ಯಂತ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾನುವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ದಿ. ಚಂದ್ರಕಾಂತ್ ಶಣೈ ಅವರ ಮಗ ಅಭಯ್ ಶಣೈ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ ಸೂರ್ಯಕಾಂತ್ ಭಾರತೀಯ ಜನತಾ ಪಕ್ಷದ […]

ಛತ್ರಪತಿ ಶಿವಾಜಿ ಆಡಳಿತ ಕೌಶಲ್ಯ ಎಲ್ಲರಿಗೂ ಮಾದರಿ: ವೀಣಾ. ಬಿ.ಎನ್

ಉಡುಪಿ: ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದ ಕೌಶಲ್ಯಗಳನ್ನು ಇಂದಿನ ಆಡಳಿತ ವ್ಯವಸ್ಥೆಯಲ್ಲಿಯೂ ಬಳಸಿಕೊಳ್ಳುವುದರ ಮೂಲಕ ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿದ್ದು ಅವರ ಆಡಳಿತ ಕೌಶಲ್ಯ ಸದಾ ಮಾದರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು. ಅವರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. […]

ಫೆ.22 ರಂದು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರಯಾಗ ಮಹಾಸಂಕಲ್ಪ

ಶಿವಪಾಡಿ: ಶ್ರಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.22 ರಂದು ಬೆಳಿಗ್ಗೆ 6.30 ಕ್ಕೆ ಅತಿರುದ್ರಯಾಗ ಮಹಾಯಾಗದ ಮಹಾಸಂಕಲ್ಪವು ನೂರ ಇಪ್ಪತ್ತೊಂದು ಋತ್ವಿಜರಿಂದ ಶ್ರೀ ರುದ್ರ ಪುರಶ್ಚರಣ ಪ್ರಾರಂಭವಾಗಲಿದೆ. ಶ್ರೀದೇವರಿಗೆ ನವಕ ಪ್ರಧಾನ ಹೋಮ ಪುರಸ್ಸರ ನವಕಲಶಾಭಿಷೇಕ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 12 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿ ಮಾಧುರ್ಯ ಕಾರ್ಯಕ್ರಮ, ಸಾಯಂಕಾಲ 5.30 ರಿಂದ ಧಾರ್ಮಿಕ ಉಪನ್ಯಾಸ ಕುಮಾರಿ ಅಕ್ಷಯ ಗೋಖಲೆ ಇವರಿಂದ. ಸಂಜೆ 6.30 ರಿಂದ ಯಕ್ಷಗಾನ ವೈಭವ- ರಾಘವೇಂದ್ರ ಆಚಾರ್ಯ ಸಾರಥ್ಯದಲ್ಲಿ […]